ಕ್ಲಬ್ನ ಸವಿನೆನಪು ‘ಮೆಲುಕು’ ಪುಸ್ತಕ ಅನಾವರಣ, ಪೂರ್ವಾಧ್ಯಕ್ಷರುಗಳಿಗೆ ಸನ್ಮಾನ
ಪುತ್ತೂರು:1974ರಲ್ಲಿ ಪ್ರಾರಂಭವಾದ ಪುತ್ತೂರು ಇನ್ನರ್ವೀಲ್ ಕ್ಲಬ್ ಇದರ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ‘ಕನಕ ಸಂಭ್ರಮ’ ಹೆಸರಿನಲ್ಲಿ ನ.23ರಂದು ಸಂಜೆ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆಚರಿಸಲಾಯಿತು.ಪರಿಸರವಾದಿ ಮತ್ತು ಸಮಾಜ ಸೇವಕಿ ಬೆಂಗಳೂರಿನ ರೇವತಿ ಕಾಮತ್ ಅವರು ದೀಪ ಪ್ರಜ್ವಲಿಸಿ, ಭತ್ತದ ಕಳಸೆಯಲ್ಲಿರಿಸಿದ್ದ ಕಲ್ಪವೃಕ್ಷದ ಹಿಂಗಾರವನ್ನು ಅರಳಿಸಿ, ತುಳಸಿ ಸಸಿಗೆ ನೀರೆರೆದು ‘ಕನಕ ಸಂಭ್ರಮ’ ಉದ್ಘಾಟಿಸಿದರು.ಇನ್ನರ್ವೀಲ್ ಕ್ಲಬ್ ನ ಜಿಲ್ಲಾ ಅಧ್ಯಕ್ಷೆ ವೈಶಾಲಿ ಕುಡ್ವಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮಹಿಳೆಯರು ಆರ್ಥಿಕ ಸ್ವಾವಲಂಬನೆಗೆ ಆದ್ಯತೆ ನೀಡಿ:
‘ಕನಕ ಸಂಭ್ರಮ’ವನ್ನು ಉದ್ಘಾಟಿಸಿದ ಪರಿಸರವಾದಿ ಮತ್ತು ಸಮಾಜ ಸೇವಕಿ ಬೆಂಗಳೂರಿನ ರೇವತಿ ಕಾಮತ್ ಅವರು ಮಾತನಾಡಿ ಒಂದು ಸಂಸ್ಥೆ 50 ವರ್ಷವನ್ನು ಯಶಸ್ವಿಯಾಗಿ ಪೂರೈಸುವುದು ಸುಲಭದ ವಿಷಯವಲ್ಲ. ಆರ್ಥಿಕ ಶಕ್ತಿ ಹೆಚ್ಚಿರಬೇಕು.ಅಂತಹ ಶಕ್ತಿ ಮಹಿಳೆಯರಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಆರ್ಥಿಕ ಸ್ವಾವಲಂಬನೆಗೆ ಆದ್ಯತೆ ನೀಡಬೇಕೆಂದರು.