ಪುತ್ತೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಬೊಳುವಾರಿನ ಸಪ್ತಸ್ವರ ಸಂಗೀತ ಕಲಾ ಶಾಲೆಯ 13ನೇ ವರ್ಷದ ವಾರ್ಷಿಕೋತ್ಸವ ಡಿ.8ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಭವನದಲ್ಲಿ ಜರುಗಲಿದೆ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗಾಯನ, ಗುರುವಂದನೆ ನಡೆಯಲಿದೆ. ಸಂಜೆ ವಿದ್ವಾನ್ ಕಸ್ತೂರಿರಂಗನ್ ಚೆನೈ ಅವರಿಂದ ಸಂಗೀತ ಕಚೇರಿ ನಡೆಯಲಿದೆ. ವಯಲಿನ್ನಲ್ಲಿ ವಿದ್ವಾನ್ ಡಾ. ಮುಲೈವಾಸಲ್ ಚಂದ್ರಮೌಳಿ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ ಈಶ್ವರ ಭಟ್, ಘಟಂ ನಲ್ಲಿ ವಿದ್ವಾನ್ ಶರತ್ ಕೌಶಿಕ್ ಮೈಸೂರು ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿ ರಮಾ ಪ್ರಭಾಕರ್ ತಿಳಿಸಿದ್ದಾರೆ.