ಪುತ್ತೂರು:ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಆಶಾಜ್ಯೋತಿ ಅಧ್ಯಕ್ಷತೆಯಲ್ಲಿ,ವಿಕಲ ಚೇತನರ ನೋಡೆಲ್ ಅಧಿಕಾರಿ ವಾಣಿ ಶ್ರೀ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ದೀಪಕ್ ರೈರವರ ಮಾರ್ಗದರ್ಶನದಲ್ಲಿ ಹಾಗೂ ಪುತ್ತೂರು ತಾಲೂಕು ಪಂಚಾಯತ್ ವಿಕಲ ಚೇತನರ ಬಹು ಮಟ್ಟದ ಪುನರ್ ವಸತಿ ಕಾರ್ಯಕರ್ತರಾದ ನವೀನ್ ಕುಮಾರ್ ಉಪ್ಪಸ್ಥಿತಿಯಲ್ಲಿ ಯುಡಿಐಡಿ ಮನೋರೋಗ ವಿಕಲಚೇತನರ ಪ್ರಮಾಣ ಪತ್ರ ನ.12ರಂದು ನಡೆಯಿತು.
ಶಿಬಿರವನ್ನು ದಕ್ಷಿಣ ಕನ್ನಡ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಮಾನಸಿಕ ತಜ್ಞೆ ಪ್ರಜಕ್ತ ನಡೆಸಿಕೊಟ್ಟರು. ಮಾನಸಿಕ ಆರೋಗ್ಯ ವಿಭಾಗದ ಸಿಬ್ಬಂದಿಗಳು, ಪುತ್ತೂರು ಹಾಗೂ ಕಡಬ ತಾಲೂಕಿನ ಎಲ್ಲಾ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.