ಕೌಡಿಚ್ಚಾರ್: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೌಡಿಚ್ಚಾರ್ ಎಂಬಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ಸರಾಗವಾಗಿ ಹರಿಯದೆ ಇರುವುದರಿಂದ ರಾಜ್ಯ ಹೆದ್ದಾರಿ ಬಳಿ ಸುಳ್ಯಪದವು ರಸ್ತೆಯಲ್ಲಿ ಮಳೆ ನೀರು ನಿಂತಿದ್ದು ದೊಡ್ಡ ಹಳ್ಳದಂತಾಗಿದೆ.
ಕೌಡಿಚ್ಚಾರಿನ ತಿರುವಿನಲ್ಲಿ ಈ ಕೃತಕ ಹಳ್ಳ ನಿರ್ಮಾಣವಾಗಿದ್ದು ಸುಳ್ಯಪದವಿನಿಂದ ಬರುವ ದ್ವಿಚಕ್ರ ವಾಹನಗಳು, ಬಸ್ಸು, ಕಾರುಗಳು, ತಿರುವಿನಲ್ಲಿ ಅಪಾಯವನ್ನು ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಳ್ಳವನ್ನು ಮುಚ್ಚಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತ ವ್ಯವಸ್ಥೆಯನ್ನು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.