ಮಹಿಳೆಯರು ಡಿಜಿಟಲ್ ಮೀಡಿಯಾ ಮಾರ್ಕೆಟಿಂಗ್ ನಲ್ಲಿ ತೊಡಗಿಸಿಕೊಳ್ಳಿ. ಅದಕ್ಕಾಗಿ ನಮ್ಮದೇ ಜೆರೋನಾ ಕಂಪೆನಿಯಿದೆ.ಮನೆಯಲ್ಲೇ ಕೂತು ಟ್ರೇಡಿಂಗ್ ಮಾಡಬಹುದು.ತಿಂಗಳಿಗೆ ರೂ.1 ಲಕ್ಷಕ್ಕೂ ಅಧಿಕ ಸಂಪಾದನೆಯನ್ನು ಗಳಿಸಿ. ಇದಕ್ಕೆ ನಮ್ಮ ಕಡೆಯಿಂದ ಉಚಿತವಾಗಿ ತರಬೇತಿಯನ್ನೂ ಕೊಡುವ ವ್ಯವಸ್ಥೆ ಮಾಡುವುದಾಗಿ ಅವರು ತಿಳಿಸಿದರು.ಸಮಾಜ ಸೇವಕಿಯಾಗಿ ನಾನು ಬೆಂಗಳೂರಿನಲ್ಲಿ ಸುಮಾರು 35 ಎಕ್ರೆ ಒತ್ತುವರಿಯನ್ನು ಬಿಡಿಸಿ ಸರಕಾರಕ್ಕೆ ಕೊಡಿಸಿದ್ದೇನೆ. ಇವತ್ತು ಅನೇಕ ಸಂಘ ಸಂಸ್ಥೆಗಳ ಮೂಲಕ ಪರಿಸರ ದಿನಾಚರಣೆ ಮಾಡುತ್ತಾರೆ. ಆದರೆ ಅಲ್ಲಿ ಗಿಡ ನೆಟ್ಟರೆ ಸಾಲದು ಅದನ್ನು ಪೋಷಣೆ ಮಾಡುವ ಮನೋಭಾವ ರೂಡಿಸಿಕೊಳ್ಳಬೇಕೆಂದ ಅವರು, ಪುತ್ತೂರಿನ ಅತಿಥ್ಯ ಮತ್ತು ನಮಗೆ ಕೊಟ್ಟ ಬೊಕ್ಕೆಯಿಂದ ಹಿಡಿದು ಎಲ್ಲಾ ಅಲಂಕಾರಗಳು ಪರಿಸರಸ್ನೇಹಿಯಾಗಿದೆ.ಹಾಗಾಗಿ ಇನ್ನರ್ ಸ್ಟೀಲ್ ಕ್ಲಬ್ ಮೂಲಕ ಬೆಂಗಳೂರಿಗಿಂತ ಪುತ್ತೂರಿನ ಜನತೆ ಮೆಚ್ಚುಗೆಯಾಗಿದ್ದಾರೆ.ಮುಂದೆ ಕ್ಲಬ್ ಮೂಲಕ ವಿದ್ಯಾದಾನಕ್ಕೆ ಸಂಬಂಧಿಸಿ ಹಳ್ಳಿ ಹಳ್ಳಿಗೆ ತೆರಳಿ ಅಲ್ಲಿನ ಶಾಲೆಗಳ ಶಿಕ್ಷಣ ಪದ್ಧತಿ ಗುಣಾತ್ಮಕವಾಗಿ ಇದೆಯೇ ಇಲ್ಲವೋ ಎಂದು ಚೆಕ್ ಮಾಡಿ. ಸಮಸ್ಯೆ ಇದ್ದರೆ ಸಂಬಂಧಿಸಿದ ಇಲಾಖೆಗೆ ತಿಳಿಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಮಾಡಿ. ಅದು ನಿಜವಾದ ಸೇವೆಯಾಗಿ ಕಾಣಿಸಿಕೊಳ್ಳುತ್ತದೆ ಎಂದರು.
