ಕಡಬ: ಇಲ್ಲಿನ ಪಂಜ ರಸ್ತೆಯಲ್ಲಿರುವ ಯೋಗಕ್ಷೇಮ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ ಸಂಪೂರ್ಣ ಪಾಲಿ ಕ್ಲಿನಿಕ್ ನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಇದರ ಸಂಯುಕ್ತ ಆಶ್ರಯದಲ್ಲಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ನ. 24 ರಂದು ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಹಿರಿಯ ವೈದ್ಯ ಡಾ.ಸಿ.ಕೆ ಶಾಸ್ತ್ರಿ ಕಡಬ ಇವರು ನೆರವೇರಿಸಿದರು.ಮುಖ್ಯ ಅತಿಥಿಯಾಗಿ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್ ಕಲ್ಪುರೆಯವರು ಉಪಸ್ಥಿತರಿದ್ದರು.
ಸಂಪೂರ್ಣ ಪಾಲಿ ಕ್ಲಿನಿಕ್ ನ ಮಾಲಿಕರಾದ ಡಾ. ಸದಾನಂದ ಪ್ರಸಾದ್ ರಾವ್, ಎಸ್ ಡಿ ಮ್ ಆಸ್ಪತ್ರೆ ಉಜಿರೆ ಯ ಮ್ಯಾನೇಜರ್ ರವೀಂದ್ರನ್ ಉಪಸ್ಥಿತರಿದ್ದರು. ಡಾ.ಗ್ರೀಷ್ಮಾ ಗೌಡ ಆರ್ನೋಜಿ ಕಾರ್ಯಕ್ರಮ ನಿರೂಪಿಸಿದರು.ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಮೂಳೆ ತಜ್ಞ ಡಾ.ಶತಾನಂದ ಪ್ರಸಾದ್ ರಾವ್, ಜನರಲ್ ಪಿಸಿಶಿಯನ್ ಡಾ.ಯಶಸ್ವಿನಿ ಅಮೀನ್, ಜನರಲ್ ಸರ್ಜನ್,ಡಾ. ಬಾಲಾಜಿ, ಇ.ಎನ್.ಟಿ. ತಜ್ ಡಾ.ರೋಹನ್ ದೀಕ್ಷಿತ್, ಕಣ್ಣಿನ ತಜ್ಞ ಡಾ.ಸುಭಾಷ್ ಚಂದ್ರ ಮಕ್ಕಳ ತಜ್ಞ ರಾದ ಡಾ.ನಿಖಿತ ಮಿರ್ಲೆ,ಚರ್ಮ ತಜ್ಞರಾದ ಡಾ.ಭವಿಷ್ಯ.ಕೆ ಶೆಟ್ಟಿಯವರುಗಳು ಉಚಿತ ತಪಾಸಣೆ ನಡೆಸಿದರು.
ಈ ಶಿಬಿರದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ, ಇಸಿಜಿ, ರಕ್ತದ ಒತ್ತಡ ತಪಾಸಣೆ, ಮಧುಮೇಹ ತಪಾಸಣೆ, ಹಿಮೋಗ್ಲೋಬಿನ್ ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು. ಜೊತೆಗೆ,ರಿಯಾಯಿತಿ ದರದಲ್ಲಿ ಕ್ಷ-ಕಿರಣ, ಫಿಸಿಯೋಥೆರಪಿ,ಫುಲ್ ಬಾಡಿ ಹೆಲ್ತ್ ಪ್ಯಾಕೇಜುಗಳು ಸೇವೆಗಳಿದ್ದವು.360 ಜನರು ಈ ಶಿಬಿರದ ಉಪಯೋಗವನ್ನು ಪಡೆದುಕೊಂಡರು. ಸಂಪೂರ್ಣ ಪಾಲಿ ಕ್ಲಿನಿಕ್ ಕಡಬದ ಸಿಬ್ಬಂದಿಗಳು ಹಾಗೂ ಎಸ್.ಡಿ.ಎಂ. ಆಸ್ಪತ್ರೆಯ ಸಿಬ್ಬಂದಿಗಳು ಈ ಶಿಬಿರದಲ್ಲಿ ಸಹಕರಿಸಿದರು. ಮುಂದಿನ ದಿನಗಳಲ್ಲಿ ಈ ವೈದ್ಯರುಗಳು ಸಂಪೂರ್ಣ ಪಾಲಿ ಕ್ಲಿನಿಕ್ ಕಡಬದಲ್ಲಿ ಸಂದರ್ಶನಕ್ಕೆ ಲಭ್ಯರಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.