ಪುತ್ತೂರು: ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ. ಡಾ| ಪ್ರವೀಣ್ ಲಿಯೊ ಲಸ್ರಾದೊರವರು ಸಂತ ಫಿಲೋಮಿನಾ ಪ್ರೌಢಶಾಲೆಗೆ ಅಧಿಕೃತವಾಗಿ ಭೇಟಿ ನೀಡಿದರು. ಮಾಯಿ ದೇ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ. ಫಾ|ಲಾರೆನ್ಸ್ ಮಸ್ಕರೇನ್ಹಸ್ ಮತ್ತು ಶಾಲಾ ಮುಖ್ಯಗುರು ವಂ.ಮ್ಯಾಕ್ಸಿಮ್ ಡಿಸೋಜಾರವರು ಡಾ| ಪ್ರವೀಣ್ ಲಿಯೊ ಲಸ್ರಾದೊರವರನ್ನು ಎನ್.ಸಿ.ಸಿ., ಸ್ಕೌಟ್ಸ್, ಗೈಡ್ಸ್ ಹಾಗೂ ಬ್ಯಾಂಡ್‌ನೊಂದಿಗೆ ಗೌರವವಂದನೆ ನೀಡಿ, ಬೆಳಿಗ್ಗೆ ನಡೆದ ಶಾಲಾ ಅಸೆಂಬ್ಲಿಯಲ್ಲಿ ಸ್ವಾಗತ ನೀಡಿದರು. ಡಾ| ಪ್ರವೀಣ್ ಲಿಯೋ ಲಸ್ರಾದೊರವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಂದೆ, ತಾಯಿ ಹಾಗೂ ಶಿಕ್ಷಕರಿಗೆ ಗೌರವ ನೀಡಬೇಕು. ಅಲ್ಲದೆ ದೇಶಪ್ರೇಮವನ್ನು ಪ್ರತಿಯೊಬ್ಬರೂ ಬೆಳೆಸಬೇಕು. ಎಲ್ಲಾ ಸಹಪಾಠಿಗಳಿಗೂ ಗೌರವ ಹಾಗೂ ಪ್ರೀತಿ ತೋರಬೇಕು ಎಂದು ತಿಳಿಸಿದರು. ಬಳಿಕ ಪ್ರತಿ ತರಗತಿಗಳಿಗೆ ಬೇಟಿ ಮಾಡಿ ಶಿಸ್ತು ಹಾಗೂ ಕಲಿಕೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳ ಸಭೆಯನ್ನು ನಡೆಸಿ ಒಗ್ಗಟ್ಟಿನಲ್ಲಿ ಶಿಕ್ಷಕರು ತಮ್ಮ ಅಮೂಲ್ಯ ಸೇವೆಯನ್ನು ನೀಡಬೇಕು. ಎಲ್ಲಾ ಶಿಕ್ಷಕರು ಕ್ರಿಯಾಶೀಲರಾಗಿದ್ದು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೆಳಿದರು.
ವಿದ್ಯಾರ್ಥಿಗಳು ನಾಡಗೀತೆ, ರಾಷ್ಟ್ರಗೀತೆಯ ನಂತರ ದಿನದ ಹಿತನುಡಿ ಹಾಗೂ ವಾರ್ತೆಯನ್ನು ವಾಚಿಸಿದರು. ಕಾರ್ಮಿನ್ ಪಾಯಸ್‌ರವರು ಡಾ|ಪ್ರವೀಣ್ ಲಿಯೊ ಲಸ್ರಾದೊರ ಪರಿಚಯ ನೀಡಿದರು. ಶಿಕ್ಷಕಿ ಮೋಲಿ ಫೆನಾಂಡಿಸ್ ವಂದಿಸಿದರು. ಶಾಲಾ ಶಿಕ್ಷಕ ಕ್ಲೆಮೆಂಟ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.