ಪೆರಾಜೆ ಮಾಣಿಯಲ್ಲಿ ದಿ.ಭಾಸ್ಕರ ಬಿ ಅವರಿಗೆ ನುಡಿನಮನ

0

ಮಾಣಿ: ವಿವೇಕಾನಂದ ವಿದ್ಯಾವರ್ಧಕ ಸಂಘದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ದಿ.ಭಾಸ್ಕರ ಬಿ ಒಬ್ಬ ಅನರ್ಘ್ಯ ರತ್ನ ಇದ್ದ ಹಾಗೆ. ಇವತ್ತು ಇಡೀ ವಿದ್ಯಾಸಂಸ್ಥೆಯ ಒಂದು ಶಕ್ತಿಯೇ ಕಳಚಿಕೊಂಡ ಹಾಗಿದೆ. ಊರಿಗೆ ಹಾಗೂ ಕುಟುಂಬಕ್ಕೆ ಆಧಾರವಾಗಿದ್ದ ಭಾಸ್ಕರ್ ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಮಾದರಿಯಾಗಬೇಕಿದೆ. ಅವರ ವೃತ್ತಿಯ ಬಗೆಗಿನ ಅವರ ನಿಷ್ಠೆ, ಪ್ರಾಮಾಣಿಕತೆ ಎಂದೆಂದಿಗೂ ನಮ್ಮೊಂದಿಗೆ ಶಾಶ್ವತವಾಗಿ ಉಳಿದಿದೆ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೆ.ಎಂ ಹೇಳಿದರು.


ಇವರು ಮಾಣಿ ಪೆರಾಜೆ ಮಠದಲ್ಲಿ ಇತ್ತೀಚೆಗೆ ಅಪಘಾತದಲ್ಲಿ ಮೃತರಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ಅವರಿಗೆ ನಡೆದ ನುಡಿನಮನ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಪೆರಾಜೆ ಗ್ರಾಮದ ಬಿ.ಟಿ‌ ನಾರಾಯಣ ಭಟ್, ಪೆರಾಜೆ ಗುತ್ತು ಶ್ರೀಕಾಂತ್ ಆಳ್ವ, ಡಾ.ಅರುಣ್ ಪ್ರಕಾಶ್, ದಿವಾಕರ ಶಾಂತಿಲ, ಲಕ್ಷ್ಮೀಶ ಸಾದಿಕುಕ್ಕು, ಭವ್ಯಾ.ಪಿ.ಆರ್ ನಿಡ್ಪಳ್ಳಿ ಮುಂತಾದವರು ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮವನ್ನು ಮೃತ ಭಾಸ್ಕರ ಅವರ ಸಹೋದರ ಯೋಗೀಶ್ ಬೀರಕೋಡಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಎಂ ಪೆರಾಜೆ, ಮಾಣಿಗುತ್ತು ಸಚಿನ್ ರೈ, ಯುವಕ ಮಂಡಲ ಅಧ್ಯಕ್ಷ ಬಾಬು ಪೂಜಾರಿ ಕೊಪ್ಪಳ, ಯುವ ವೇದಿಕೆ ಅಧ್ಯಕ್ಷ ವಿನೀತ್ ಶೆಟ್ಟಿ ಪಾಣೂರು, ಪೆರಾಜೆ ಗ್ರಾಮದ ಯುವ ಸಂಘಟನೆಗಳ ಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು.

ಕಲ್ಲಡ್ಕ ಶ್ರೀರಾಮ ಕಾಲೇಜಿನ ಕನ್ನಡ ಉಪನ್ಯಾಸಕ ಯತಿರಾಜ್ ಪೆರಾಜೆ ಕಾರ್ಯಕ್ರಮ ವನ್ನು ನಿರೂಪಿಸಿದರು. ಪೆರಾಜೆ ಗ್ರಾಮ ಪಂಚಾಯತ್ ಸದಸ್ಯ ರಾಜರಾಮ ಕಡೂರು ಸಹಕರಿಸಿದರು.

LEAVE A REPLY

Please enter your comment!
Please enter your name here