Uppinangady: ಇಂದ್ರಪ್ರಸ್ಧ ವಿದ್ಯಾಸಂಸ್ಧೆಯಲ್ಲಿ ‘ಬಿಸಿನೆಸ್ ಕಾರ್ಟ್’ : ಗ್ರಾಹಕರನ್ನ ಸೆಳೆದು ಕಮಾಲ್ ಮಾಡಿದ ವಿದ್ಯಾರ್ಥಿಗಳ ವ್ಯಾಪಾರದ ಭರಾಟೆ!

0

ಉಪ್ಪಿನಂಗಡಿ: ಮಾರುಕಟ್ಟೆ ಹೇಗೆ ಇರುತ್ತದೆ? ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳು ಹೇಗೆ ನಡೆಯುತ್ತದೆ? ಎನ್ನುವ ಜ್ಞಾನವನ್ನ ಮಕ್ಕಳಿಗೆ ತಿಳಿಯಪಡಿಸುವ ಉದ್ದೇಶದಿಂದ ಉಪ್ಪಿನಂಗಡಿ ಇಂದ್ರಪ್ರಸ್ಧ ವಿದ್ಯಾಸಂಸ್ಧೆಯಲ್ಲಿ ‘ಇಂದ್ರಪ್ರಸ್ಧ ಬಿಸಿನೆಸ್ ಕಾರ್ಟ್’ ಕಾರ್ಯಕ್ರಮ ಅ. 29ರಂದು ನಡೆಯಿತು.. ಪ್ರತಿನಿತ್ಯ ಪಾಠ, ಪ್ರಾಜೆಕ್ಟ್ ವರ್ಕ್, ಲ್ಯಾಬ್ ಎಂದು ಕಲಿಕೆಯಲ್ಲಿ ಬ್ಯುಸಿಯಾಗಿರುವ ಇಂದ್ರಪ್ರಸ್ಧ ವಿದ್ಯಾಲಯದ ಮಕ್ಕಳು, ಶಾಲಾ ಆವರಣದಲ್ಲಿ ಹಲವು ಸ್ಟಾಲ್‌ಗಳನ್ನ ತೆರೆದು ಬನ್ನಿ ಬನ್ನಿ ಕಡಿಮೆ ರೇಟ್‌ಗ್ ತರಕಾರಿ, ತಿಂಡಿ ತಿನಿಸು, ಫ್ರೂಟ್ಸ್, ಬಟ್ಟೆ-ಬರೆ, ಕೃಷಿ ಉತ್ಪನ್ನಗಳು ಎಂದು ಕೂಗುತ್ತಾ ವ್ಯಾಪಾರದ ಭರಾಟೆ ಜೋರಾಗಿತ್ತು…

ಮುಖ್ಯ ಅತಿಥಿಯಾದ ಉಪ್ಪಿನಂಗಡಿಯ ಸಚಿನ್ ಬೇಕ್ಸ್ ಅಂಡ್ ಕೇಕ್ಸ್ ನ ಮಾಲಕರಾದ ಸಚಿನ್ ಎ ಎಸ್, ಅವರು ತಳ್ಳುಗಾಡಿಯ ಸಿಯಾಳವನ್ನು ಅದರ ಬೆಲೆಯನ್ನು ಕೊಟ್ಟು ಖರೀದಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದರು.ಈ ಸಂದರ್ಭ ಇಂದ್ರಪ್ರಸ್ಧ ವಿದ್ಯಾಸಂಸ್ಧೆಯ ಆಡಳಿತ ಸಮಿತಿ ಅಧ್ಯಕ್ಷರಾದ ಕರುಣಾಕರ ಸುವರ್ಣ, ಕರೆಸ್ಪಾಂಡೆಟ್ ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುರೇಶ್. ಜಿ, ಸುಧಾಕರ ಶೆಟ್ಟಿ, ಏಕವಿದ್ಯಾಧರ್ ಜೈನ್, ರಾಜೇಶ್ ಪೈ, ಜಯಪ್ರಸಾದ್ ಕಾಡಮ್ಮಾಜೆ, ರವಿ ಇಳಂತಿಲ, ಡಾ ಸ್ವಾತಿ ಅಜಯ್, ಶ್ರೀರಾಮ ವಿದ್ಯಾಲಯ ಉಪ್ಪಿನಂಗಡಿ ಅಧ್ಯಕ್ಷರಾದ ಸುನಿಲ್ ಅಣವು, ವಿದ್ಯಾಸಂಸ್ಧೆಯ ಶಿಕ್ಷಕರು, ಆಡಳಿತ ಮಂಡಳಿಯವರು, ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಉಪಸ್ಧಿತರಿದ್ದರು.

