ಪುತ್ತೂರು: ಪುತ್ತೂರು ಅಟ್ಟಾ ಮುಟ್ಟ ನಾಟಕೋತ್ಸವ ಕಾರ್ಯಕ್ರಮದಲ್ಲಿ ವೀರಮಂಗಲದ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಂಗಗೀತೆಗಳನ್ನು ಹಾಡಿದರು
ರವೀಂದ್ರನಾಥ ಠಾಗೋರ್ ರಚಿಸಿದ ಪ್ರಾರ್ಥನಾ ಗೀತೆ ದೇವಿ ಭುವನ ಮನ ಮೋಹಿನಿ ಎಂಬ ಹಾಡಿನೊಂದಿಗೆ ಆರಂಭವಾಯಿತು. ಗೀತಗುಚ್ಛ ರಂಗಮಾಂತ್ರಿಕ ಬಿ ವಿ ಕಾರಂತರ ನಾಟಕಗಳಲ್ಲಿ ಪ್ರಯೋಗವಾದ ಜನಪ್ರೀಯ ಗೀತೆಗಳನ್ನು, ಬಾಸ ಕವಿಯ ಹಾಡುಗಳನ್ನು ಹಾಡಿದರು.

ಚಿಂತನ ವರ್ಷಾ ಶ್ರೀದೇವಿ, ಇಶಾನಿ ,ಆರಾದ್ಯ ಅನನ್ಯ, ವರ್ಷಾ, ಶ್ರೀಯಾ, ಹವೀಶ್ ಯಜ್ಞರೂಪ್ ಹಾಡಿಗೆ ಜೀವ ತುಂಬಿದರು. ಶಾಲಾ ಮುಖ್ಯ ಗುರು ತಾರಾನಾಥ ಸವಣೂರು ಇವರ ನೇತೃತ್ವದಲ್ಲಿ ರಂಗಾಯಣ ಕಲಾವಿದ ರಾಕೇಶ್ ಆಚಾರಿ ಬನಾರಿ ಇವರು ನಿರ್ದೇಶನ ಮಾಡಿದ್ದರು. ಹಾರ್ಮೋನಿಯಂನಲ್ಲಿ ಶಿವಗಿರಿ ಕಲ್ಲಡ್ಕ, ಡೋಲಕ್ ನಲ್ಲಿ ಪೃಥ್ವಿರಾಜ್ ಸಹಕರಿಸಿದರು.