ಉಪ್ಪಿನಂಗಡಿ: ಪೆರ್ನೆ ಗ್ರಾ.ಪಂ.ನ ವಾರ್ಡ್ ಬಿಳಿಯೂರು- 1ರ ತೆರವಾದ ಒಂದು ಸ್ಥಾನಕ್ಕೆ ಬಿಳಿಯೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಮತದಾನ ಕೇಂದ್ರದಲ್ಲಿ ನ.23ರಂದು ಉಪಚುನಾವಣೆ ನಡೆಯಿತು.
ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಳಿನಿ ರೋಹಿತಾಕ್ಷ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರತಿಮಾ ರಾಜೀವ ಬಂಡಸಾಲೆ ಸ್ಪರ್ಧಿಸಿದ್ದರು. ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ಶಾಂತಿಯುತವಾಗಿ ನೆರವೇರಿತು. ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ಮತಯಾಚನೆಯಲ್ಲಿ ತೊಡಗಿದ್ದರು.
ಇಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಐರಿನ್ ಮಸ್ಕರೇನ್ಹಸ್ ಈ ಹಿಂದೆ ಗೆದ್ದು ಬಂದಿದ್ದು, ಅವರು ವಿದೇಶಕ್ಕೆ ತೆರಳಿದ್ದರಿಂದ ತೆರವಾದ ಅವರ ಸ್ಥಾನಕ್ಕೆ ಈ ಉಪಚುನಾವಣೆ ನಡೆಯಿತು.
ಪೆರ್ನೆಯಲ್ಲಿ ಒಟ್ಟು 1315 ಮತಗಳ ಪೈಕಿ 909 ಮತಗಳು ಚಲಾಯಿಸಲ್ಪಟ್ಟಿದ್ದು, ಶೇ 61.14 ಮತದಾನವಾಗಿದೆ.
ಇಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಐರಿನ್ ಮಸ್ಕರೇನ್ಹಸ್ ವಿದೇಶ ವಾಸ್ತವ್ಯಕ್ಕೆ ತೆರಳಿದ್ದರಿಂದ ತೆರವಾದ ಅವರ ಸ್ಥಾನಕ್ಕೆ ಈ ಉಪಚುನಾವಣೆ ನಡೆಯಿತು.