ಪುತ್ತೂರು: ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ರಕ್ಷಕ – ಶಿಕ್ಷಕ ಸಂಘದ ಆಶ್ರಯದಲ್ಲಿ ವಿಶ್ವೇಶ ಸೇವಾ ಸಮಿತಿಯ ವಾರ್ಷಿಕ ಶಿಬಿರದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎರಡು ದಿನದ ನಾಟಕದ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜರಗಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ ಎಂ ದೀಪ ಪ್ರಜ್ವಲಿಸುವ ಮೂಲಕ ತರಬೇತಿಯನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಾಟಕ ತರಬೇತುದಾರರಾದ ನೀನಾಸಂ ಪದವೀಧರೆ ಭವಾನಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಜೊತೆ ತಮ್ಮ ನಾಟಕ ಜೀವನದ ಅನುಭವಗಳನ್ನು ಹಂಚಿಕೊಂಡರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ ಸ್ವಾಗತಿಸಿದರು. ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿಗಳಾದ ಶಿಕ್ಷಕ ವೆಂಕಟೇಶ ದಾಮ್ಲೆ ತರಬೇತಿಯ ಉದ್ದೇಶ ಹಾಗೂ ತರಬೇತುದಾರರ ಪರಿಚಯವನ್ನು ಮಾಡಿದರು. ಸಂಸ್ಕೃತ ಉಪನ್ಯಾಸಕ ರವಿ ವಂದಿಸಿದರು. ಶಿಕ್ಷಕಿ ಉಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಜೀವಿತಾ ಪ್ರಾರ್ಥಿಸಿದರು.