ಪುತ್ತೂರು: ಕಾರಣಿಕ ಕ್ಷೇತ್ರ ಸಂಟ್ಯಾರುನಲ್ಲಿರುವ ಕಲ್ಲಕಟ್ಟ ಶ್ರೀ ರಾಜಗುಳಿಗನ ಸಾನಿಧ್ಯದಲ್ಲಿ ಅನ್ನಛತ್ರ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಕುಟುಂಬದ ಯಜಮಾನರಾದ ರಾಧಾಕೃಷ್ಣ ನಾಕ್ ಮತ್ತು ರತ್ನಾಕರ್ ನಾೖಕ್ ರವರು ಆಗಮಿಸಿ ಜೀರ್ಣೋದ್ದಾರ ಕೆಲಸ ಕಾರ್ಯಗಳನ್ನು ವೀಕ್ಷಿಸಿ 25೦೦೦ ರೂ.ಗಳ ಚೆಕ್ ನ್ನು ಜೀರ್ಣೋದ್ದಾರ ಸಮಿತಿಗೆ ಹಸ್ತಾಂತರಿಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು ರವರು ಅವರಿಬ್ಬರಿಗೆ ಶಾಲು ಹಾಕಿ ಹೂವು ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬೀರಣ್ಣ ರೈ ಮೋಡಪ್ಪಾಡಿ, ರಾಮಯ್ಯ ರೈ ಮಲಾರ್, ಎಸ್ ಮಾಧವ ರೈ ಕುಂಬ್ರ, ವಿಶ್ವನಾಥ ಪೂಜಾರಿ ಕಲ್ಲಕಟ್ಟ, ಪಂಚಾಯತ್ ಸದಸ್ಯರಾದ ಹರೀಶ್ ನಾಯಕ್ ವಾಗ್ಲೆ, ಕಿರಣ್ ರೈ ಪುಂಡಿಕಾಯಿ, ಅಶೋಕ್ ಅಮೀನ್, ಉಪೇಂದ್ರ ಸಂಟ್ಯಾರು, ವಿವಿತ್ ಕಲ್ಲಕಟ್ಟ, ಸತೀಶ್ ಕಾಯರಪ್ಪು, ಅಣ್ಣು ಕಾಯರಪ್ಪು, ಹರಿಕೃಷ್ಣ ಸಂಟ್ಯಾರು, ರಾಮು ಸಂಟ್ಯಾರು, ನಾರಾಯಣ, ಪವನ್ ಕುಮಾರ್, ಹರಿಪ್ರಸಾದ್, ಅಶೋಕ ಮೂಲ್ಯ, ಮನಸ್ವಿ ಪೈಕ ಮತ್ತಿತರರು ಉಪಸ್ಥಿತರಿದ್ದರು.