ಎಸ್ ಕೆ ಎಸ್ ಎಸ್ ಎಫ್ ರೆಂಜಲಾಡಿ ಕ್ಲಸ್ಟರ್ ಕಲೋತ್ಸವ

0

ಪುತ್ತೂರು: ಎಸ್ ಕೆ ಎಸ್ ಎಸ್ ಎಫ್ ರೆಂಜಲಾಡಿ ಕ್ಲಸ್ಟರ್ ಮಟ್ಟದ ಪ್ರತಿಭೆಗಳ ಕಲರವ ಕಲೋತ್ಸವ ಕಾರ್ಯಕ್ರಮ ಮುಂಡೂರು ಸಿ.ಎ ಬ್ಯಾಂಕ್ ಸಭಾಭವನದಲ್ಲಿ ಕ್ಲಸ್ಟರ್ ಅಧ್ಯಕ್ಷ ಮಹಮ್ಮದ್ ಅಝರುದ್ದೀನ್ ಕೂಡುರಸ್ತೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಂಡೂರು ಮಸೀದಿಯ ಖತೀಬ್ ಆಸಿಫ್ ಫೈಝಿ ದುವಾ ನೆರವೇರಿಸಿದರು. ಎಸ್ ಕೆ ಎಸ್ ಎಸ್ ಎಫ್ ದ.ಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾಸಿರ್ ಅರಾಫತ್ ಕೌಸರಿ ಕಾರ್ಯಕ್ರಮ ಉದ್ಘಾಟಿಸಿದರು. ಮೂರು ಯುನಿಟ್ ವ್ಯಾಪ್ತಿಯ ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಲಯಾಧ್ಯಕ್ಷ ಮನ್ಸೂರ್ ಅಸ್ಲಮಿ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್, ಮುಕ್ವೆ ಮಸೀದಿ ಅಧ್ಯಕ್ಷ ಇಬ್ರಾಹಿಂ ಮುಲಾರ್, ಅಜ್ಜಿಕಟ್ಟೆ ಮಸೀದಿ ಅಧ್ಯಕ್ಷ ಅಬೂಬಕರ್ ಮುಲಾರ್, ಕೂಡುರಸ್ತೆ ಖತೀಬ್ ಬದ್ರುದ್ದೀನ್ ರಹ್ಮಾನಿ, ಉದ್ಯಮಿಗಳಾದ ಇಸ್ಮಾಯಿಲ್ ದರ್ಬೆ, ಯಾಕೂಬ್ ಮುಲಾರ್, ಇಮ್ರಾನ್ ಮಲ್ನಾಡ್, ರಝಾಕ್ ಬಿ.ಜಿ, ರಫೀಕ್ ರೆಂಜಲಾಡಿ, ಇಸಾಕ್ ಬಿ.ಜಿ ರೆಂಜಲಾಡಿ, ಇಬ್ರಾಹಿಂ ಅಜ್ಜಿಕಲ್ಲು, ಶರೀಫ್ ಅಜ್ಜಿಕಲ್ಲು, ಶರೀಫ್ ಕೂಡುರಸ್ತೆ, ಇಕ್ಬಾಲ್ ಮುಸ್ಲಿಯಾರ್, ಹಬೀಬ್ ಸುಲ್ತಾನ್, ಆಸಿಫ್ ರೆಂಜಲಾಡಿ, ಹಾರಿಸ್ ಕೂಡುರಸ್ತೆ, ಎಸ್ಕೆಎಸ್ಸೆಸ್ಸೆಫ್ ರೆಂಜಲಾಡಿ ಯುನಿಟ್ ಅಧ್ಯಕ್ಷ ಅಬ್ದುಲ್ ಅಝೀಝ್, ಕೂಡುರಸ್ತೆ ಯುನಿಟ್ ಅಧ್ಯಕ್ಷ ಮಜೀದ್ ಬಾಳಾಯ, ಮುಂಡೂರು ಯುನಿಟ್ ಅಧ್ಯಕ್ಷ ಅಶ್ರಫ್ ಮುಲಾರ್, ಕ್ಲಸ್ಟರ್ ಸಂಘಟನಾ ಕಾರ್ಯದರ್ಶಿ ನೌಶಾದ್ ಕಳಂಜ, ಮುಂಡೂರು ಯುನಿಟ್ ಕಾರ್ಯದರ್ಶಿ ಮುಸ್ತಫಾ, ಕೋಶಾಧಿಕಾರಿ ಯಾಕೂಬ್ ಆಲಡ್ಕ ಹಾಗೂ ಮೂರು ಯುನಿಟ್‌ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಕೂಡುರಸ್ತೆ ತಂಡ ಚಾಂಪಿಯನ್, ರೆಂಜಲಾಡಿ ತಂಡ ರನ್ನರ‍್ಸ್ ಹಾಗೂ ಮುಂಡೂರು ತಂಡ ತೃತೀಯ ಸ್ಥಾನ ಪಡೆಯಿತು. ಪರ್ವೇಝ್ ಅಕ್ತರ್, ಶಾಹಿರ್ ಯಮಾನಿ ತೀರ್ಪುಗಾರರಾಗಿ ಸಹಕರಿಸಿದರು. ಕ್ಲಸ್ಟರ್ ಕಾರ್ಯದರ್ಶಿ ಝೈನುದ್ದೀನ್ ಹಾಜಿ ಜೆ.ಎಸ್ ಸ್ವಾಗತಿಸಿದರು. ನಾಸಿರ್ ಫೈಝಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here