ಪುತ್ತೂರು: ಪುತ್ತೂರು ತಾಲೂಕಿನ ಹಲವೆಡೆ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದ್ದು ಕೃಷಿಕರು ಕಂಗಾಲಾಗಿದ್ದಾರೆ. ತಾಲೂಕಿನ ಕೆಯ್ಯೂರು, ಬಡಗನ್ನೂರು, ಕುಟ್ರುಪ್ಪಾಡಿ, ಇಚ್ಲಂಪಾಡಿ ಮತ್ತು ಕೊಳ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಕೃಷಿಕರ ತೋಟದಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ.
ಸಂಪರ್ಕಮನೆ ಬಾಲಕೃಷ್ಣ ಗೌಡ ಕಕ್ಕಿನಡ್ಕದ ಧನರಾಜ್ ಭಟ್, ಕೃಷ್ಣಪ್ಪ ಗೌಡ, ತಮ್ಮಯ್ಯ ಗೌಡ ಮತ್ತು ವಿಟ್ಲ ಠಾಣೆಯಲ್ಲಿ ಏಎಸ್ಐ ಆಗಿರುವ ಬಾಲಕೃಷ್ಣ ಗೌಡ ಅವರ ಅವರ ತೋಟ ಅಡಿಕೆ ತೋಟದಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಕೆಯ್ಯುರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ತೋಟಗಳಲ್ಲಿಯೂ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ ಎಂದು ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎ ಕೆ ಜಯರಾಮ ರೈ ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪುತ್ತೂರು ಶಾಸಕರು ಈ ಬಗ್ಗೆ ಸರಕಾರದ ಗಮನಸೆಳೆದು ಪರಿಹಾರ ಒದಗಿಸಿ ಕೊಡುವಲ್ಲಿ ಸಹಕರಿಸುವಂತೆ ರೋಗಭಾದಿತ ತೋಟದ ಮಾಲೀಕರು ಒತ್ತಾಯಿಸಿದ್ದಾರೆ.