ಪುತ್ತೂರು: ದೀಪಾವಳಿಯ ಪಟಾಕಿ ಸದ್ದುಗಳ ನಡುವೆ ಕಾಡಾನೆಯೊಂದು ಅಮ್ಚಿನಡ್ಕ ನೂಜಿಬೈಲಿನಲ್ಲಿ ದೊಡ್ಡ ಸದ್ದು ಮಾಡತೊಡಗಿದೆ. ಕಳೆದ 2 ದಿನಗಳಿಂದ ನಿರಂತರವಾಗಿ ಈ ಭಾಗದಲ್ಲಿ ಕಾಡಾನೆ ದಾಳಿ ಮಾಡುತ್ತಿದ್ದು ಕೃಷಿಗೆ ಹಾನಿಯುಂಟು ಮಾಡಿದೆ. ಕಳೆದ ರಾತ್ರಿ ನೂಜಿಬೈಲು ನಾರಾಯಣ ರೈ, ಶರತ್ ಕುಮಾರ್ ರೈ, ಜಯಪ್ರಕಾಶ್ ರೈ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆ ಕೃಷಿಗೆ ಹಾನಿ ಮಾಡಿದೆ. ಬಾಳೆ ಗಿಡ, ದೀವಿ ಹಲಸು ಸೇರಿದಂತೆ ಇನ್ನಿತರ ಕೃಷಿಗಳಿಗೆ ಹಾನಿಯುಂಟು ಮಾಡಿದೆ.
ಕಾಡಾನೆ ದಾಳಿಯಿಂದಾಗಿ ಸ್ಥಳೀಯರು ಆತಂಕಗೊಂಡಿದ್ದು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.