ಆಲಂಕಾರು: ಎಸ್.ಹೆಚ್.ಸ್ಪೋರ್ಟ್ಸ್ ಝೋನ್ ಶುಭಾರಂಭ

0

ಕಡಬ: ಆಲಂಕಾರು ಸಿಎ ಬ್ಯಾಂಕ್ ಸಮೀಪದ ಲಕ್ಷ್ಮಿರಾಮ ಕಾಂಪ್ಲೆಕ್ಸ್‌ನಲ್ಲಿ ಕ್ರೀಡಾ ಸಾಮಾಗ್ರಿಗಳ ಮಾರಾಟ ಮಳಿಗೆ’ ಎಸ್.ಹೆಚ್.ಸ್ಪೋರ್ಟ್ಸ್ ಝೋನ್’ ಶುಭಾರಂಭಗೊಂಡಿತು.
ಸೈಯ್ಯದ್ ಮುಝಮಿಲ್ ತಂಙಳ್ ಕಾಸರಗೋಡು ದುವಾಶೀರ್ವಚನ ನೀಡಿದರು. ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ ಅವರು ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ಲಕ್ಷ್ಮಿರಾಮ ಕಾಂಪ್ಲೆಕ್ಸ್ ಮಾಲಕ ರಾಮಣ್ಣ ಗೌಡ, ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಲಕ್ಷ್ಮಿ ಪಿ., ರಾಷ್ಟ್ರೀಯ ಕ್ರೀಡಾಪಟು ಮಾಯಿಲಪ್ಪ ಗೌಡ ಕೊಂಬೆಟ್ಟು, ವೀಕ್ಷಕ ವಿವರಣೆಗಾರ ನಿರಂತ್ ದೇವಸ್ಯ, ಸುಳ್ಯ ಶಾರದಾ ಪಿ.ಯು.ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಬಾಲಚಂದ್ರ ಕೆ., ಆಲಂಕಾರು ಸರಕಾರಿ ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಬ್ರಹಾಂ, ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ.ಕಾಲೇಜು ಮುಖ್ಯಶಿಕ್ಷಕ ನವೀನ್‌ ಕುಮಾರ್ ಕೆ., ಆಲಂಕಾರು ಶ್ರೀಭಾರತಿ ವಿದ್ಯಾಸಂಸ್ಥೆ ಮುಖ್ಯಶಿಕ್ಷಕಿ ಆಶಾ, ಕೊಡಗು ಯಡೂರು ಉದಯ ಯುವಕ ಸಂಘದ ಅಧ್ಯಕ್ಷ ಸುಧೀರ್ ಡಿ.ಜಿ., ಆಲಂಕಾರು ಶ್ರೀ ದುರ್ಗಾಂಬಾ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಶ್ರೇಯಸ್, ಮುಹಮ್ಮದ್ ಹಾಜಿ ಬಪ್ಪಳಿಗೆ, ಇಬ್ರಾಹಿಂ ಕೊಲ್ಯ ಸಂಪ್ಯ, ಅಬೂಬಕ್ಕರ್(ಅಚ್ಚು) ಬನತ್ತಡಿ-ಆರ್ಲಪದವು, ಹಂಝ ಕಡಮಾಜೆ ಆರ್ಲಪದವು ಮತ್ತಿತರ ಪ್ರಮುಖರು ಭೇಟಿ ನೀಡಿ ಶುಭಹಾರೈಸಿದರು.


ಎಸ್.ಎಚ್.ಸ್ಪೋರ್ಟ್ಸ್ ಝೋನ್ ಮಾಲಕರಾದ ಶರೀಫ್ ಬಿ.ಹೆಚ್.ಅವರು ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿ ಮಾತನಾಡಿ, ನಮ್ಮಲ್ಲಿ ಎಲ್ಲಾ ತರದ ಕ್ರೀಡಾ ಸಾಮಾಗ್ರಿಗಳು, ಟ್ರೋಫಿಗಳು, ಮನಮೋಹಕ ಶೈಲಿಯ ಜೆರ್ಸಿಗಳು, ಕಸ್ಟಮೈಝೆಡ್ ಮೆಮೆಂಟೋಗಳು, ಸನ್ಮಾನ ಕಾರ್ಯಕ್ರಮದ ವಸ್ತುಗಳು, ಶಾಲಾ ಕಾಲೇಜುಗಳು ದೈಹಿಕ ಶಿಕ್ಷಣ ಶಿಕ್ಷಕರ ಜೆರ್ಸಿಗಳು, ನಾಸಿಕ್ ಬ್ಯಾಂಡ್‌ಸೆಟ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 8310893572, 9902724345ಗೆ ಸಂಪರ್ಕಿಸುವಂತೆ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here