ಆಲಂಕಾರು ನೈಯ್ಯಲ್ಗದಲ್ಲಿ ಕಾಡು ಪ್ರಾಣಿಯ ಹೆಜ್ಜೆ ಗುರುತು ಪತ್ತೆ- ಹುಲಿ ಎಂಬ ಶಂಕೆ

0

ಆಲಂಕಾರು: ಆಲಂಕಾರು ಗ್ರಾಮದ ನೆಕ್ಕಿಲಾಡಿ ನೈಯ್ಯಲ್ಗದಲ್ಲಿ ಕಾಡು ಪ್ರಾಣಿಯ ಹೆಜ್ಜೆಗುರುತು ಪತ್ತೆಯಾಗಿದ್ದು ಹುಲಿಯ ಹೆಜ್ಜೆ ಎಂದು ಶಂಕಿಸಲಾಗಿದೆ.

ಆಲಂಕಾರು ಗ್ರಾಮದ ನೆಕ್ಕಿಲಾಡಿ ನೈಯ್ಯಲ್ಗ ಜನಾರ್ಧನ ಬಂಗೇರ ಎಂಬವರು ಈ ಕುರಿತು ಮಾತನಾಡಿದ್ದು, ಬೆಳಿಗ್ಗೆ ತೋಟದಲ್ಲಿ ದೈವಕ್ಕೆ ದೀಪ ಇಡುವ ಸಂದರ್ಭದಲ್ಲಿ ಹಟತ್ತಾಗಿ ನನ್ನ ಶರೀರದ ಮೇಲೆ ಮಣ್ಣು ಎಸೆದಂತಾಯಿತು ನಂತರ ನೋಡಿದಾಗ ಅಲ್ಲೆ ಪಕ್ಕದಲ್ಲಿದ್ದ ಅಂದಾಜು 6 ಅಡಿ ಉದ್ದ,3 ಅಡಿ ಎತ್ತರದ ಕಾಡು ಪ್ರಾಣಿ ಹುಲಿ ಹಾರಿ ಹೊಯಿತೆಂದು ಜನಾರ್ದನರವರು ತಿಳಿಸಿದ್ದಾರೆ.

ಆ ಬಳಿಕ ಅರಣ್ಯ ಇಲಾಖೆಯ ಉಪವಲಯ ಅರಣ್ಯಧಿಕಾರಿ ಜಯಕುಮಾರ್,ಗಸ್ತು ಅರಣ್ಯರಕ್ಷಕ ರವಿ ಕುಮಾರ್ ರವರು ಸ್ಥಳಕ್ಕೆ ಅಗಮಿಸಿ ಹೆಜ್ಜೆ ಗುರುತುನ್ನು ಪರಿಶೀಲಿಸಿ ಚಿರತೆ ಹೆಜ್ಜೆಯ ಗುರುತಿನಿಂದ ಸ್ವಲ್ಪ ದೊಡ್ಡದಾದ ಕಾಡುಪ್ರಾಣಿಯ ಹೆಜ್ಜೆಯಾಗಿದೆ ಎಂದು ತಿಳಿಸಿದ್ದು ಈ ಬಗ್ಗೆ ಪ್ರಾಣಿಯ ಹೆಜ್ಜೆಯ ಜಾಡನ್ನು ಹಿಡಿದು ಅರಣ್ಯ ಇಲಾಖೆಯವರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here