ಕ್ರೀಡಾ ಕ್ಷೇತ್ರದಲ್ಲಿ ಪಾಪೆಮಜಲು ಪ್ರೌಢ ಶಾಲೆಯ ಅಮೋಘ ಸಾಧನೆಗೆ ದೈ.ಶಿ.ಶಿಕ್ಷಕಿ ಪ್ರವೀಣಾ ರೈಗೆ ಸನ್ಮಾನ

0

ಪುತ್ತೂರು: ಪಾಪೆಮಜಲು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಲವು ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದು ಹತ್ತು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಮಕ್ಕಳ ಕ್ರೀಡಾ ಸಾಧನೆಗೆ ಶಾಲಾ ದೈ.ಶಿ.ಶಿಕ್ಷಕಿ ಪ್ರವೀಣಾ ರೈ ಅವರ ತರಬೇತಿ ಕಾರಣವಾಗಿದ್ದು ಶಾಲೆಗೂ, ಊರಿಗೂ ಹೆಮ್ಮೆ ತಂದ ಪ್ರವೀಣಾ ರೈ ಅವರನ್ನು ಅ.22ರಂದು ಪಾಪೆಮಜಲು ಪ್ರೌಢ ಶಾಲೆಯಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಪ್ರವೀಣಾ ರೈ ಮಾತನಾಡಿ ನಾನು ಸನ್ಮಾನ ಬಯಸಿ ಯಾವುದನ್ನೂ ಮಾಡಿಲ್ಲ, ಶಾಲಾ ಕಾಯಾಧ್ಯಕ್ಷರ ಕೋರಿಕೆಯ ಮೇರೆಗೆ ಸನ್ಮಾನ ಸ್ವೀಕರಿಸಿದ್ದೇನೆ, ಈ ಸನ್ಮಾನ ಇನ್ನಷ್ಟು ಕೆಲಸ ಮಾಡಲು ಪ್ರೇರೇಪಣೆಯಾಗಲಿದೆ ಎಂದು ಹೇಳಿದರು. ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಮಾತನಾಡಿ ನಮ್ಮ ಶಾಲೆಯ ಹೆಸರು ಕ್ರೀಡಾ ಕ್ಷೇತ್ರದಲ್ಲಿ ಇಂದು ಬೆಳಗುತ್ತಿರಲು ಶಾಲಾ ದೈ.ಶಿ.ಶಿಕ್ಷಕಿ ಪ್ರವೀಣಾ ರೈ ಅವರು ಪ್ರಮುಖ ಕಾರಣ, ಅವರ ತರಬೇತಿಯಲ್ಲಿ ಪಳಗಿದ ಮಕ್ಕಳು ರಾಷ್ಟ್ರಮಟ್ಟದಲ್ಲೂ ಮಿಂಚಿದ್ದಾರೆ. ಪ್ರವೀಣಾ ರೈಯವರು ಸನ್ಮಾನಕ್ಕೆ ಅರ್ಹರು ಎನ್ನುವ ಕಾರಣಕ್ಕೆ ಸನ್ಮಾನಿಸಿದ್ದೇವೆ, ಅವರಿಂದಾಗಿ ನಮ್ಮ ಶಾಲೆಗೆ ಉತ್ತಮ ಹೆಸರು ಬಂದಿದೆ ಎಂದು ಶ್ಲಾಘಿಸಿದರು.

LEAVE A REPLY

Please enter your comment!
Please enter your name here