ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಲಕ್ಷದೀಪೋತ್ಸವದ ಪ್ರಯುಕ್ತ ದರ್ಬೆ ಸಮೃದ್ಧಿ ಮ್ಯೂಸಿಕಲ್ ನೈಟ್ ಸಂಸ್ಥೆ ಇದರ ವತಿಯಿಂದ ಪುತ್ತೂರು ಶ್ರೀ. ಶಾರದಾ ಭಜನಾ ಮಂದಿರದಲ್ಲಿ ಭಜನ್ ಗೀತೋತ್ಸವ ನ.30ರಂದು ಸಂಜೆ ಜರಗಿತು.
ಉದ್ಘಾಟನೆಯನ್ನು ಭಜನಾ ಮಂದಿರದ ಗೌರವಾಧ್ಯಕ್ಷ ಸೀತಾರಾಮ್ ರೈ ಕೆದಂಬಾಡಿಗುತ್ತು ನೆರವೇರಿಸಿದರು.
ಗಾಯನದಲ್ಲಿ ದರ್ಬೆ ಸಮೃದ್ಧಿ ಮ್ಯೂಸಿಕಲ್ ನೈಟ್ ಸಂಸ್ಥೆಯ ನಿರ್ದೇಶಕ ಶಿವಾನಂದ ಶೆಣೈ, ಪಲ್ಲವಿ ಆಚಾರ್, ಸಮೃದ್ಧಿ ಶೆಣೈ, ಕೃಷ್ಣ ಪ್ರಿಯಾ, ವೈಷ್ಣವಿ, ಮಾ. ವ್ರಶಾಂಕ್ ಶೆಣೈ,
ಹಿನ್ನಲೆ ಸಂಗೀತದ ಹಾರ್ಮೋನಿಯಂನಲ್ಲಿ ಲಿಂಗಪ್ಪ ಗೌಡ, ರಿದಂ ಪ್ಯಾಡ್ ಸಾಯಿರಾಂ ರಾವ್, ಜಯಂತ್ ಉರ್ಲಾಂಡಿ, ಸಹಕರಿಸಿದರು. ಬಳಿಕ ಸಂಸ್ಥೆಯ ಹಳೇ ವಿದ್ಯಾರ್ಥಿಗಳಾದ ಶ್ರೀಮತಿ ಗುಲಾಬಿ ಪಕೀರ ಗೌಡ ಇವರ ಮಕ್ಕಳಾದ ಹರಿಣಿ ಗೌಡ, ಕರಣ್ ಗೌಡರವರಿಂದ ಗುರುವಂದನ ಕಾರ್ಯಕ್ರಮ ಜರಗಿತು.