ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪುತ್ತೂರು,ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪಾಪೆ ಮಜಲು ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಸ್ಕೌಟ್ ಮತ್ತು ಗೈಡ್ಸ್ ಹಾಗೂ ಕಬ್ ಬುಲ್ ಬುಲ್ ಮಕ್ಕಳ ನಲಿವಿನ ಹಬ್ಬ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು ಇಲ್ಲಿ ವಿಜೃಂಭಣೆಯಿಂದ ನಡೆದು ನ.27 ರಂದು ಸಮಾರೋಪ ಸಮಾರಂಭದೊಂದಿಗೆ ಸಮಾಪ್ತಿಗೊಂಡಿತು.
ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಮಣಿಯಾಣಿ ಕುತ್ಯಾಡಿ ಸಭಾಧ್ಯಕ್ಷತೆ ವಹಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಆಯುಕ್ತರಾದ ಮಹಮ್ಮದ್ ತುಂಬೆ, ಸ್ಥಳೀಯ ಸಂಸ್ಥೆಗಳ ಕಾರ್ಯಾಧ್ಯಕ್ಷರಾದ ಶ್ರೀಧರ ರೈ , ಜಿಲ್ಲಾ ಕಾರ್ಯದರ್ಶಿ ಪ್ರತಿಮ್ , ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿ ವಿದ್ಯಾ ಆರ್ ಗೌರಿ ಪುತ್ತೂರು, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ನಾಯ್ಕ ಚಾಕೋಟೆ ಮತ್ತು ಅನಿತಾ ಆಚಾರಿ ಮೂಲೆ, ನಿವೃತ್ತ ಸೈನಿಕ ಡಿ.ಅಮ್ಮಣ್ಣ ರೈ ಪಾಪೆ ಮಜಲು, ಸರ್ಕಾರಿ ಪ್ರೌಢಶಾಲೆ ಪಾಪೆ ಮಜಲು ಇದರ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಹುಸೇನ್ ಕೌಡಿಚ್ಚಾರು,ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು ಇದರ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿನೇಶ್ ಕುಮಾರ್ ಮರತ್ತಮೂಲೆ, ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಶಿಬಿರದ ಅನಿಸಿಕೆ
ಸ್ಕೌಟ್ಸ್ ಗೈಡ್ಸ್ ಶಿಬಿರಾರ್ಥಿಗಳಾದ ಸರಸ್ವತಿ ವಿದ್ಯಾಸಂಸ್ಥೆಯ ಸಮನ್ವಿ, ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯ ಆರಾಧನಾ,ಸಂತ ಫಿಲೋಮಿನಾ ವಿದ್ಯಾ ಸಂಸ್ಥೆಯ ಸಮೃದ್ಧಿ, ಮತ್ತು ನೂತನ್, ವೀರಮಂಗಳ ವಿದ್ಯಾ ಸಂಸ್ಥೆಯ ಉದಿಪ್ ಹಾಗೂ ಗೈಡ್ಸ್ ಶಿಕ್ಷಕಿ ಅನುರಾಧ ಶಿಬಿರದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸನ್ಮಾನ
ಶಿಬಿರವನ್ನು ಸಂಘಟಿಸಿದ ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆಯ ಗೈಡ್ಸ್ ಶಿಕ್ಷಕಿ ಮೇಬಲ್ ಡಿಸೋಜ ರವರನ್ನು ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ, ಸದಸ್ಯರು, ಶಿಕ್ಷಕ ವೃಂದ, ಪೋಷಕರು,ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಅಕ್ಷರ ದಾಸೋಹ ಸಿಬ್ಬಂದಿಗಳು, ವಿದ್ಯಾರ್ಥಿಗಳು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹಕರಿಸಿದರು.
ದ.ಕ.ಜಿ.ಪಂ.ಹಿ ಪ್ರಾಥಮಿಕ ಶಾಲೆ ಪಾಪೆಮಜಲು ಇದರ ಮುಖ್ಯೋಪಾಧ್ಯಾಯಿನಿ ಶಶಿಕಲಾ ಎಂ ಸ್ವಾಗತಿಸಿ,ದ.ಕ.ಜಿಲ್ಲಾ ಲೀಡರ್ ಟ್ರೈನರ್ ಸುನೀತಾ ವರದಿ ವಾಚಿಸಿದರು.ಗೈಡ್ಸ್ ಶಿಕ್ಷಕಿ ಮೇಬಲ್ ಡಿಸೋಜ ವಂದಿಸಿದರು.ಗೈಡ್ಸ್ ಶಿಕ್ಷಕಿ ಹೇಮಾಲತಾ ಕಾರ್ಯಕ್ರಮ ನಿರೂಪಿಸಿದರು.