ಮನಸ್ಸಿಗೆ ಸಮಾಧಾನ, ನೆಮ್ಮದಿ ಇರುವ ಸೇವೆ ನೀಡಿ:
ಇನ್ನರ್ ವೀಲ್ ಕ್ಲಬ್ನ ಜಿಲ್ಲಾ ಅಧ್ಯಕ್ಷೆ ವೈಶಾಲಿ ಕುಡ್ವ ಅವರು ಮಾತನಾಡಿ ಸ್ನೇಹ ಮತ್ತು ಸೇವೆಯೇ ನಮ್ಮ ಕ್ಲಬ್ನ ಗುರಿ, ಪುತ್ತೂರು ಕ್ಲಬ್ ಮಾಡಿರುವ ಯೋಜನೆ, ಕಾರ್ಯಕ್ರಮಗಳು ಲ್ಯಾಂಡ್ ಮಾರ್ಕ್ ಆಗಿದೆ. ತಮ್ಮ ಸೇವಾ ಚಟುವಟಿಕೆಯನ್ನು ಮತ್ತೆ ಸರಕಾರವೇ ಮುಂದುವರಿಸಿರುವುದು ಸಂತೋಷದ ವಿಚಾರ.ಇವೆಲ್ಲ ಕೇವಲ ಮಹಿಳೆಯರ ಸಾಧನೆಯಲ್ಲ. ಇದರ ಜೊತೆಗೆ ಮಹಿಳೆಯರ ಗಂಡಂದಿರ ಸಹಕಾರವೂ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಯಾಕೆಂದರೆ ಸೇವಾ ಚಟುವಟಿಕೆಗೆ ಆರ್ಥಿಕ ಕ್ರೋಢೀಕರಣಕ್ಕೆ ಗಂಡಂದಿರ ನೆರವು ಅಗತ್ಯ.ಈ ನಿಟ್ಟಿನಲ್ಲಿ ಅನಗತ್ಯ ಖರ್ಚಿಗಿಂತ ಮನಸ್ಸಿಗೆ ಸಮಾಧಾನ, ನೆಮ್ಮದಿ ಇರುವ ಸೇವೆ ಮಾಡಿ ಎಂದರು.ಕ್ಲಬ್ ಹಲವು ಪ್ರೊಜೆಕ್ಟ್ ನೀಡುವುದು ಸಹಜ.ಆದರೆ ಪ್ರೊಜೆಕ್ಟ್ನ ಗುರಿ ಸಾಧಿಸುವಾಗ ನೆಮ್ಮದಿ ಇರಬೇಕು ಎಂದ ಅವರು ಪುತ್ತೂರು ಇನ್ನರ್ ವೀಲ್ಡ್ ಕ್ಲಬ್ ಇವತ್ತು ಗೋಲ್ಡನ್ ಕಾಲರ್ಗೆ ಅರ್ಹವಾಗಿದೆ ಎಂದರು.
ಕನಕ ಸಂಭ್ರಮ ಕ್ಲಬ್ನ ಭವಿಷ್ಯ ರೂಪಿಸಲು ಸಹಕಾರಿ:
ಇನ್ನರ್ ವೀಲ್ ಕ್ಲಬ್ನ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಅವರು ಮಾತನಾಡಿ ಕ್ಲಬ್ಗೆ ಇವತ್ತು ಮಹತ್ವದ ಮೈಲುಗಲ್ಲು.ಈ ಸಂಭ್ರಮ ಸಂಭ್ರಮ ಮಾತ್ರವಾಗದೆ ಕ್ಲಬ್ನ ಭವಿಷ್ಯ ರೂಪಿಸಲು ಸಹಕಾರಿಯಾಗಲಿ, ಬಡ ಮಕ್ಕಳಿಗೆ ಶಿಕ್ಷಣ,ಬಡ ಕುಟುಂಬಗಳಿಗೆ ಬೆಳಕಿನ ಆಶಯವಾಗಲಿ ಎಂದರು.ರೋಟರಿ ಕ್ಲಬ್ ಪುತ್ತೂರು ಇದರ ಪ್ರಾಯೋಜಕ ಸಂಸ್ಥೆಯಾಗಿ ಕೇವಲ 12 ಸದಸ್ಯರಿಂದ ಪ್ರಾರಂಭಗೊಂಡ ಈ ಸಂಸ್ಥೆ ದಿ|ಕೃಷ್ಣಾ ಬಾಯಿ ಅವರು ಸ್ಥಾಪಕ ಅಧ್ಯಕ್ಷೆಯಾಗಿ ಮತ್ತು ರೇವತಿ ಅದ್ಯಂತಾಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ‘ಸೇವೆ ಹಾಗೂ ಸ್ನೇಹ” ಎಂಬ ಧೈಯ ವಾಕ್ಯದೊಂದಿಗೆ ಈ ಐದು ದಶಕಗಳಲ್ಲಿ ಇನ್ನರ್ ವೀಲ್ ಕ್ಲಬ್ ಪುತ್ತೂರು ಮಹಿಳಾ ಸಬಲೀಕರಣ, ಆರೋಗ್ಯ ಶಿಬಿರ,ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಇಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ತನ್ನದೇ ಛಾಪನ್ನು ಮೂಡಿಸಿದೆ.ಸದ್ಯ 69 ಸದಸ್ಯರನ್ನು ಹೊಂದಿರುವ ಈ ಸಂಸ್ಥೆಯು ಈ ವರ್ಷ ತನ್ನ 50 ವರ್ಷದ ಸವಿನೆನಪಿಗಾಗಿ ‘ಕನಕ ಸಂಭ್ರಮ’ವನ್ನು ಆಚರಿಸುತ್ತಿದೆ ಎಂದರು.
