ಬೆಥನಿ ಐ.ಟಿ.ಐ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ

0

ಮಾದಕ ವ್ಯಸನ ಮುಕ್ತ ಸಮಾಜವನ್ನು ಕಟ್ಟುವಲ್ಲಿ ಕೈಜೋಡಿಸೋಣ- ರೆ. ಫಾ. ಜೈಸನ್ ಸೈಮನ್

ನೆಲ್ಯಾಡಿ : ಮಾದಕ ವ್ಯಸನ ಮುಕ್ತ ಸಮಾಜವನ್ನು ಕಟ್ಟುವಲ್ಲಿ ಕೈಜೋಡಿಸೋಣ ಎಂದು ಸಂಸ್ಥೆಯ ನಿರ್ದೇಶಕ ರೆ. ಫಾ. ಜೈಸನ್ ಸೈಮನ್ ಓ ಐ ಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಬೆಥನಿ ಐಟಿಐ ಯ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಅತಿಥಿಗಳಾಗಿ ಆಗಮಿಸಿದ ಜ್ಞಾನೋದಯ ಬೆಥನಿ ಪ. ಪೂ. ಕಾಲೇಜಿನ ಪ್ರಾಂಶುಪಾಲ ರೆ. ಡಾ. ವರ್ಗೀಸ್ ಕೈಪನಡುಕ ಓ ಐ ಸಿ ಇವರು ಮಾತನಾಡಿ ಆಯ್ಕೆಯಾದವರು ಮಾತ್ರವಲ್ಲ ಎಲ್ಲಾ ವಿದ್ಯಾರ್ಥಿಗಳು ಸ್ವತಃ ನಾಯಕರಾಗಬೇಕು. ಅವರವರ ಏಳಿಗೆಗೆ ಅವರವರೇ ಪ್ರಯತ್ನಿಸಬೇಕು ಎಂದರು. ಸಂಸ್ಥೆಯ ಪ್ರಾಚಾರ್ಯ ಸಜಿ ಕೆ ತೋಮಸ್ ನೂತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರೋಷನ್ ಹೆಚ್, ಉಪಾಧ್ಯಕ್ಷರಾದ ಸ್ವಸ್ತಿಕ್, ಜನರಲ್ ಸೆಕ್ರೆಟರಿ ಅಭಿಷೇಕ್, ಸಾಂಸ್ಕೃತಿಕ ಕಾರ್ಯದರ್ಶಿ ಮಹಮ್ಮದ್ ಮಿಜಲಾಜಿ, ಕ್ರೀಡಾ ಕಾರ್ಯದರ್ಶಿ ಆಗಿರುವ ಪವನ್ ಎಸ್ ಇವರಿಗೆ ಪ್ರಮಾಣವಚನ ಬೋಧಿಸಿದರು.


ಸಿಬ್ಬಂದಿ ವರ್ಗದ ಕಾರ್ಯದರ್ಶಿಯಾದ ಹರಿಪ್ರಸಾದ್ ರೈ ಪ್ರಮುಖರ ಪರಿಚಯಿಸಿದರು . ಸಂಸ್ಥೆಯ ತರಬೇತು ಅಧಿಕಾರಿ ಜಾನ್ ಪಿ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂಪ್ಯೂಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್ ಸ್ವಾಗತಿಸಿ,ಫಿಟ್ಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಶಿವಾನಂದ ಎಸ್ ವಂದಸಿದರು. ಕಾರ್ಯಾಗಾರ ಮತ್ತು ಲೆಕ್ಕಾಚಾರ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸಂತೋಷ್ ಪಿಂಟೋ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here