ಇಂದ್ರಪ್ರಸ್ಧ ವಿದ್ಯಾಸಂಸ್ಧೆಯ ಪ್ರಾಂಶುಪಾಲರಾದ ಹೆಚ್.ಕೆ ಪ್ರಕಾಶ್ ಅವರು ಮಾತನಾಡಿ ಇಂದು ಕಾಲೇಜಿನ ಹಾಗೂ ವಿದ್ಯಾಲಯದ ಎಲ್ಲರಿಗೂ ಅವಿಸ್ಮರಣೀಯ ದಿನ. ಜೀವನದ ಪಾಠವನ್ನ ಕಲಿಯೋದಿಕ್ಕೆ ವಿದ್ಯಾರ್ಥಿಗಳಿಗೆ ಇದು ಅಪೂರ್ವವಾದ ಅವಕಾಶ. ಜೀವನ ಅಂದರೆ ಏನು..?ವ್ಯಾಪಾರ ಅಂದರೆ ಏನು..? ನಾವು ಅದನ್ನ ಯಾವ ರೀತಿ ಆಯೋಜಿಸಬೇಕು…? ಸಮಾಜದೊಂದಿಗೆ ಯಾವ ರೀತಿ ಬೆರೆಯಬೇಕು ಎನ್ನುವ ಬದುಕಿನ ಕಲೆಯನ್ನ ಕಲಿಸೋದಿಕ್ಕಾಗಿ ಇವತ್ತು ಈ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ದೇವೆ… ಇದಕ್ಕೆ ಎಲ್ಲಾ ಮಕ್ಕಳ ಹೆತ್ತವರು, ಸಾರ್ವಜನಿಕರು ಹಾಗೂ ಆಡಳಿತ ಮಂಡಳಿ ಉತ್ತಮ ಸಹಾಯವನ್ನ ಮಾಡಿರುತ್ತಾರೆ. ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.

ಇಂದ್ರಪ್ರಸ್ಧ ಹೈಸ್ಕೂಲ್‌ನ ಹೆಚ್‌ಎಂ ವೀಣಾ ಅವರು ಮಾತನಾಡಿ ಈ ಕಾರ್ಯಕ್ರಮ ಮೂರನೇ ಬಾರಿಗೆ ಆಯೋಜಿಸಿದ್ದೇವೆ. ಯೋಜನೆ ನಮ್ಮ ಮೊದಲಿನ ಸಂಸ್ಧೆಯ ಸಂಸ್ಧಾಪಕರು ಹಾಗೂ ಸಂಚಾಲಕರಾಗಿದ್ದ ಯುಎಸ್‌ಎ ನಾಯಕ್ ಅವರದ್ದು. ಅವರ ಕನಸನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಈ ಮೊದಲು ಸೀಮಿತ ವರ್ಗದ ಪೋಷಕರು ಮಾತ್ರ ಇಲ್ಲಿ ಭಾಗಿಯಾಗಿದ್ರು. ಆದ್ರೆ ಈ ಮಾಧ್ಯಮಗಳಿಂದ ಅನುಕೂಲವಾಗಿದ್ದು, ಪ್ರಚಾರ ಕೊಟ್ಟ ಕಾರಣದಿಂದ ನಮ್ಮ ನಿರೀಕ್ಷೆ ಮೀರಿ ಜನರಿಂದ ಸ್ಪಂದನೆ ಸಿಗುತ್ತಿದೆ.ಇದು ತುಂಬಾ ಹೆಮ್ಮೆಯ ವಿಚಾರ. ಇದರ ಆಯೋಜನೆಯುಲ್ಲಿ ನಾವು ಪಟ್ಟ ಶ್ರಮ ಏನಿದೆಯೋ ಇವತ್ತು ನಮ್ಮ ಮಕ್ಕಳ ಮೊಗದಲ್ಲಿ ಕಾಣುವ ಉತ್ಸಾಹ ಮತ್ತು ಉಲ್ಲಾಸ ಇದರಿಂದ ಒಂದಿಷ್ಟು ಯುವ ಉದ್ಯಮಿಗಳು ಜೊತೆಗೆ ನಮ್ಮ ಉಪ್ಪಿನಂಗಡಿಯAತ ಪರಿಸರಕ್ಕೆ ಸಿಕ್ಕಿದರೆ ನಮ್ಮ ಈ ಪ್ರಯತ್ನಕ್ಕೆ ಸಾರ್ಥಕ ಎಂದು ಹೇಳಿದರು.

