ಪತ್ನಿಗೆ ದೈಹಿಕ, ಮಾನಸಿಕ, ವರದಕ್ಷಿಣೆಯ ಕಿರುಕುಳ ಆರೋಪ – ಗಂಡ ಸಹಿತ ಕುಟುಂಬದ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಿದ ಮಂಗಳೂರು ನ್ಯಾಯಾಲಯ

0

ಸಹಾಯಕ ಸರಕಾರಿ ಅಭಿಯೋಜಕ ಪುತ್ತೂರಿನ ಜನಾರ್ದನ್ ಸರಕಾರದ ಪರ ಸಮರ್ಥ ವಾದ ಮಂಡನೆ

ಪುತ್ತೂರು: ಮೂಳೂರು ಗ್ರಾಮ ಪಡ್ಡೆಯಿಪದವು ನಿವಾಸಿ ಮುಫೀಝ್ ಎಂಬಾತನು ತನ್ನ ತಂದೆ ಮಹಮ್ಮದ್, ಅಬ್ದುಲ್ ರಜಾಕ್, ಸಫಿಯ, ಮಿನಝೀರ ಅವರೊಂದಿಗೆ ಸೇರಿ ಪತ್ನಿಗೆ ವರದಕ್ಷಿಣೆ ತರುವಂತೆ ದೈಹಿಕ, ಮಾನಸಿಕ ಒತ್ತಡ ಮತ್ತು ಕಿರುಕುಳ ನೀಡಿ ತನ್ನ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದರು. ಒಂದನೇ ಆರೋಪಿತನ ಪತ್ನಿ ಬಸುರಿಯಾಗಿದ್ದಾಗ ಕೂಡಾ ಆರೋಪಿಗಳು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿ ನೊಂದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಸಮಯ ಹೆಣ್ಣು ಮಗು ಅಪಶಕುನ ಎಂದು ಅವಹೇಳನ ಮಾಡಿ ಮಾನಸಿಕ ಕಿರುಕುಳ ನೀಡಿದ ಬಗ್ಗೆ ನೊಂದ ಮಹಿಳೆಯ ತಂದೆ ಬಜಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ: 43/2020ರಲ್ಲಿ ಕಲಾಂ 498(A) IPC & ಕಾಲಂ 3 ಮತ್ತು 4 ಡಿ. ಪಿ ಕಾಯ್ದೆ ಪ್ರಕಾರ ದೂರು ದಾಖಲಿಸಿದ್ದರು. ಆಗಿನ ಪೋಲಿಸ್ ನಿರೀಕ್ಷಕ ಕೆ.ಆರ್ ನಾಯ್ಕ್ ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಮಂಗಳೂರಿನ ಆರನೇ JMFC ನ್ಯಾಯಾಲಯದ ನ್ಯಾಯಾಧೀಶರಾದ ಪೂಜಾಶ್ರೀ H.S ಅವರು ಆರೋಪಿಗಳ ವಿರುದ್ಧ ಹೊರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಶಿಕ್ಷೆಯ ಪ್ರಮಾಣ ಕಲಂ 498(ಚಿ)ರ ಅಪರಾಧಕ್ಕೆ ಒಂದನೇ ಆರೋಪಿಗೆ 6 ತಿಂಗಳು ಜೈಲು ವಾಸ ಮತ್ತು 2೦೦೦ ರೂಪಾಯಿ ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ ಹದಿನೈದು ದಿನಗಳ ಜೈಲು ವಾಸ, 2ರಿಂದ 4 ಆರೋಪಿಗಳಿಗೆ 2 ತಿಂಗಳೂ ಜೈಲು ವಾಸ ಮತ್ತು ತಲಾ 500 ರೂಪಾಯಿ ದಂಡ ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3ರಲ್ಲಿನ ಅಪರಾಧಕ್ಕೆ ಒಂದನೇ ಆರೋಪಿ ಮೂಫೀಝ್ ಗೆ 6 ತಿಂಗಳು ಜೈಲು ವಾಸ ಮತ್ತು 5೦೦೦ ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ ಹದಿನೈದು ದಿನ ಗಳ ಜೈಲು ವಾಸ ಇದೇ ಅಪರಾಧಕ್ಕೆ 2 ರಿಂದ 4 ಆರೋಪಿಗಳಿಗೆ 2 ತಿಂಗಳು ಜೈಲುವಾಸ ಮತ್ತು 1500 ರೂಪಾಯಿ ದಂಡ,ದಂಡ ತೆರಲು ತಪ್ಪಿದಲ್ಲಿ ಮತ್ತೆ ಹದಿನೈದು ದಿನಗಳ ಜೈಲು ವಾಸ, ಕಲಂ 4 ವರದಕ್ಷಿಣೆ ನಿಷೇಧ ಕಾಯ್ದೆ ಪ್ರಕಾರ ಅಪರಾಧಕ್ಕೆ ಒಂದನೇ ಆರೋಪಿ ಮೂಫೀಜ್ ಗೆ 6 ತಿಂಗಳೂ ಜೈಲು ವಾಸ ಮತ್ತು 3000 ರೂಪಾಯಿ ದಂಡ ದಂಡ ತೆರಲು ತಪ್ಪಿದಲ್ಲಿ ಮತ್ತೆ ಹದಿನೈದು ದಿನಗಳ ಜೈಲು ವಾಸ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ದಂಡ ಪ್ರಕ್ರಿಯಾ ಸಂಹಿತೆ ಕಲಂ,357 ರಂತೆ 1೦೦೦೦ ರೂಪಾಯಿ ಯನ್ನು ಸಂತ್ರಸ್ತೆ, ನೊಂದ ಮಹಿಳೆಗೆ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಪುತ್ತೂರು ಅವರು ವಾದಿಸಿದ್ದಾರೆ. ಜನಾರ್ದನ್ ಅವರು ಈ ಹಿಂದೆ ಸುಳ್ಯ ನ್ಯಾಯಾಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿದ್ದರು. ಅಲ್ಲಿಯೂ ಬಹಳಷ್ಟು ಪ್ರಕರಣಗಳಲ್ಲಿ ಸರಕಾರದ ಪರವಾಗಿ ವಾದಿಸಿ ಜನ ಮೆಚ್ಚುಗೆಯನ್ನು ಪಡೆದಿದ್ದರು. ಮಂಗಳೂರಿನಲ್ಲಿಯೂ ಇವರು ವಾದಿಸಿದ ಹಲವಾರು ಗಾಂಜಾ ಪ್ರಕರಣಗಳು, ಅಪಘಾತ ಪ್ರಕರಣಗಳು, ಮಹಿಳೆಯರ ಮಾನಭಂಗ ಪ್ರಕರಣ, ವಂಚನೆ ಪ್ರಕರಣ ಸೇರಿದಂತೆ ಹಲವು ಪ್ರಕರಗಳಲ್ಲಿ ಸಮರ್ಥ ರೀತಿಯಲ್ಲಿ ವಾದ ಮಂಡಿಸಿ ನೊಂದವರಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿ ಆಗಿದ್ದಾರೆ.

LEAVE A REPLY

Please enter your comment!
Please enter your name here