ನಮ್ಮಲ್ಲಿ ನಾಯಕತ್ವ ಗುಣ ಬೆಳೆದಿದೆ:
ಕ್ಲಬ್ನ ಹಿರಿಯ ನಿರ್ದೇಶಕಿ ವಿದ್ಯಾ ಗೌರಿ ಅವರು ಕ್ಲಬ್ ನಡೆದು ಬಂದ ಹಾದಿಯ ಕುರಿತು ಮಾತನಾಡಿದರು.12 ಸದಸ್ಯರ ಪುಟ್ಟ ಕ್ಲಬ್ 62 ಸದಸ್ಯರ ದೊಡ್ಡ ಕ್ಲಬ್ ಆಗಿ ಮೂಡಿದೆ. ಆರಂಭದ ಯೋಜನೆ ಪೋಲಿಯೊ ಪ್ಲಸ್ ಅನ್ನು ರೋಟರಿಯೊಂದಿಗೆ ಕೈ ಜೋಡಿಸಿದೆವು. ಬಳಿಕ 2 ಬಾಲವಾಡಿಯನ್ನು ಆರಂಭಿಸಿದ್ದೆವು.ಮಕ್ಕಳಿಗೆ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಆರಂಭಿಸಿದ್ದೆವು. ಅದು ಇವತ್ತು ಸರಕಾರದ ಮಟ್ಟದಲ್ಲಿ ಪ್ರತಿಭಾ ಕಾರಂಜಿ ರೂಪದಲ್ಲಿ ನಡೆಯುತ್ತಿದೆ ಸಮಾಜಕ್ಕೆ ಬೇಕಾದ ಎಲ್ಲಾ ರೀತಿಯ ಸೇವೆ ನೀಡಿದ್ದೇವೆ. ಮಳೆ ಕೊಯ್ಲು, ಪ್ಲಾಸ್ಟಿಕ್ ನಿಷೇಧ ಪ್ರೊಜೆಕ್ಟ್ ಮಾಡುತ್ತಾ ಬಂದಿದ್ದೇವೆ. ಪುತ್ತೂರಿನಲ್ಲಿ ಒಂದು ಹಂತದಲ್ಲಿ ಕ್ಲಬ್ ಮುಚ್ಚಬೇಕೆನ್ನುವ ಪರಿಸ್ಥಿತಿಗೆ ಬಂದಾಗ ಬೊಳಂತಕೋಡಿ ಈಶ್ವರ ಭಟ್ ಮುನ್ನಡೆಸಲು ಮಾರ್ಗದರ್ಶನ ನೀಡಿದರು. ಇವತ್ತು ಸದಸ್ಯರೇ ಒಟ್ಟಿಗೆ ಸೇರಿ ಪಟ್ಟು ಹಿಡಿದು ಕ್ಲಬ್ ಅನ್ನು ಮುಂದುವರಿಸುತ್ತಿದ್ದೇವೆ.ನಮ್ಮ ಸ್ನೇಹ ಬಾಂಧವ್ಯ ಕುಟುಂಬದ ಸದಸ್ಯರಂತೆ ಇದ್ದೇವೆ.ನಮ್ಮಲ್ಲಿ ನಾಯಕತ್ವಗುಣ ಬೆಳೆದಿದೆ ಎಂದರು.
