ಕಂದಾಯ ಇಲಾಖೆಯಿಂದ ಕಾಪಿನಬಾಗಿಲು ರಾಧಾಮ್ಮ ಮನೆ ಧ್ವಂಸ ಪ್ರಕರಣ-ಕಡಬ ತಾಲೂಕು ಕಛೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭ

0

ಕಡಬ ತಹಸೀಲ್ದಾರ್ ಅಮಾನತಿಗೆ ಒತ್ತಾಯ

ಕಡಬ: ಕೌಕ್ರಾಡಿ ಗ್ರಾ.ಪಂ ಕಾಪಿನ ಬಾಗಿಲು ಎಂಬಲ್ಲಿ ವೃದ್ದ ದಂಪತಿಗಳ ಮನೆ ಧ್ವಂಸ ಪ್ರಕರಣ ಸಂಬಂಧಿಸಿ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ನ.20(ಬುಧವಾರ) ಕಡಬ ತಹಶೀಲ್ದರ್ ಕಚೇರಿ ಮುಂದೆ ಪ್ರತಿಭಟನೆ ಆರಂಭಗೊಂಡಿದೆ.


ಸಾಮಾಜಿಕ ಹೋರಾಟಗಾರ ಜಯಂತ್ ಟಿ ಅವರು ನೇತೃತ್ವ ವಹಿಸಿದ್ದು, ತಹಶೀಲ್ದಾರ್ ಕಚೇರಿ ಪಕ್ಕದ ರಸ್ತೆ ಬದಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ವೃದ್ದ ದಂಪತಿಗಳು ನಜ್ಜುಗುಜ್ಜುಗೊಂಡ ಪಾತ್ರೆ ಪರಿಕರಗಳ ಜೊತೆ ಆಗಮಿಸಿ ಉರಿ ಬಿಸಿಲಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸಮಾನ ಮನಸ್ಕರು ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.

ಮನೆ ಕಳೆದುಕೊಂಡ ವೃದ್ದ ನನಗೆ ಜೀವನವೇ ಬೇಡ ಎಂದು ನೆಲದಲ್ಲಿ ಒದ್ದಾಡಿದ್ದು, ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನೋಡುತ್ತಿರುವುದು ಕಂಡು ಬಂದಿದೆ. ಪ್ರತಿಭಟನೆಗೆ ಅನುಮತಿ ಇಲ್ಲ ಎಂದು ಅಧಿಕಾರಿ ವಲಯದಿಂದ ಮಾತು ಕೇಳಿ ಬಂದ ಹಿನ್ನೆಲೆ ಪ್ರತಿಭಟನಕಾರರು ಆಕ್ರೋಶಿತಗೊಂಡು ರಸ್ತೆ ಸಮೀಪ ಗುಂಪು ಸೇರಿದ್ದಾರೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕರು ಸಹಿತ ಕಡಬ ಠಾಣಾ ಎಸ್.ಐ ಅಭಿನಂದನ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಪ್ರತಿಭಟನೆ ರಾಧಾಮ್ಮ ಪರವಾಗಿ
ಈಗಾಗಲೇ ದಾಖಲೆಗಳಲ್ಲಿ ರೇಣುಕಾ ಅವರ ಅಕ್ರಮ ಮನೆ ಕೆಡವಲಾಗಿದೆ ಎಂದು ಇದ್ದರೂ, ಆ ಮನೆ ರಾಧಾಮ್ಮನವರಾಗಿದ್ದಾಗಿದೆ. ಈಗಾಗಲೇ ಸಾಮಾನ್ಯ ದಾಖಲೆಗಳನ್ನು ಪ್ರತಿಭಟನೆಕಾರರು ತೋರಿಸಿ ನಾವು ರಾಧಾಮ್ಮನವರ ಪರವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಈಗಾಗಲೇ ಬಿ.ಎಂ.ಭಟ್, ಹಕೀಂ, ದಲಿತ ಮುಖಂಡೆ ಈಶ್ವರಿ ಅವರು ಪಾಲ್ಗೊಂಡಿದ್ದಾರೆ.

LEAVE A REPLY

Please enter your comment!
Please enter your name here