ಬೆಟ್ಟಂಪಾಡಿ: ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭವು ಪ್ರಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ಆತಿಥ್ಯದಲ್ಲಿ ನ. 14 ರಂದು ನಡೆಯಲಿದೆ. ಎಸ್ಸಿಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ನಿರ್ದೇಶಕಾಗಿರುವ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಆತಿಥ್ಯ ವಹಿಸಲಿದ್ದು, ಅದರ ಪೂರ್ವಭಾವಿಯಾಗಿ ಸಂಘದ ನಿರ್ದೇಶಕರು ಮತ್ತು ಸದಸ್ಯರ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರ ಬಿಡುಗಡೆಯು ನ. 5 ರಂದು ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಎಸ್. ರಂಗನಾಥ ರೈ ಗುತ್ತು ರವರು ಮಾತನಾಡಿ ‘ನಮಗೆ ಜವಾಬ್ದಾರಿ ದೊರೆತಿದೆ. ನಾವೆಲ್ಲಾ ಒಟ್ಟಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿದೆ. ಒಳ್ಳೆಯ ರೀತಿಯಲ್ಲಿ ಮಾದರಿ ಕಾರ್ಯಕ್ರಮವಾಗುವಲ್ಲಿ ನಿಮ್ಮೆಲ್ಲರ ಸಹಕಾರ ಇರಲಿ’ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ನಿರ್ದೇಶಕರೂ, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ‘ಜಿಲ್ಲಾ ಮಟ್ಟದ ಸಹಕಾರಿ ಸಪ್ತಾಹ ಪುತ್ತೂರು ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ನಡರಯುತ್ತಿದೆ. ಬೆಟ್ಟಂಪಾಡಿ ಯಲ್ಲಿ ಇದನ್ನು ಆಯೋಜಿಸುತ್ತುರುವುದು ಬಯಸದೇ ಬಂದ ಭಾಗ್ಯ. ಈ ಬಾರಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯಕ್ಕೆ ಬಂದಿತ್ತು. ಚುನಾವಣಾ ಹಿನ್ನೆಲೆಯಲ್ಲಿ ಅಲ್ಲಿ ನಡೆಸಲಾಗದ ಹಿನ್ನೆಲೆಯಲ್ಲಿ ನಮ್ಮ ಸಂಘದ ಆಶ್ರಯಕ್ಕೆ ಬಂದಿರುತ್ತದೆ. ಕಾರ್ಯಕ್ರಮ ಯಶಸ್ಸಿಗೆ ತಮ್ಮೆಲ್ಲರ ಸಹಕಾರ ಯಾಚಿಸುತ್ತೇವೆ’ ಎಂದರು.
ಸಂಘದ ಮಾಜಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ದರ್ಭೆ ಶುಭ ಹಾರೈಸಿದರು. ಮಾಜಿ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ಸಂಘದ ನಿರ್ದೇಶಕರಾದ ಕರುಣಾಕರ ಶೆಟ್ಟಿ ಕೊಮ್ಮಂಡ, ಶೇಷಪ್ಪ ರೈ ಮೂರ್ಕಾಜೆ, ಚಂದ್ರನ್ ತಲೆಪ್ಪಾಡಿ, ಸದಾಶಿವ ರೈ ಚೆಲ್ಯಡ್ಕ, ಹರೀಶ್ ಗೌಡ, ನಾಗರಾಜ್ ಕಜೆ, ದೀಪಿಕಾ ಪಿ. ರೈ, ಆಶಾ ಅರವಿಂದ, ದೇವಪ್ಪ ನಾಯ್ಕ್, ಮೇಲ್ವಿಚಾರಕ ವಸಂತ್ ಎಸ್., ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಮಹೇಶ್ ಕೋರ್ಮಂಡ, ಪಾರ್ವತಿ ಗೌಡ, ಮೊಯಿದುಕುಂಞಿ ಕೋನಡ್ಕ, ಚಂದ್ರಶೇಖರ ರೈ ಬಾಲ್ಯೊಟ್ಟು, ಸಂಘದ ಸದಸ್ಯರಾದ ತ್ಯಾಂಪ ನಾಯ್ಕ್ ಕಜೆ, ಅಬೂಬಕ್ಕರ್ ಕೊರಿಂಗಿಲ, ಕೆ.ಪಿ. ಭಟ್ ಕೋನಡ್ಕ, ನಾಗರಾಜ್ ಭಟ್, ಸತೀಶ್ ರೈ ಮೂರ್ಕಾಜೆ, ವೇಣುಗೋಪಾಲ್ ಕಜೆ, ಸುಜಿತ್ ಕಜೆ, ಸಂದೀಪ್ ರೈ ಬಾಜುವಳ್ಳಿ, ಶಿವಕುಮಾರ್ ಬಲ್ಲಾಳ್, ಪ್ರಮೋದ್ ರೈ ಗುತ್ತು, ಅಮೃತಪ್ರಸಾದ್ ರೈ ಗುತ್ತು, ಪ್ರಸಾದ್ ಭಟ್, ದೂಮ ಪೂಜಾರಿ ಕಳೆಂಜಿಲ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಸಿಇಒ ಪಿ. ರಾಮಯ್ಯ ರೈ ಸ್ವಾಗತಿಸಿದರು.
ಪ್ರಪ್ರಥಮ ಬಾರಿ ಮತ್ತು ಕೊನೆಯ ಅವಕಾಶ – ಶಶಿಕುಮಾರ್ ರೈ ಬಾಲ್ಯೊಟ್ಟು
ಪೂರ್ವಭಾವಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕೂ, ಸಂಘದ ನಿರ್ದೇಶಕರೂ ಅದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ‘ಜಿಲ್ಲಾ ಮಟ್ಟದ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭ ಪ್ರಪ್ರಥಮ ಬಾರಿಗೆ ಪುತ್ತೂರು ತಾಲೂಕಿಗೆ ದೊರೆತಿದೆ. ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ. ಒಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ನಡೆಯುವ ಸಹಕಾರ ಸಪ್ತಾಹ ಇನ್ನು ಕೊನೆಗಾಣಲಿದ್ದು, ಮುಂದಿನ ವರ್ಷದಿಂದ ಪ್ರತೀ ತಾಲೂಕಿನ ಕೇಂದ್ರ ಭಾಗದಲ್ಲಿ ಸಭಾಭವನಗಳಲ್ಲಿ ಸಹಕಾರ ಸಪ್ತಾಹ ನಡೆಸುವುದೆಂದು ಜಿಲ್ಲಾ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೆಟ್ಟಂಪಾಡಿಯ ಸಂಘಕ್ಕೆ ದೊರೆತಿರುವ ಕೊನೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರಲ್ಲಿದೆ’ ಎಂದರು.