ಬಂಡಿತ್ತಡ್ಕ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ ಆಚರಣೆ

0

ಕನ್ನಡದಲ್ಲಿ ವ್ಯವಹರಿಸಬೇಕು, ಶಾಲೆಗಳನ್ನು ಉಳಿಸಬೇಕು : ಅಬ್ದುಲ್ ರಹಿಮಾನ್


ಕನ್ಯಾನ: ಇಲ್ಲಿನ ಬಂಡಿತ್ತಡ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕನ್ಯಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮಾತನಾಡಿ ಪರಸ್ಪರ ಪ್ರೀತಿ ಸಹಕಾರದಿಂದ ಕನ್ನಡ ಭಾಷೆಯಲ್ಲಿ ವ್ಯವಹರಿಸುವುದರೊಂದಿಗೆ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದರು. ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಹಾಗೂ ಉಳ್ಳಾಲದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ್ ಕಮ್ಮಜೆ ಮಾತನಾಡಿ ಸರ್ವಧರ್ಮ ಸಮನ್ವಯತೆಯ ಆಧಾರದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಕರೆನೀಡಿದರು.


ಕನ್ಯಾನ ಪಂಚಾಯತ್‌ನ ಮಾಜಿ ಅಧ್ಯಕ್ಷ, ರೈತ ಮುಖಂಡ ಆದ ಡಿ.ಕೆ ಶಾಹುಲ್ ಹಮೀದ್ ಕನ್ಯಾನ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಇಸ್ಮಾಯಿಲ್ ಕುಕ್ಕಾಜೆ ಶುಭ ಹಾರೈಸಿದರು. ಕನ್ಯಾನ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ನಾಯ್ಕ್ ಮರ್ತನಾಡಿ ಅಧ್ಯಕ್ಷತೆ ವಹಿಸಿದ್ದರು. ಇಂದ್ರಜಾಲ ಮಾಂತ್ರಿಕ ರಾಧಾಕೃಷ್ಣ ಕನ್ಯಾನ ಅವರ ಕೈಚಳಕದಲ್ಲಿ ಕನ್ನಡ ಭುವನೇಶ್ವರಿಯ ಭಾವಚಿತ್ರ ಮೂಡಿಬಂದಿತು.


ಗಾಯಕರಾದ ದಿನೇಶ್ ಕನ್ಯಾನ ಹಾಗೂ ರಾಜಶೇಖರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಬುಶ್ರಿಯಾ, ಅಬ್ದುಲ್ ಮಜೀದ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಕಮರುನ್ನೀಸಾ, ಉಪಾಧ್ಯಕ್ಷೆ ಭುವನೇಶ್ವರಿ, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಕಾಶ್ ಕುಟ್ಟಿತ್ತಡ್ಕ, ಹಳೆ ವಿದ್ಯಾರ್ಥಿ ಮತ್ತು ಪೋಷಕ ಶಶಿಧರ್ ಕೆ ಬಂಡಿತ್ತಡ್ಕ ಶಾಲಾ ಮಕ್ಕಳು, ಪೋಷಕರು, ಅಡುಗೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆ ಶಾರದಾ ಮತ್ತು ಸಹಾಯಕಿ ಉಪಸ್ಥಿತರಿದ್ದರು. ಪ್ರಾರ್ಥನಾ ಗೀತೆ, ನಾಡಗೀತೆ ಹಾಗೂ ದ್ವಜ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಸಭಾಕಾರ್ಯಕ್ರಮಕ್ಕೂ ಪೂರ್ವದಲ್ಲಿ ರಾಷ್ಟ್ರಧ್ವಜ ಹಾಗೂ ನಾಡಧ್ವಜಗಳಿಗೆ ಗೌರವ ಸಲ್ಲಿಸಲಾಯಿತು.


ಸಭಾಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಹಾಗೂ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇಂದ್ರಜಾಲ ಮಾಯಾವಿ ರಾಧಾಕೃಷ್ಣ ಕನ್ಯಾನ ಅವರ ಮ್ಯಾಜಿಕ್ ಶೋ ಪ್ರದರ್ಶನವು ಕಾರ್ಯಕ್ರಮದಕ್ಕೆ ಮೆರುಗನ್ನು ನೀಡಿತು. ಹಾಡುಗಾರರಾದ ದಿನೇಶ್ ಹಾಗೂ ರಾಜಶೇಖರ ಶೆಟ್ಟಿ ಇವರಿಂದ ಕನ್ನಡ ನಾಡು ನುಡಿ ಸಂಸ್ಕೃತಿ ಬಿಂಬಿಸುವ ಗಾಯನವು ನಡೆದವು. ಶಾಲಾ ಅತಿಥಿ ಶಿಕ್ಷಕಿ ವನಿತ ಕೆ ಎಲ್ ಇವರು ಕಾರ್ಯಕ್ರಮ ನಿರೂಪಣೆಯನ್ನು ಪ್ರಭಾರ ಮುಖ್ಯ ಶಿಕ್ಷಕಿ ಸೆಕೇನಾ ಎಸ್ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು. ಉಪಹಾರ ಮತ್ತು ಕಾರ್ಯಕ್ರಮದ ಪ್ರಾಜಕತ್ವವನ್ನು ಹಳೆವಿದ್ಯಾರ್ಥಿ ಸಂಘದ ಗೌರವಾದ್ಯಕ್ಷ ಕೃಷ್ಣ ಕುಮಾರ್ ಕಮ್ಮಜೆ ವಹಿಸಿದ್ದರು.

LEAVE A REPLY

Please enter your comment!
Please enter your name here