“”ಮೆಲುಕು’ ಸವಿ ನೆನಪು ಪುಸ್ತಕ ಬಿಡುಗಡೆ:
ಕನಕ ಸಂಭ್ರಮದ ಸವಿನೆನಪಿನ ಮೆಲುಕು ಸವಿ ನೆನಪಿನ ಪುಸ್ತಕವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.ಪುಸ್ತಕ ನಿರ್ವಹಣೆ ಮಾಡಿದ ವಿಜಯಲಕ್ಷ್ಮೀ ಶೆಣೈ ಅವರು ಪುಸ್ತಕದ ವಿಷಯದ ಕುರಿತು ಮಾತನಾಡಿ ಈ ಪುಸ್ತಕ ಹಿರಿಯ ಕಿರಿಯರಿಗೆ ಸಂಪರ್ಕ ಸೇತುವೆಯಾಗಲಿದೆ ಎಂದರು. ಅಲಂಕೃತ ಬುಟ್ಟಿಯೊಳಗಿನಿಂದ ಪುಸ್ತಕವನ್ನು ಹೊರತಂದು ಬಿಡುಗಡೆ ಕಾರ್ಯಕ್ರಮ ವಿಶೇಷತೆಯಾಗಿತ್ತು.
ಯೋಜನೆಗಳ ಘೋಷಣೆ, ಹಸ್ತಾಂತರ:
ಇನ್ನರ್ ವೀಲ್ಡ್ ಕ್ಲಬ್ ಮೂಲಕ ಕ್ಲಬ್ನ ಸದಸ್ಯರು ಹಲವು ಸೇವಾ ಯೋಜನೆ ನೀಡುತ್ತಿದ್ದು, ಈ ಬಾರಿ ಸದಸ್ಯೆ ವೀಣಾ ಕೊಳತ್ತಾಯ ಅವರು ರೂ.1 ಲಕ್ಷ ದೇಣಿಗೆಯನ್ನು ಕನ್ಯಾನ ಭಾರತ ಸೇವಾಶ್ರಮಕ್ಕೆ ಗಣ್ಯರ ಮೂಲಕ ಹಸ್ತಾಂತರಿಸಿದರು.
ಕೇಕ್ ಕಟ್ ಮಾಡಿ ಸಂಭ್ರಮ:
ಇನ್ನರ್ ವೀಲ್ ಕ್ಲಬ್ನ ಸುವರ್ಣ ಸಂಭ್ರಮವನ್ನು ಕೇಕ್ ಕಟ್ ಮಾಡುವ ಮೂಲಕ ಇನ್ನಷ್ಟು ಸಂಭ್ರಮಗೊಳಿಸಲಾಯಿತು.ಅತಿಥಿಗಳು ಕೇಕ್ ಕಟ್ ಮಾಡಿ ಅಧ್ಯಕ್ಷರಿಗೆ ನೀಡಿದರು.ಬಳಿಕ ಸಭೆಯಲ್ಲಿದ್ದವರಿಗೆ ಕೇಕ್ ವಿತರಿಸಲಾಯಿತು.
