ಕೊಡಿಪ್ಪಾಡಿ: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಒಕ್ಕಲಿಗ ಸ್ವ ಸಹಾಯ ಸಂಘಗಳಿರುವ ಎಲ್ಲ ಗ್ರಾಮಗಳಲ್ಲಿ ದಾಂಪತ್ಯ ಜೀವನದ ಐವತ್ತು ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ನ.15 ರಂದು ಪುತ್ತೂರು ವಲಯದ ಕೊಡಿಪ್ಪಾಡಿ ಗ್ರಾಮ ಒಕ್ಕೂಟದ ದಿನೇಶ್ ಗೌಡ ಗೋಮುಖ ಇವರ ಮನೆಯಲ್ಲಿ ಮೂರು ದಂಪತಿಗಳಿಗೆ ಸನ್ಮಾನ ಮಾಡಲಾಯಿತು.
ಪುಷ್ಪಾವತಿ ಮತ್ತು ಕೊರಗಪ್ಪ ಗೌಡ ಗೋಮುಖ ಮನೆ, ಸೀತಮ್ಮ ಮತ್ತು ಜಿನ್ನಪ್ಪ ಗೌಡ ಬನ್ಪು ಮನೆ, ಸೀತಾ ಮತ್ತು ಪಕ್ರು ಗೌಡ ನಂದನ ಮನೆ, ದಂಪತಿಗಳಿಗೆ ಸನ್ಮಾನ ನಡೆಸಲಾಯಿತು ಮತ್ತು ರಾಮಕ್ಕ ಮತ್ತು ವೆಂಕಪ್ಪ ಗೌಡ ಕೊಡಿಪ್ಪಾಡಿ ಮನೆ, ಶಿವಮ್ಮ ಮತ್ತು ನಾರ್ಣಪ್ಪ ಗೌಡ ಕೊಂಟ್ರುಪ್ಪಾಡಿ ಮನೆ, ಶಿವಮ್ಮ ಮತ್ತು ಮಾಯಿಲಪ್ಪ ಗೌಡ ಕೊರ್ಜೆ ಮನೆ ಇವರುಗಳ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯದ ಒಕ್ಕೂಟದ ಅಧ್ಯಕ್ಷರು ನಿವೃತ್ತ ಎ.ಎಸ್.ಐ ಆಗಿರುವ ಲೋಕನಾಥ ಗೌಡ ಕಾಡಮನೆ,ಸ್ವ ಸಹಾಯ ಸಂಘದ ಒಕ್ಕೂಟದ ಅಧ್ಯಕ್ಷರಾದ ರಾಧಾಕೃಷ್ಣ ಗೌಡ ನಂದನ, ಗ್ರಾಮ ಸಮಿತಿ ಅಧ್ಯಕ್ಷರಾದ ಗಿರೀಶ್ ಗೌಡ ಗೋಮುಖ,ಯುವ ಸಂಘದ ಅಧ್ಯಕ್ಷರಾದ ದಿನೇಶ್ ಗೌಡ ಗೋಮುಖ, ಮಹಿಳಾ ಸಂಘದ ಅಧ್ಯಕ್ಷರಾದ ವಿಶಾಲಾಕ್ಷಿ ಗೋಮುಖ ಹಾಗು ಒಕ್ಕೂಟದ ಪದಾಧಿಕಾರಿಗಳು, ಊರ ಗೌಡರಾದ ಪಂಕ್ರು ಗೌಡ ನಂದನ, ನಾರಾಯಣ ಗೌಡ ಕಜೆ, ಉಗ್ಗಪ್ಪ ಗೌಡ ಹನಿಯಾಲು ವಲಯದ ಮೇಲ್ವಿಚಾರಕರಾದ ಸುಮಲತಾ, ಪ್ರೇರಕಿ ನಮಿತಾ ಹಾಗು ಊರಿನ ಸಮಾಜ ಬಾಂಧವರು ಉಪಸ್ಥಿತರಿದ್ದರು.