ಪುತ್ತೂರು: ರಾಜ್ಯದ ಪ್ರತಿಷ್ಠಿತ ಮಂಗಳೂರು ಸೈಂಟ್ ಅಲೋಶಿಯಸ್ ಯೂನಿವರ್ಸಿಟಿಯಲ್ಲಿ ಅ.8ರಂದು ನಡೆದ ಅಂತರ್ ಕಾಲೇಜುಗಳ ರಾಷ್ಟ್ರ ಮಟ್ಟದ Aloysian Fest 2024 ಪ್ರತಿಭಾ ಸ್ಪರ್ಧೆಯಲ್ಲಿ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಫಸ್ಟ್ ಗ್ರೇಡ್ ಕಾಲೇಜಿನ ವಿದ್ಯಾರ್ಥಿನಿಯರು ವೆಲ್ತ್ ಔಟ್ ಆಫ್ ವೇಸ್ಟ್ “ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹಲವು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿಯರಾದ ತೃತೀಯ ಬಿ.ಎ ವಿಭಾಗದ ಸನ ಎ.ಜೆ ಕೊಡಗು, ತೃತೀಯ ಬಿ.ಕಾಂ ವಿಭಾಗದ ದಾನಿಷ ಫಾದಿಲ ಕೊಡಗು, ತೃತೀಯ ಬಿ.ಕಾಂ ವಿಭಾಗದ ಶಝ್ಮಿ ಉಪ್ಪಿನಂಗಡಿ ಅವರ ಅದ್ಭುತ ಪ್ರದರ್ಶನಕ್ಕೆ ದ್ವಿತೀಯ ರನ್ನರ್ ಆಫ್ ಪ್ರಶಸ್ತಿ ಲಭಿಸಿದೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಫೈನಲ್ ಬಿ.ಕಾಂ ವಿಭಾಗದ ಆಯಿಷತ್ ಸನ ಕೊಡಗು, ತಸ್ಮಿಯಾ ಕೊಡಗು, ಅಶ್ಫಿಯಾ ಸುಳ್ಯ, ಸನ ಡಿ. ಕಾಸರಗೋಡು, ನಾದಿಯಾ ಸವಣೂರು, ನಿಶಾ ಸವಣೂರು, ಉಮ್ಮು ಸುಲೈಮಿ ಸುಳ್ಯ, ಹಸ್ನ ಸುಳ್ಯ, ತಮ್ಶಿ ಸುಳ್ಯ, ಫೈನಲ್ ಬಿ.ಎ ವಿಭಾಗದ ಝುಹಾನಾ ಕೊಡಗು, ಸುನೈಜ ಕೊಡಗು, ಮುಝೈನ್ ಬೆಂಗಳೂರು ಇವರ ಉತ್ತಮ ಪ್ರದರ್ಶನ ನೀಡಿದರು.