ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳಿಂದ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಅರ್ಡುಯಿನೋ ಎನ್ನುವ ಕಾರ್ಯಗಾರವನ್ನು ನಡೆಸಲಾಯಿತು.
ಒಂದು ದಿನದ ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರೋಗ್ರಾಮಿಂಗ್, ಡಿಸಿಷನ್ ಮೇಕಿಂಗ್ ಸ್ಟೇಟ್ ಮೆಂಟ್ಸ್ ಮತ್ತು ಲೂಪಿಂಗ್ ಸ್ಟೇಟ್ ಮೆಂಟ್ಸ್ ಗಳ ಬಗೆಗೆ ತಿಳಿಸಿಕೊಡಲಾಯಿತು. ಕಾಲೇಜಿನ ಬಿಸಿಎ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ. ಹಾಗೂ ಉಪನ್ಯಾಸಕ ಕೀರ್ತನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಕಾರ್ಯಗಾರವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.