ಎಸ್ಒ ಲೌಲಿ ಸೂರಜ್ ಅವರು ಗಣ್ಯರ ಶುಭಾಶಯ ತಿಳಿಸಿದರು.ರಮಾ ಪ್ರಭಾಕರ್ ಪ್ರಾರ್ಥಿಸಿದರು.ಇನ್ನರ್ ವೀಲ್ ಕ್ಲಬ್ನ ಜೊತೆ ಕಾರ್ಯದರ್ಶಿ ವೇದಾಲಕ್ಷ್ಮೀಕಾಂತ್, ಇನ್ನರ್ ವೀಲ್ ಕ್ಲಬ್ನ ಉಕ್ತಿಯನ್ನು ತಿಳಿಸಿದರು. ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕೋಶಾಧಿಕಾರಿ ಆಶಾ ನಾಯಕ್, ಸಂಪಾದಕಿ ಶ್ರೀದೇವಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ನ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಸ್ವಾಗತಿಸಿದರು. ಉಪಾಧ್ಯಕ್ಷೆಸುಧಾ ಕಾರಿಯಪ್ಪವಂದಿಸಿದರು. ಕಾರ್ಯದರ್ಶಿ ವಚನ ಜಯರಾಮ್, ಲಲಿತಾ ಭಟ್ ಅತಿಥಿಗಳನ್ನು ಪರಿಚಯಿಸಿದರು. ಕ್ಲಬ್ನ ನಿರ್ದೇಶಕರಾದ ಲಲಿತಾ ಭಟ್, ಕೃಷ್ಣವೇಣಿ ಪ್ರಸಾದ್ ಮುಳಿಯ ಕಾರ್ಯಕ್ರಮ ನಿರೂಪಿಸಿದರು.ನಿರ್ದೇಶಕರಾದ ಪ್ರಮೀಳಾ ರಾವ್, ಸುಕ್ಲಾಜೈನ್, ಲಲಿತಾ ಭಟ್, ಸೆನೋಂಟಾ ಆನಂದ, ಸೀಮಾನಾಗರಾಜ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಸಭಾ ಕಾರ್ಯಕ್ರಮದ ಕೊನೆಯಲ್ಲಿ ರೋಟರಿ ಕ್ಲಬ್ ದೀಪಕ್ ಕೆ.ಪಿ., ರೆಡ್ಡಿ ಎಸ್ ಹೊಳ್ಳ, ವೀಣಾ ಕೊಳತ್ತಾಯ ಅದೃಷ್ಟ ಚೀಟಿಯ ವಿಜೇತರಾಗಿ ಆಯ್ಕೆಯಾದರು. ಇನ್ನರ್ವೀಲ್ ಕ್ಲಬ್ನ ಜಿಲ್ಲಾ ಐಎಸ್ಒ ದೀಪಾ, ಇಎಸ್ಒ ಚಿತ್ರ ರಾವ್, ಶಮೀರ್, ರಾಜಲಕ್ಷ್ಮಿ, ಅನುರಾಧಾ, ರೋಟರಿ ಜಿಲ್ಲೆಯ ಡಾ.ಭಾಸ್ಕರ್ ಎಸ್, ರೋಟರಿ ಕ್ಲಬ್ನ ಹಿರಿಯ ಸದಸ್ಯರಾದ ಕೆ.ಆರ್.ಶೆಣೈ, ಕ್ಲಬ್ನ ಹಿರಿಯರಾದ ಜೈರಾಜ್ ಭಂಡಾರಿ, ಸಾಮೆತ್ತಗೋಪಾಲಕೃಷ್ಣಭಟ್, ವರ್ತಕ ಸಂಘದ ಮಾಜಿ ಅಧ್ಯಕ್ಷಜೋನ್ ಕುಟಿನ್ಹಾ, ವೆಂಕಟ್ರಮಣ ಗೌಡ ಕಳುವಾಜೆ, ದೀಪಕ್ ಕೆ.ಪಿ, ಚಿದಾನಂದ ಬೈಲಾಡಿ, ಕಾಂಚನ ಸುಂದರ ಭಟ್, ಎ.ಜೆ.ರೈ, ಬಾಲಕೃಷ್ಣ ಆಚಾರ್ಯ, ಜ್ಯೋಡಿ ಸೋಜ, ಬಾಲಕೃಷ್ಣ ಕೊಳತ್ತಾಯ,ಸುಳ್ಯದ ಇನ್ನರ್ ವೀಲ್ ಕ್ಲಬ್ ನ ಯೋಗಿತ, ಉಡುಪಿ, ಮೈಸೂರು ಐಸಿರಿ ಕ್ಲಬ್ಗಳ ಸದಸ್ಯರು, ಜಿ.