ಕಡಬ: ಕುಂತೂರು ಪದವು ಸಂತ ಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಕಡಬ ತಾಲೂಕು 4ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬೆಳಿಗ್ಗೆ ರಾಷ್ಟ್ರ, ಪರಿಷತ್ತು ಹಾಗೂ ನಾಡ ಧ್ವಜಾರೋಹಣ ನೆರವೇರಿಸಲಾಯಿತು.
ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕೆ., ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ ದ ಕ ಜಿಲ್ಲಾಧ್ಯಕ್ಷ ಡಾ ಎಂ ಪಿ ಶ್ರೀನಾಥ್ ಅವರು ಪರಿಷತ್ತು ಹಾಗೂ ಕಡಬ ತಾಲೂಕು ಅಧ್ಯಕ್ಷ ಕೆ ಸೇಸಪ್ಪ ರೈ ಅವರು ನಾಡ ಧ್ವಜಾರೋಹಣ ನೆರವೇರಿಸಿದರು. ಕುಂತೂರು ಪದವು ಸಂತ ಜಾರ್ಜ್ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಗೀತೆ ಹಾಡಿದರು.

ಮಮತಾ ಶೆಟ್ಟಿ ಅಂಬರಾಜೆ ಸ್ವಾಗತಿಸಿ, ಕುಂತೂರು ಪದವು ಸಂತ ಜಾರ್ಜ್ ಅನುದಾನಿತ ಪ್ರೌಢಶಾಲೆಯ ಶಿಕ್ಷಕಿ ಭುವನೇಶ್ವರಿ ಪಿ ಯಂ ವಂದಿಸಿದರು. ಶಿಕ್ಷಕ ಕೇಶವ ಗೌಡ ನಿರೂಪಿಸಿದರು.