ನಾಳೆ(ಅ.17): ನಗರ ಸಭಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

0

ಪುತ್ತೂರು: ತುರ್ತು ಕಾಮಗಾರಿಯ ಅಂಗವಾಗಿ 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪುತ್ತೂರು ಟೌನ್ ಓಲ್ಡ್ ಫೀಡರ್‌ನಲ್ಲಿ ಅ.17ರಂದು ಬೆಳಿಗ್ಗೆ 10:00 ರಿಂದ ಅಪರಾಹ್ನ ೦6:೦೦ ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.


110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಪಡೀಲ್, ಹಾರಾಡಿ, ಬೊಳ್ವಾರು-ಅಂಚೆ ಕಚೇರಿ, ಬೈಪಾಸ್ ರಸ್ತೆ, ಕೋರ್ಟ್ ರಸ್ತೆ, ಮಿನಿ ವಿಧಾನ ಸೌಧದ ಆಸುಪಾಸು, ಸರಕಾರಿ ಆಸ್ಪತ್ರೆ, ಕಲ್ಲಿಮಾರ್, ಪರ್ಲಡ್ಕ ಮತ್ತು ಗೋಳಿಕಟ್ಟೆ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here