ಎಲ್. ಬಲರಾಮ ಆಚಾರ್ಯ, ಲಕ್ಷ್ಮೀಕಾಂತ ಆಚಾರ್ಯ, ಶ್ರೀಧರ್ ಆಚಾರ್ಯ, ರೇಖಾ ಕಾಮತ್, ಅನಿಲ ದೀಪಕ್, ಶರತ್ ರೈ, ಮಾರ್ಟಿನ್ ಡಿ’ಸೋಜ, ಸೂರಜ್ ಶೆಣೈ, ರಂಜಿತಾ ಶಂಕರ್, ಚೇತನ್ ಪ್ರಕಾಶ್ ಕಜೆ, ಭರತ್ ಪೈ, ಪ್ರೇಮಾನಂದ, ಡಾ. ಶ್ರೀಪ್ರಕಾಶ್, ಸೂರಜ್ ನಾಯರ್, ವಿಕ್ಟರ್ ಮಾರ್ಟಿಸ್, ಸ್ವರ್ಣಗೌರಿ, ಮೌನೇಶ್ ವಿಶ್ವಕರ್ಮ, ಡಾ.ಶಶಿಧರ್ ಕಜೆ ಸಹಿತ ಹಲವಾರು ಮಂದಿ ರೋಟರಿ ಸದಸ್ಯರು ಸಭಾ ಕಾರ್ಯಕ್ರಮದ ಸಂದರ್ಭ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ವಿದುಷಿ ಜ್ಞಾನ ಐತಾಳ್ ಅವರಿಂದ ನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು. ನಡುವೆ ವಿವಿಧಮನೋರಂಜನಾ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮವನ್ನು ವಿ.ಜೆ.ವಿಖ್ಯಾತ್ ನಿರೂಪಿಸಿದರು.
ಹಿರಿಯ ಅಧ್ಯಕ್ಷರುಗಳಿಗೆ ಸನ್ಮಾನ
ಕ್ಲಬ್ನ್ನು ಮುನ್ನಡೆಸುವಲ್ಲಿ ಆರಂಭದಿಂದಲೂ ಸಕ್ರಿಯರಾಗಿದ್ದವರ ಪೈಕಿ 30 ಮಂದಿ ಮಾಜಿ ಅಧ್ಯಕ್ಷರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. 3 ಬಾರಿ ಅಧ್ಯಕ್ಷರಾಗಿದ್ದ ಪುಷ್ಟಾ ಕೆ.ಪಿ, ಪಾರ್ವತಿ ಭಟ್, ವಿದ್ಯಾ ಗೌರಿ, ವಯಲೆಟ್ ಡಿ’ಸೋಜ, ಮೀರಾ ರೈ, ವೀಣಾ ಕೊಳತ್ತಾಯ, ರಾಜಿ ಬಲರಾಮ ಆಚಾರ್ಯ, ನಂದಿತಾ ಎಸ್ ರಾವ್, ತಾರಾಮತಿ ಜಿ ನಾಯಕ್, ನವೀನಾ ರೈ, ಸುತ್ತಾ ಜೈನ್, ವಿಜಯಲಕ್ಷ್ಮೀ ಶೆಣೈ, ಪ್ರಮೀಳಾ ರಾವ್, ಮಂಜುಳಾ ಭಾಸ್ಕರ್, ಪದಾ ಆಚಾರ್ಯ, ಕವಿತಾ ಪೊನಪ, ಶೋಭಾ ಕೊಳತ್ತಾಯ, ಈಶ್ವರಿ ಗೋಪಾಲ್, ಆಶಾ ಭಟ್, ರಮಾ ಭಟ್, ಸೆನೋರಿಟಾ ಆನಂದ್, ಶಂಕರಿ ಎಮ್.ಎಸ್ ಭಟ್, ಲಲಿತಾ ಭಟ್, ಪುಷಾ ಕೆದಿಲಾಯ, ಸಹನಾ ಭವೀನ್, ಸೀಮಾ ನಾಗರಾಜ್, ವೀಣಾ ಬಿ.ಕೆ, ಟೈನಿ ದೀಪಕ್, ಆಶ್ವಿನಿಕೃಷ್ಣಮುಳಿಯ, ರಾಜೇಶ್ವರೀ ಆಚಾರ್ ಅವರನ್ನು ಸನ್ಮಾನಿಸಲಾಯಿತು.ಕ್ಲಬ್ ನ ಅಧ್ಯಕರುಗಳಾಗಿ ಸೇವೆ ಸಲ್ಲಿಸಿ ದಿವಂಗತರಾಗಿರುವ ಕೃಷ್ಣಾಬಾಯಿ, ಡಾ.ನಳೆನಿ ರೈ, ಪುಷ್ಪಲತಾ ಪ್ರಭು, ಲೀಲಾವತಿ ಆಚಾರ್ಯ, ಕಾವೇರಿ ಭಟ್, ರಮಾ ಭಟ್, ವಸಂತಿ ನಾಯಕ್ ಅವರನ್ನು ಸ್ಮರಿಸಲಾಯಿತು. ಇದೇ ಸಂದರ್ಭ ಕ್ಲಬ್ 50ನೇ ವರ್ಷದ ಸಂಭ್ರಮದ ಕಾರ್ಯಕ್ರಮಕ್ಕೆ ‘ಕನಕ ಸಂಭ್ರಮ’ ಹೆಸರು ಸೂಚಿಸಿದ ಜ್ಯೋತಿ ದಿವಾಕರ್ ಅವರನ್ನು ಗೌರವಿಸಲಾಯಿತು.
