ಸವಣೂರು : ಸವಣೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಲವು ವರ್ಷಗಳಿಂದ ಸರಿಯಾದ ಸೇವೆ ದೊರಕದೆ ಗ್ರಾಹಕರು ಪರದಾಡುವಂತಾಗಿದೆ. ಹಲವಾರು ಬಾರಿ ಬ್ಯಾಂಕ್‌ನ ಶಾಖಾಧಿಕಾರಿಗಳು, ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಸೇವೆಯಲ್ಲಿ ಯಾವುದೇ ಸುಧಾರಣೆ ಆಗಿರುವುದಿಲ್ಲ. ಹಿರಿಯ ಗ್ರಾಹಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸವಣೂರು ಹಾಗೂ ಅಕ್ಕಪಕ್ಕದ ಗ್ರಾಮಗಳ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಗುಣಮಟ್ಟದ, ಗ್ರಾಹಕ ಸ್ನೇಹಿ ಸೇವೆಯಲ್ಲಿ ಒದಗಿಸುವಂತೆ ಆಗ್ರಹಿಸಿ ಸವಣೂರಿನ ಕೆನರಾ ಬ್ಯಾಂಕ್ ಶಾಖೆಯ ಮುಂಭಾಗದಲ್ಲಿ ಗ್ರಾಹಕರಿಂದ ಪ್ರತಿಭಟನೆ ನ.4ರಂದು ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸವಣೂರು ಕೆ.ಸೀತಾರಾಮ ರೈ ,ರಾಕೇಶ್ ರೈ ಕೆಡೆಂಜಿ,ಮಹೇಶ್ ಕೆ.ಸವಣೂರು, ಗಿರಿಶಂಕರ ಸುಲಾಯ,ಎಂ.ಎ.ರಫೀಕ್ ,ಸುರೇಶ್ ರೈ ಸೂಡಿಮುಳ್ಳು ,ಅಶ್ವಿನ್ ಎಲ್ ಶೆಟ್ಟಿ ಮಾತನಾಡಿದರು.
ಸಚಿನ್ ಭಂಡಾರಿ ಮನವಿ ಪತ್ರ ವಾಚಿಸಿದರು.ಬಳಿಕ ಬ್ಯಾಂಕಿನ ಅಧಿಕಾರಿಗಳು ಪ್ರತಿಭಟನಾ ನಿರತರೊಂದಿಗೆ ಮಾತನಾಡಿ ,ಸಮಸ್ಯೆ ಸರಿಪಡಿಸುವ ಕುರಿತು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.15ದಿನಗಳೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ ಬೃಹತ್ ಹೋರಾಟ ನಡೆಸುವುದಾಗಿ ಸಾರ್ವಜನಿಕರು ಅಧಿಕಾರಿಗಳಿಗೆ ಸೂಚಿಸಿದರು.