ಕುದ್ಮಾರು: ಕುದ್ಮಾರು ಹಿರಿಯ ಪ್ರಾಥಮಿಕ ಶಾಲೆ, ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಥಿ೯ಗಳು ಭಾಗವಹಿಸಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಕಿರಿಯ ವಿಭಾಗದಲ್ಲಿ, 2ನೇ ತರಗತಿಯ ತನಯ್ ಡಿ ಕೆ ಛದ್ಮವೇಷದಲ್ಲಿ ಪ್ರಥಮ, 4ನೇ ತರಗತಿಯ ಅಹಮ್ಮದ್ ಫಾಝ್ ಕನ್ನಡ ಕಂಠಪಾಠ ಪ್ರಥಮ, 4ನೇ ತರಗತಿಯ ಮಹಮ್ಮದ್ ಲಿಬ್ಝ್ , ಆಶುಭಾಷಣ ಪ್ರಥಮ, 3ನೇ ತರಗತಿ ಸಮನ್ಯು ಕೆ ಎ, ಸಂಸ್ಕೃತ ಕಂಠಪಾಠ ತೃತೀಯ, 3ನೇ ತರಗತಿಯ ಹಸ್ಮಿತಾ ಶೆಟ್ಟಿ ಕಥೆ ಹೇಳುವುದು ದ್ವಿತೀಯ, 3ನೇಯ ತರಗತಿಯ ನೀರೀಕ್ಷಾ ವೈ ಆರ್, ಅಭಿನಯ ಗೀತೆಯಲ್ಲಿ ತೃತೀಯ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿಯ ಕೃಪಾಲಿ ಎಸ್ ಡಿ ಅಭಿನಯ ಗೀತೆಯಲ್ಲಿ ಪ್ರಥಮ, 7ನೇ ತರಗತಿಯ ಫಾತಿಮತ್ ಬಾಶಿಲ ಹಿಂದಿ ಕಂಠಪಾಠ ಪ್ರಥಮ, 5ನೇ ತರಗತಿಯ ಮನ್ವಿತ್ ಹೆಚ್ ಆಚಾರ್ಯ ಚಿತ್ರಕಲೆ ಪ್ರಥಮ, 5ನೇ ತರಗತಿ ಯ ಪ್ರಣವ್ ಸಂಸ್ಕೃತ ಕಂಠಪಾಠ ದ್ವಿತೀಯ, 7ನೇ ತರಗತಿ ಆಯಿಷತ್ ಸಮೀದಾ ಕವನ ವಾಚನ ದ್ವಿತೀಯ 7ನೇ ತರಗತಿಯ ಆಯಿಷತ್ ಶಮ್ನ ಆಶುಭಾಷಣ ದ್ವಿತೀಯ, 6ನೇ ತರಗತಿಯ ಮಹಮ್ಮದ್ ತ್ವಲ್ ಹಾ ಅರೇಬಿಕ್ ಧಾರ್ಮಿಕ ಪಠಣದಲ್ಲಿ ದ್ವಿತೀಯ, ಸ್ಥಾನ ಪಡೆದು ಕೊಂಡಿರುತ್ತಾರೆ. ತನಯ್ ಡಿ ಕೆ, ಅಹಮ್ಮದ್ ಫಾಝ್, ಮಹಮ್ಮದ್ ಲಿಬ್ಝ್, ಕೃಪಾಲಿ ಎಸ್ ಡಿ, ಫಾತಿಮತ್ ಬಾಶಿಲ, ಮನ್ವಿತ್ ಹೆಚ್ ಆಚಾರ್ಯ ಈ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಂಚಾಲಕರಾದ ಸವಣೂರು ಸೀತಾರಾಮ ರೈ ರವರು, ಆಡಳಿತಾಧಿಕಾರಿಯಾದ ಅಶ್ವಿನ್ ಎಲ್ ಶೆಟ್ಟಿ ಅವರು ಅಭಿನಂದಿಸಿದರು.