ಪುತ್ತೂರು: ಚಿನ್ನದ ಕಸೂತಿ ಕೆಲಸಗಾರ ನೇಣು ಬಿಗಿದು ಆತ್ಮಹತ್ಯೆ

0

ಪುತ್ತೂರು: ಇಲ್ಲಿನ ಜ್ಯುವೆಲ್ಸ್ ವೊಂದರಲ್ಲಿ ಚಿನ್ನದ ಕಸೂತಿ ಕೆಲಸ ಮಾಡುತ್ತಿದ್ದ ಕಿರಣ್ (42ವ.)ರವರು ಹಾರಾಡಿ ನಂದಿಲದಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.15ರಂದು ನಡೆದಿದೆ.


ಕಿರಣ್ ಅವರು ತಾನು ವಾಸವಾಗಿದ್ದ ಮನೆ ಮಹಡಿಗೆ ಹಾಸಲಾದ ಶೀಟ್ ಅಡ್ಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ನ.15ರಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದರಾದರೂ ಕೆಲಸದ ಸ್ಥಳಕ್ಕೆ ಬಂದಿರಲಿಲ್ಲ. ಆದರೆ ಮಧ್ಯಾಹ್ನ ವೇಳೆ ಅವರು ಮನೆಯ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಮೃತರು ತಂದೆ ಬಿ.ಎಮ್ ಗಣೇಶ್ ಆಚಾರ್ಯ, ಪತ್ನಿ ವಿದ್ಯಾ, ಮಗು, ಸಹೋದರಿ, ಸಹೋದರನನ್ನು ಅಗಲಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here