ಕುಂಬ್ರದಲ್ಲಿ ನೀರಿನ ಸದ್ಭಳಕೆಯ ಅರಿವು ಮೂಡಿಸಿದ ಬೀದಿ ನಾಟಕ

0

ಪುತ್ತೂರು: ಜಿಲ್ಲಾ ಪಂಚಾಯತ್ ಜಲಜೀವನ್ ಮಿಷನ್(ಜೆಜೆಎಂ)ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಗಳಡಿಯಲ್ಲಿ 2024-25ನೇ ಸಾಲಿನ ಮಾಹಿತಿ, ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ದಿ ಕಾರ್ಯಕ್ರಮದಡಿಯಲ್ಲಿ ನೀರಿನ ಸದ್ಭಳಕೆಯ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ನ.13 ರಂದು ಕುಂಬ್ರ ಜಂಕ್ಷನ್‌ನಲ್ಲಿ ನಡೆಯಿತು.

ಜರ್ನಿ ಥಿಯೇಟರ್ ಮಂಗಳೂರು ಇವರು ಸಾದರ ಪಡಿಸಿದ ಬೀದಿ ನಾಟಕವನ್ನು ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹಾಗೂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಅಲ್ಲದೆ ಇತರ ಸದಸ್ಯರುಗಳು, ಅಧಿಕಾರಿಗಳು ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು. ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವ ಬಗ್ಗೆ ಹಾಗೇ ಜಲಜೀವನ್ ಮಿಷನ್ ಬಗ್ಗೆ ನಾಟಕದಲ್ಲಿ ವಿವರಿಸಲಾಯಿತು.

ಕೊಳಚೆ ನೀರನ್ನು ಕುಡಿಯುವುದರಿಂದ ಆಗುವ ತೊಂದರೆಗಳ ಬಗ್ಗೆ ಜನರಿಗೆ ಮನದಟ್ಟಾಗುವ ರೀತಿಯಲ್ಲಿ ನಾಟಕ ತಂಡದವರು ಅಭಿನಯಿಸಿ ತೋರಿಸಿದರು.


ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಕಾರ್ಯದರ್ಶಿ ಜಯಂತಿ, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ಶೀನಪ್ಪ ನಾಯ್ಕ, ರೇಖಾ ಬಿಜತ್ರೆ, ಸುಂದರಿ, ನಳಿನಾಕ್ಷಿ ಅಲ್ಲದೆ ಆಶಾ ಕಾರ್ಯಕರ್ತೆಯರು,ಶಾಲಾ ಮುಖ್ಯಗುರುಗಳು, ಶಿಕ್ಷಕ ವೃಂದವರು ಮತ್ತು ಅಂಗನವಾಡಿ ಶಿಕ್ಷಕಿಯರು, ರಾಜೇಶ್ ರೈ ಪರ್ಪುಂಜ, ಕರುಣಾಕರ ಗೌಡ ಎಲಿಯ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here