ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ- ಪುಣ್ಚಪ್ಪಾಡಿ ಗ್ರಾಮದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ

0

ಪುತ್ತೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ದಶಮಾನೋತ್ಸವ ಸಮಿತಿಯ ಸಹಯೋಗದೊಂದಿಗೆ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಯುವ ಘಟಕ, ಮಹಿಳಾ ಘಟಕ, ಗ್ರಾಮ ಸಮಿತಿಯ ಸಹಕಾರದೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸ್ವಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನದ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪುಣ್ಚಪ್ಪಾಡಿ ಗ್ರಾಮದ ನೆರೋಳ್ತಡ್ಕ ಗೌರಿ ಸದನದಲ್ಲಿ ಮೂರು ಜೊತೆ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವು ನ.22ರಂದು ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ದಶಮಾನೋತ್ಸವ ಸಮಿತಿಯ ಉಪಾಧ್ಯಕ್ಷರಾದ ಲೋಕನಾಥ್ ಟ್ರಸ್ಟ್ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಮಾತನಾಡಿ, ದಾಂಪತ್ಯ ಜೀವನದ ಪ್ರತಿ ಹೆಜ್ಜೆಯಲ್ಲೂ ಒಂದಾಗಿ ಸಾಗಿದ ಈ ದಂಪತಿಗಳು ಸಮಾಜಕ್ಕೆ ಮಾದರಿ ಎಂದರು. ಕಾರ್ಯಕ್ರಮವನ್ನು ಗ್ರಾಮ ಸಮಿತಿಯ ಗೌರವಾಧ್ಯಕ್ಷರಾದ ಕೊರಗಪ್ಪ ಗೌಡ ಕುಮಾರಮಂಗಲ ಉದ್ಘಾಟಿಸಿದರು. ಒಕ್ಕಲಿಗ ಟ್ರಸ್ಟಿನ ಉಪಾಧ್ಯಕ್ಷರಾದ ಪ್ರವೀಣ್ ಕುಂಟ್ಯಾನ, ‍ ಸವಣೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ರಾಘವ ಗೌಡ ಶುಭ ಹಾರೈಸಿದರು. ದಾಂಪತ್ಯ ಜೀವನದ 50 ವರ್ಷ ಪೂರೈಸಿದ ದಂಪತಿಗಳಾದ ಶೀನಪ್ಪ ಗೌಡ ಮತ್ತು ದೇವಕಿ ಓಂತಿ ಮನೆ,ನಾಗಪ್ಪ ಗೌಡ ಮತ್ತು ಗಿರಿಜಾ ಬೊಳ್ಳಾಜೆ ,ಸುಂದರ ಗೌಡ ಮತ್ತು ಶಾರದಾ ಕಲ್ಲರ್ಪೆ ಇವರುಗಳನ್ನು ಸನ್ಮಾನಿಸಲಾಯಿತು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರೇರಕಿ ಹೇಮಲತಾ ರವರು ಸ್ವಾಗತಿಸಿ, ಪರಿಚಯ ಪತ್ರ ವಾಚಿಸಿದರು. ಸಂಘದ ಸದಸ್ಯರಾದ ರಜನಿ ಹರೀಶ್ ತೋಟತ್ತಡ್ಕ ರವರು ಧನ್ಯವಾದಗೈದರು. ಮೇಲ್ವಿಚಾರಕರಾದ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here