ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಯ ಗ್ರಾಮದ ಕಟ್ಟತ್ತಾರು ಎಂಬಲ್ಲಿ ನಿರ್ಮಾಣಗೊಂಡ ಬಸ್ಸು ತಂಗುದಾಣವು ಇತ್ತೀಚೆಗೆ ಉದ್ಘಾಟನೆಗೊಂಡಿತು.
ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಬಸ್ ತಂಗುದಾಣವನ್ನು ಉದ್ಘಾಟಿಸಿದರು. ಆರ್ಯಾಪು ಗ್ರಾ.ಪಂ ಸದಸ್ಯ ಬೂಡಿಯಾರು ಪುರುಷೋತ್ತಮ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜ್ಜಿಕಟ್ಟೆ ಜುಮ್ಮಾ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಮುಲಾರ್ ಸ್ವಾಗತಿಸಿದರು. ಅಜ್ಜಿಕಟ್ಟೆ ಮಸೀದಿಯ ಖತೀಬರಾದ ಇಸಾಕ್ ದಾರಿಮಿ ದುವಾ ಆಶೀರ್ವಾಚನ ನೀಡಿದರು. ಆರ್ಯಾಪು ಗ್ರಾ.ಪಂ. ಸದಸ್ಸ ಯಾಕೂಬ್ ವಂದಿಸಿದರು.
ಊರಿನ ಪ್ರಮುಖರಾದ ಉಸ್ಮಾನ್ ಅಜ್ಜಿಕಟ್ಟೆ, ಇಬ್ರಾಹಿಂ ಹಾಜಿ, ಬೂತ್ ಅಧ್ಯಕ್ಷ ಆಸೀಪ್ ಎ.ಆರ್, ಅಬ್ದುಲ್ಲಾ ಹಾಜಿ, ಮುಸ್ತಫಾ ಅಜ್ಜಿಕಟ್ಟೆ, ಮುಸ್ತಾಫ ಮುಲಾರು, ಮುಹಮ್ಮದ್ ಖಲಂದರ್, ಅಬ್ದುಲ್ ಮಜೀದ್, ನಝೀರ್ ಅರ್ಷದಿ, ಖಾಲಿದ್ ಮುಸ್ಲಿಯಾರ್, ರಶೀದ್ ಕೆ, ಲ್ಯಾನ್ಸಿ ಡಿ ಸೋಜ, ಜಬ್ಬಾರ್ ಎಂ.ಎಸ್ ಕುರಿಯ, ಅಬೂಬಕ್ಕರ್ ಹಾಜಿ ಕುರಿಯ, ಸುಲೈಮಾನ್ ಕುರಿಯ, ಶಫೀಕ್ ಕುರಿಯ, ಅರ್ಫಾಝ್ ಕುರಿಯ, ರವೂಫ್ ಕುರಿಯ, ಅಲ್ಪಸಂಖ್ಯಾತ ಅಧ್ಯಕ್ಷ ಸವಾದ್ ಕುರಿಯ, ಅರ್ಫಾನ್ ಸುಹೈಲ್, ಪವಾಝ್ ಎಂ., ಫವಾಝ್ ಕುರಿಯ, ಇಸುಬು ಮುಂತಾದವರು ಉಪಸ್ಥಿತರಿದ್ದರು.