ರಾಜೇಶ್ವರಿ ಆಚಾರ್ರಿಗೆ ಗೋಲ್ಡನ್ ಕಾಲರ್
ಇನ್ಸರ್ಲ್ ಕ್ಲಬ್ 50 ವರ್ಷ ಪೂರೈಸುವ ಮೂಲಕ ಸುವರ್ಣ ಸಂಭ್ರಮ ಆಚರಿಸಿದ ಹಿನ್ನೆಲೆ ಮತ್ತು ಯಶಸ್ವಿಯಾಗಿ 50 ವರ್ಷದಲ್ಲಿ ನಿರಂತರ ಉತ್ತಮ ಸೇವಾ ಚಟುವಟಿಕೆಗಳನ್ನು ನೀಡುತ್ತಾ ಬಂದಿರುವ ಬಹಳ ಹಿರಿಯ ಕ್ಲಬ್ ಆಗಿರುವ ನಿಟ್ಟಿನಲ್ಲಿ ಪುತ್ತೂರು ಇನ್ಸರ್ವೀಲ್ ಕ್ಲಬ್ ಗೆ ಜಿಲ್ಲಾಧ್ಯಕ್ಷೆ ವೈಶಾಲಿ ಕುಡ ಅವರು ‘ಗೋಲ್ಡನ್ ಕಾಲರ್ ನೀಡಿದರು. ಪ್ರಸ್ತುತ ಸುವರ್ಣ ಸಂಭ್ರಮದಲ್ಲಿರುವ ಕ್ಲಬ್ನ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಅವರಿಗೆ ಜಿಲ್ಲಾಧ್ಯಕ್ಷರು ಗೋಲ್ಡನ್ ಕಾಲರ್ ತೊಡಿಸುವ ಮೂಲಕ ಶುಭ ಹಾರೈಸಿದರು. ಇದೇ ಸಂದರ್ಭ ಅವರ ಪತಿ ಸುಧೀರ್ ಆಚಾರ್ಯ ಅವರನ್ನು ಗೌರವಿಸಲಾಯಿತು.
ಒಂದೇ ಬಣ್ಣದ ಸಾರಿಯಲ್ಲಿ ಮಿಂಚಿದ ನಾರಿಯರು ಇನ್ನರ್ ವೀಲ್ ಕ್ಲಬ್ನ ಸದಸ್ಯರು:
ಕನಕ ಸಂಭ್ರಮದಲ್ಲಿ ಒಂದೇ ಬಣ್ಣದ ಸಾರಿಯನ್ನು ಧರಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು. ಇದರ ಜೊತೆಗೆ ಮಕ್ಕಳ ಚೆಂಡೆ ವಾದನದೊಂದಿಗೆ ಎರಡೂ ಬದಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಅತಿಥಿಗಳನ್ನು ಬರ ಮಾಡಿಕೊಂಡಿರುವುದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು.