puttur: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ,ಪುತ್ತೂರು ತಾಲೂಕು ಘಟಕದ ವತಿಯಿಂದ ನ.26ರಂದು ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ತೊರವೆ ರಾಮಾಯಣದಿಂದ ಆಯ್ದ ‘ಸೀತಾಪಹರಣ’ ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಿದರು.
ಗಮಕಿ ಪುತ್ತೂರು ವಿವೇಕಾನಂದ ಬಿ.ಎಡ್ ಕಾಲೇಜ್ ಪ್ರಾಂಶುಪಾಲೆ ಡಾl ಶೋಭಿತಾ ಸತೀಶ್,ಪುತ್ತೂರು ಸುದಾನ ಶಾಲೆಯ ಶಿಕ್ಷಕಿ ಕವಿತಾ ಅಡೂರು ಗಮಕ ವ್ಯಾಖ್ಯಾನಗೈದರು.
ಘಟಕದ ಕಾರ್ಯದರ್ಶಿ ಶಂಕರಿ ಶರ್ಮ ಸ್ವಾಗತಿಸಿ, ಕಲಾವಿದರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯರಾದ ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಪುರಂದರ ಭಟ್ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಮಕುಂಜ ಶಾಲೆಯ ನಿವೃತ್ತ ಪ್ರಾಂಶುಪಾಲ, ಘಟಕದ ಅಧ್ಯಕ್ಷ ಪ್ರೊ. ವೇದವ್ಯಾಸ ಕಲಾವಿದರನ್ನು ಶಾಲು ಹೊದಿಸಿ, ಪುಸ್ತಕವನ್ನಿತ್ತು ಗೌರವಿಸಿ ವಂದಿಸಿದರು.
ಗೌರವಾಧ್ಯಕ್ಷ ಭಾಸ್ಕರ ಬಾರ್ಯ, ಉಪಾಧ್ಯಕ್ಷರಾದ ಜಯಂತಿ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು. ಸದಸ್ಯರಾದ ಜಯಲಕ್ಷ್ಮಿ ವಿ.ಭಟ್ ಮತ್ತು ಪ್ರೇಮಾ ನೂರಿತ್ತಾಯ ಸಹಕರಿಸಿದರು.