ಇಂದ್ರಪ್ರಸ್ಧ ಬಿಸಿನೆಸ್ ಕಾರ್ಟ್ನಲ್ಲಿ ತರಕಾರಿ ಸ್ಟಾಲ್, ದಿನಿಸಿ ಸಾಮಾಗ್ರಿಗಳ ಅಂಗಡಿ, ಸ್ವೀಟ್ ಸ್ಟಾಲ್, ಕ್ವಾಟನ್ ಕ್ಯಾಂಡಿ, ಚಾಕೋಲೆಟ್ ಫಂಟೆನ್, ಐಸ್ ಕ್ರೀಂ, ಲೈಮ್ ಸೋಡಾ, ಚಾಟ್ ಮಸಲಾ, ಪುದೀನಾ, ಗಾಂಧರಿ, ಜಿಂಜರ್, ಪೆಪ್ಪರ್ ಸೋಡಾ, ಊರಿನ ಬೊಂಡಾ, ಹೋಟೆಲ್, ಹೀಗೆ ಹಲವು ಬಗೆಯ ಫುಡ್ ಸ್ಟಾಲ್‌ಗಳು, ವಿಶೇಷ ಲಕ್ಕಿ ಕೂಪನ್ ಜೊತೆಗೆ ಬಟ್ಟೆ ಮಾರಾಟ, ಫ್ಯಾನ್ಸಿ ಶಾಪ್, ದೀಪಾವಳಿಗೆ ದೀಪಗಳ ಮಾರಾಟ, ಮಣ್ಣಿನಿಂದ ಮಾಡಿದ ವಸ್ತುಗಳ ಮಾರಾಟ, ಸ್ಧಳದಲ್ಲೆ ಕೈಗೆ ಮೆಹಂದಿ ಇಡುವ ಸ್ಟಾಲ್, ನರ್ಸರಿ, ಕೃಷಿ ಸಲಕರಣೆಗಳು, ಬಟ್ಟೆಯ ಕೈ ಚೀಲ ಮಾರಾಟ, ಹೂವಿನ ಅಂಗಡಿ, ಇಲೆಕ್ಟಿçಕ್ ವಸ್ತುಗಳ ಮಾರಾಟ, ಹಳೆ ಕಾಲದ ವಸ್ತುಗಳ ಪ್ರದರ್ಶನ, ಬಟ್ಟೆಯಿಂದ ತಯಾರಿಸಿದ ಕೈ ಚೀಲ, ಡ್ರಾಯಿಂಗ್ ಪ್ರದರ್ಶನ, ತ್ರಿಡಿ ಶೋ, ಹಲವು ಆಟೋಟದ ಗಮ್ಮತ್ತು, ಹಾರರ್ ಶೋ, ಹೀಗೆ ವಿದ್ಯಾರ್ಥಿಗಳ ಕ್ರಿಯೇಟಿವಿಟಿಗೆ ತಕ್ಕುದಾಗಿ ಸುಮಾರು 30 ಸ್ಟಾಲ್‌ಗಳು ಎಲ್ಲರ ಗಮನ ಸೆಳೆಯಿತು.. ವಿದ್ಯಾರ್ಥಿಗಳು, ಆಗಮಿಸಿದ ಎಲ್ಲಾ ಗ್ರಾಹಕರನ್ನ ತಮ್ಮ ವಾಕ್‌ಚಾತುರ್ಯದ ಮೂಲಕ ಸೆಳೆದು, ಚೌಕಾಸಿಗೆ ಅವಕಾಶವನ್ನ ನೀಡದೆ ತಮ್ಮತಮ್ಮ ಸ್ಟಾಲ್‌ನ ವಸ್ತುಗಳನ್ನ ಅತ್ಯಂತ ಉತ್ಸಾಹದಿಂದ ಮಾರಾಟ ಮಾಡುತ್ತಿದ್ದ ದೃಶ್ಯಗಳು ಕಂಡು ಬಂತು..

ಆಯಾ ಸ್ಟಾಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ವ್ಯಾಪಾರ ನಡೆಸಲು ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನ ನೀಡಲು ಶಿಕ್ಷಕರನ್ನ ನಿಯೋಜಿಸಲಾಗಿತ್ತು. ಅಲ್ಲದೆ ‘ಪ್ಲಾಸ್ಟಿಕ್ ಚೀಲ ಬಿಡಿ ಬಟ್ಟೆ ಚೀಲ ಹಿಡಿ’ ಎಂದು ಸಂದೇಶವನ್ನ ನೀಡುತ್ತಾ, ಎಲ್ಲಾ ಸ್ಟಾಲ್‌ಗಳಲ್ಲೂ ಬಟ್ಟೆ ಚೀಲಗಳನ್ನ ನೀಡಲಾಗುತ್ತಿದ್ದುದ್ದು ವಿಶೇಷವಾಗಿತ್ತು. ಬಿಸಿನೆಸ್ ಕಾರ್ಟ್ ಉಪ್ಪಿನಂಗಡಿ ಭಾಗದ ಮಾತ್ರವಲ್ಲದೆ ಸುತ್ತಮುತ್ತಲಿನ ಊರಿನ ಗ್ರಾಹಕರನ್ನ ಸೆಳೆಯಿತು.

ಒಟ್ಟಿನಲ್ಲಿ ಇಂದ್ರಪ್ರಸ್ಧ ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಬೆಂಬಲ, ಪೋಷಕರ ಪ್ರೋತ್ಸಾಹ, ಗ್ರಾಹಕರ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು.. ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆ, ವ್ಯಾಪಾರ ವಹಿವಾಟನ್ನು ಯಶಸ್ವಿಯಾಗಿ ನಡೆಸಿ ಸೈ ಎನಿಸಿಕೊಂಡರು.

LEAVE A REPLY

Please enter your comment!
Please enter your name here