ಬಡಗನ್ನೂರು: ಕೊಯಿಲ ಬಡಗನ್ನೂರು ಸ.ಹಿ.ಪ್ರಾ ಶಾಲೆ ಇದರ ಪೋಷಕರ ಸಭೆ, ಹಾಗೂ ನೂತನ ಎಸ್ ಡಿ ಎಂ ಸಿ ರಚನಾ ಸಭೆಯು ಗ್ರಾ. ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಇವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಂಗಣದಲ್ಲಿ ನ.19 ರಂದು ನಡೆಯಿತು.
ಗ್ರಾ. ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್ ,ಮಾಜಿ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ ಉಪಸ್ಥಿತರಿದ್ದು ನೂತನ ಎಸ್ ಡಿ ಎಂ ಸಿಗೆ ಶುಭಹಾರೈಸಿದರು. ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ವಸಂತ ಗೌಡ ಪಕ್ಯೋಡ್,ಹಾಗೂ ಉಪಾಧ್ಯಕ್ಷರಾಗಿ ಸತೀಶ್ ನಾಯ್ಕ ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ , ಸಿಲಂಬರಸಿ ಅಜ್ಜಿ ಕಲ್ಲು , ಗೀತಾ ನೆರೋಲ್ತಡ್ಕ, ಲಲಿತಾ ಕೊಯಿಲ, ಸುಮಿತ್ರ ತಲೆಂಜಿ, ಸಿದ್ದಿಕ್ ಎನ್. ಎ. ಕೊಯಿಲ, ಸಿದ್ದಿಕ್ ಸಿ. ಕೆ ಕೊಯಿಲ, ಬುಶ್ರ ಕೊಯಿಲ, ಆಭಿದ ಪಾಲಡ್ಕ, ಸೌದತ್ ಕೊಯಿಲ, ಸಫಿಯ ಕೊಯಿಲ, ಪ್ರಕಾಶ್ ರೈ ಕೊಯಿಲ, ನಾರಾಯಣ ಪೇರಾಲು, ಶರ್ಮಿಳಾ ಕೆಳಗಿನ ಪೇರಾಲು, ಲತಾ ಕುಮಾರಿ ಉಳಯ, ಸುಧಾ ಪಕ್ಯೋಡು, ನಯನ ರೈ ಬಡಕ್ಕಾಯೂರು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಾಮನಿರ್ದೇಶಿತ ಸದಸ್ಯರಾಗಿ ಗ್ರಾ. ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡು,ಶಿಕ್ಷಕರ ಪ್ರತಿನಿಧಿಯಾಗಿ ಸೌಮ್ಯ, ವಿದ್ಯಾರ್ಥಿ ಪ್ರತಿನಿಧಿಯಾಗಿ ಶಾಲಾ ನಾಯಕಿ ಧೃತಿ ಆರ್ ರೈ, ಪದನಿಮಿತ್ತ ಪ್ರಧಾನ ಕಾರ್ಯದರ್ಶಿಯಾಗಿ ಮುಖ್ಯೋಪಾಧ್ಯಾಯರಾದ ಪುಷ್ಪಾವತಿ ಎಂ ಬಿ ಆಯ್ಕೆ ಮಾಡಲಾಯಿತು.
ಪದನಿಮಿತ್ತ ಸದಸ್ಯರಾಗಿ ,ಆರೋಗ್ಯ ಕಾರ್ಯಕರ್ತೆ ನಂದಿನಿ ,ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಆಯ್ಕೆಯಾದರು. ಆಯ್ಕೆಯಾದ ಎಲ್ಲಾ ಪೋಷಕ ಪ್ರತಿನಿಧಿಗಳಿಗೆ ಅಧ್ಯಕ್ಷರಿಗೆ ,ಉಪಾಧ್ಯಕ್ಷ ರಿಗೆ ಎಸ್ ಡಿ ಎಂ ಸಿಯ ಕಾರ್ಯವ್ಯಾಪ್ತಿ ಶಾಲಾಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ,ಜವಾಬ್ದಾರ ಗಳು ,ಅಧ್ಯಕ್ಷರ ಕರ್ತವ್ಯಗಳು,ಶಾಲಾಭಿವೃದ್ಧಿ ಯೋಜನೆ ತಯಾರಿ ಇತ್ಯಾದಿ ವಿಷಯಗಳನ್ನು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದರು.
ನಿಕಟಪೂರ್ವ ಎಸ್ ಡಿ ಎಂ ಸಿಯ ಸಾಧನಾ ಪಥವನ್ನು ವಿವರಿಸಿ, ಧನ್ಯವಾದ ಸಲ್ಲಿಸಲಾಯಿತು. ಆಯ್ಕೆ ಪ್ರಕ್ರಿಯೆಯನ್ನು ಶಿಕ್ಷಕರಾದ ಗಿರೀಶ್ ಕೊಯಿಲ ನಡೆಸಿಕೊಟ್ಟರು. ಮುಖ್ಯ ಶಿಕ್ಷಕರಾದ ಪುಷ್ಪಾವತಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಿಕ್ಷಕಿ ಸೌಮ್ಯ ವಂದನಾರ್ಪಣೆ ಸಲ್ಲಿಸಿದರು. ಅತಿಥಿ ಶಿಕ್ಷಕಿ ಸರಳ ,ಗೌರವ ಶಿಕ್ಷಕಿ ಪೂರ್ಣಿಮಾ ಸಹಕರಿಸಿದರು.