ಫಾಳಿಲಾ-ಫಳೀಲಾ ಸಮನ್ವಯ ಶಿಕ್ಷಣದಿಂದ ಸುಸಂಸ್ಕೃತ ಸಮಾಜದ ಸೃಷ್ಟಿ-ಸಅದ್ ಫೈಝಿ
ಪುತ್ತೂರು: ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣವನ್ನೂ ಪಡೆಯುವುದು ಕಾಲದ ಬೇಡಿಕೆಯಾಗಿದ್ದು ಈ ನಿಟ್ಟಿನಲ್ಲಿ ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಯೊಂದಿಗಿನ ಸುಸಂಸ್ಕೃತ ಸಮಾಜ ಕಟ್ಟುವಲ್ಲಿ ‘ಸಮಸ್ತ’ ಬೋರ್ಡ್ ನ ಅಧೀನದಲ್ಲಿ ಮಹಿಳೆಯರಿಗಾಗಿ ಫಾಳಿಲಾ- ಫಳೀಲಾ ಸಮನ್ವಯ ಶಿಕ್ಷಣ ವ್ಯವಸ್ಥೆಯನ್ನು ಮಾಡಲಾಗಿದೆ, ಹಾಗೂ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಪೋಷಿಸುವ ಸಲುವಾಗಿ ಹಿಯಾ ಫಿಯೆಸ್ಟ ಕಾರ್ಯಕ್ರಮಗಳನ್ನು ಆಯೋಜಸಲಾಗಿದೆ ಎಂದು ಕೌನ್ಸಿಲ್ ಆಫ್ ಸಮಸ್ತ ವುಮೆನ್ಸ್ ಕಾಲೇಜ್ ಗಳ ಕೇಂದ್ರೀಯ ಕೋ ಆರ್ಡಿನೇಟರ್ ಸಅದ್ ಫೈಝಿ ಮಲಪ್ಪುರಂ ಹೇಳಿದರು.
ಅವರು ಅ.9ರಂದು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ನಡೆದ ಫಾಳಿಲಾ-ಫಳೀಲಾ ಕರ್ನಾಟಕ ರಾಜ್ಯ ಮಟ್ಟದ ಹಿಯಾ ಫಿಯೆಸ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿ.ಎಸ್.ಡಬ್ಲ್ಯು.ಸಿ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ಪರ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು.ಮುಹಮ್ಮದ್ ಹಾಜಿ ಪಡೀಲ್, ಪುತ್ತೂರು ರೇಂಜ್ ಕೋಶಾಧಿಕಾರಿ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಕೋಡಿಂಬಾಡಿ ಜುಮಾ ಮಸೀದಿ ಅಧ್ಯಕ್ಷ ಉಮರ್ ಹಾಜಿ ಕೋಡಿಂಬಾಡಿ, ಇಸ್ಮಾಯಿಲ್ ಹಾಜಿ ಜನಪ್ರಿಯ, ಎಸ್.ವೈ.ಎಸ್ ದ.ಕ ಜಿಲ್ಲಾ ಸಮಿತಿ ಪ್ರಮುಖರಾದ ಸ್ವಾಗತ್ ಅಬೂಬಕ್ಕರ್ ಹಾಜಿ ದೇರಳಕಟ್ಟೆ, ಕತ್ತಾರ್ ಇಬ್ರಾಹಿಂ ಹಾಜಿ ಸುಳ್ಯ, ಮುಸ್ತಫಾ ಫೈಝಿ ಕಿನ್ಯ, ಪುತ್ತೂರು ನಗರ ಸಭಾ ಸದಸ್ಯ ರಿಯಾಝ್ ವಳತ್ತಡ್ಕ, ಆರಿಫ್ ಸಂಪ್ಯ, ಎಸ್ಕೆಎಸ್ಸೆಸೆಫ್ ರಾಜ್ಯ ಸಮಿತಿಯ ಇಸ್ಮಾಯಿಲ್ ಯಮಾನಿ, ಬಾತಿಷಾ ಹಾಜಿ ಪಾಟ್ರಕೋಡಿ, ಉದ್ಯಮಿಗಳಾದ ಅಶ್ರಫ್ ಪರ್ಲಡ್ಕ, ನೌಫಲ್ ತಿಂಗಳಾಡಿ, ಇಕ್ಬಾಲ್ ಶೀತಲ್ ವಿಟ್ಲ, ಇಸ್ಮಾಯಿಲ್ ಶಾಫಿ, ವಿವಿಧ ಕಾಲೇಜುಗಳ ಪ್ರತಿನಿಧಿಗಳಾದ ಬಾತಿಷಾ ಅಝ್ಹರಿ ಉಪ್ಪಿನಂಗಡಿ, ಅಬ್ದುಲ್ ನಾಸಿರ್ ದಾರಿಮಿ ಕಲ್ಲುಗುಂಡಿ, ಸಅದ್ ಫೈಝಿ ಕಲ್ಲುಗುಂಡಿ, ಆರಿಫ್ ತೋಡಾರ್, ಸಿದ್ದೀಕ್ ಯಮಾನಿ ಮಿತ್ತಬೈಲು, ಬಿ.ಕೆ ಅಬ್ದುಲ್ ಅಝೀಝ್ ಆತೂರು ಉಪಸ್ಥಿತರಿದ್ದರು.
ಫಾಳಿಲಾ ಕೇಂದ್ರೀಯ ಸಹ ಕೋಅರ್ಡಿನೇಟರ್ ಮುಬಶ್ಶಿರ್ ಫೈಝಿ ಮಲಪ್ಪುರಂ ಪ್ರಾರ್ಥನೆ ನಡೆಸಿದರು. ’ಸಮಸ್ತ’ ಕೇಂದ್ರ ಮುಶಾವರ ಸದಸ್ಯರದ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ವೀಡಿಯೋ ಸಂದೇಶ ನೀಡಿದರು.
