ಪುತ್ತೂರು: ಕೂಲಿ ಕಾರ್ಮಿಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿಡ್ಪಳ್ಳಿ ಗ್ರಾಮದಲ್ಲಿ ನಡೆದಿದೆ.
ನಿಡ್ಪಳ್ಳಿ ಗ್ರಾಮದ ಶಿವಪ್ಪ ನಾಯ್ಕ(55ವ)ರವರು ಆತ್ಮಹತ್ಯೆ ಮಾಡಿಕೊಂಡವರು ಅವರು ಕಳೆದ ಸುಮಾರು 1 ವರ್ಷದಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು ಮಾನಸಿಕ ಖಿನ್ನತೆಗೊಳಗಾಗಿದ್ದರು.
ನ.27ರಂದು ಅವರು ನೆರೆಯ ಚಂದ್ರಶೇಖರ್ ಭಟ್ ಅವರ ಗುಡ್ಡೆಯ ಜಾಗದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತು ಶಿವಪ್ಪ ನಾಯ್ಕ ಅವರ ಪತ್ನಿ ಶೃತಿ ಕೆ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.