ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ – ಪೆರ್ಲಂಪಾಡಿಯ ಕೌಶಿಕ್ ಕೆ.ಎಂ. ದ್ವಿತೀಯ

0

ಪುತ್ತೂರು: ಶ್ರೀ ವೀರಮಾರುತಿ ಸೇವಾ ಟ್ರಸ್ಟ್ ಮೂಡಬಿದ್ರೆ ಇವರ ಆಶ್ರಯದಲ್ಲಿ ನಡೆದ 35ನೇ ವರ್ಷದ ಮೂಡಬಿದಿರೆ ಶ್ರೀ ಶಾರದೋತ್ಸವದ ಅಂಗವಾಗಿ ಯೋಗಶ್ರೀ ಯೋಗ ಬಳಗ ಮಂಗಳೂರು ಸಹಯೋಗದಲ್ಲಿ ಅ.9ರಂದು ನಡೆದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ಬಾಲಕರ (5ರಿಂದ 7ನೇ ತರಗತಿ) ವಿಭಾಗದಲ್ಲಿ ಕೌಶಿಕ್ ಕೆ.ಎಂರವರು ದ್ವಿತೀಯ ಸ್ಥಾನ ಗಳಿಸಿಕೊಂಡಿದ್ದಾರೆ. ಇವರು ಪೆರ್ಲಂಪಾಡಿ ಸೋಮರ್ತೋಟ ನಿವಾಸಿ ಕೆ. ಎಚ್.ಮುರಳೀಧರ ಮತ್ತು ಬಿ. ಕುಮಾರಿಯವರ ಪುತ್ರರಾಗಿದ್ದಾರೆ. ಪೆರ್ಲಂಪಾಡಿ ನಿರಂತರ ಯೋಗ ಕೇಂದ್ರದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕರವರಿಂದ ಯೋಗ ಮಾರ್ಗದರ್ಶನ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here