ಸಿ.ಎಸ್.ಡಬ್ಲ್ಯೂ.ಸಿ ಕರ್ನಾಟಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಫೆಸ್ಟ್ ಸ್ವಾಗತ ಸಮಿತಿ ಅಧ್ಯಕ್ಷ ದಾವೂದು ಹನೀಫಿ ವಿಟ್ಲ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಐ.ಟಿ ಕೋ ಅರ್ಡಿನೇಟರ್ ತಾಜುದ್ದೀನ್ ರಹ್ಮಾನಿ ದೇರಳಕಟ್ಟೆ ವಂದಿಸಿದರು.
ಆತೂರು ಬದ್ರಿಯಾ, ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ಚಾಂಪಿಯನ್ಸ್:
ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಿಎಸ್ಡಬ್ಲ್ಯುಸಿ ನೇಮಕ ಮಾಡಿದ ಸುಮಾರು 30 ಮಹಿಳಾ ತೀರ್ಪುಗಾರರು ಮತ್ತು ವೀಕ್ಷಕರ ನೇತೃತ್ವದಲ್ಲಿ ದಿನಪೂರ್ತಿಯಾಗಿ ನಡೆದ ಹಿಯಾ ಫಿಯೆಸ್ಟಾ ಕಾರ್ಯಕ್ರಮದಲ್ಲಿ ಸಿಎಸ್ಡಬ್ಲ್ಯುಸಿ ಅಧೀನದ ಕರ್ನಾಟಕದ ಹತ್ತು ಕಾಲೇಜುಗಳಿಂದ ಆಯ್ಕೆಯಾದ ಸುಮಾರು 250 ವಿದ್ಯಾರ್ಥಿನಿಯರಿಗೆ ಐದು ವೇದಿಕೆಗಳಲ್ಲಾಗಿ ವಿವಿಧ ಭಾಷೆಗಳಲ್ಲಿ 38 ವಿಷಯಗಳಲ್ಲಿ ಸ್ಪರ್ಧೆಗಳು ನಡೆಯಿತು. ಸ್ಪರ್ಧೆಯಲ್ಲಿ ಆತೂರು ಬದ್ರಿಯಾ ವುಮೆನ್ಸ್ ಶರೀಅತ್ ಕಾಲೇಜು ಸಮಗ್ರ ಚಾಂಪಿಯನ್ ಮತ್ತು ಫಳೀಲಾ ವಿಭಾಗೀಯ ಚಾಂಪಿಯನ್ ಪ್ರಶಸ್ತಿಯನ್ನು ಪಡೆದರೆ, ಫಾಳಿಲಾ ವಿಭಾಗದಲ್ಲಿ ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಶರೀಅತ್ ಕಾಲೇಜು ಚಾಂಪಿಯನ್ ಪ್ರಶಸ್ತಿಯನ್ನು ಪಡೆಯಿತು. ಉಳಿದಂತೆ ಮಿತ್ತಬೈಲು ದಾರುಲ್ ಉಲೂಂ ವುಮೆನ್ಸ್ ಶರೀಅತ್ ಕಾಲೇಜು ಸಮಗ್ರ ಪ್ರಥಮ ರನ್ನರ್ ಹಾಗೂ ಪಳೀಲಾ ವಿಭಾಗೀಯ ಪ್ರಥಮ ರನ್ನರ್ ಪ್ರಶಸ್ತಿ ಪಡೆದರೆ ಕುಶಾಲನಗರ ದಾರುಲ್ ಉಲೂಂ ಫಾಳಿಲಾ ವುಮೆನ್ಸ್ ಶರೀಅತ್ ಕಾಲೇಜು ಸಮಗ್ರ ದ್ವಿತೀಯ ರನ್ನರ್ ಹಾಗೂ ಫಳೀಲಾ ವಿಭಾಗೀಯ ದ್ವಿತಿಯ ರನ್ನರ್ ಪ್ರಶಸ್ತಿಯನ್ನು ಪಡೆಯಿತು. ಫಾಳಿಲಾ ವಿಭಾಗದಲ್ಲಿ ಉಪ್ಪಿನಂಗಡಿ ಮಾಲಿಕುದ್ದೀನರ್ ವುಮೆನ್ಸ್ ಶರೀಅತ್ ಕಾಲೇಜು ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದರೆ, ದೇರಳಕಟ್ಟೆ ಬದ್ರಿಯಾ ವುಮೆನ್ಸ್ ಶರೀಅತ್ ಕಾಲೇಜ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆಯಿತು.
ವೈಯಕ್ತಿಕ ವಿಭಾಗದಲ್ಲಿ ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಶರೀಅತ್ ಕಾಲೇಜಿನ ವಿದ್ಯಾರ್ಥಿನಿ ಶಝ್ಮಾ ಪಡೀಲ್ ಗರಿಷ್ಠ ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರೆ ಫಳೀಲಾ ವಿಭಾಗದಲ್ಲಿ ಆತೂರು ಬದ್ರಿಯಾ ವುಮೆನ್ಸ್ ಶರೀಅತ್ ಕಾಲೇಜಿನ ವಿದ್ಯಾರ್ಥಿನಿ ಸುನೈನಾ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು. ಕೊನೆಯಲ್ಲಿ ವಿಜೇತ ಕಾಲೇಜುಗಳಿಗೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಸ್ಮರಣಿಕೆ ನೀಡಲಾಯಿತು.