ಚಾರ್ವಾಕ: ಅಡಿಕೆ ಎಲೆಚುಕ್ಕಿ ರೋಗ, ಹಸಿರು ಹುಲ್ಲಿನ ನಿರ್ವಹಣೆಯ ಮಾಹಿತಿ ಶಿಬಿರ

0

ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸಿ ಪಿ ಸಿ ಆರ್ ಐ ವಿಟ್ಲ ಮತ್ತು ಕೆ.ಎಂ.ಎಫ್ ಸಹಭಾಗಿತ್ವದಲ್ಲಿ ಅಡಿಕೆ ಎಲೆ ಚುಕ್ಕಿ ರೋಗದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಹಸಿರು ಹುಲ್ಲಿನ ನಿರ್ವಹಣೆಯ ಬಗ್ಗೆ ಮಾಹಿತಿ ಶಿಬಿರವು ಡಿ 11ರಂದು ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲುರಾಯರವರು ಉದ್ಘಾಟಿಸಿ ಶುಭಹಾರೈಸಿದರು. ಅಡಿಕೆ ಎಲೆ ಚುಕ್ಕಿ ರೋಗದ ಬಗ್ಗೆ ಮಾಹಿತಿ ನೀಡಿದ ಹಿರಿಯ ವಿಜ್ಞಾನಿ ಸಿ ಪಿ ಸಿ ಆರ್ ಐ ವಿಟ್ಲ ದ ಡಾ. ನಾಗರಾಜ್, ಎಲ್ಲಾ ರೋಗಕ್ಕೂ ಮೂಲ ಕಾರಣ ಪೋಷಕಾಂಶಗಳ ಕೊರತೆ. ಸರಿಯಾಗಿ ಮಣ್ಣು ಪರೀಕ್ಷೆ ಮಾಡಿ ಗಿಡಗಳಿಗೆ ಪೋಷಕಾಂಶ ನೀಡಬೇಕೆಂದರು. ಅಡಿಕೆ ತೋಟಕ್ಕೆ ಬಾಧಿಸುವ ಎಲ್ಲಾ ರೋಗಕ್ಕೂ ಮದ್ದುಗಳನ್ನು ನಮ್ಮ ವಿಜ್ಞಾನಿಗಳು ಕಂಡು ಹಿಡಿಯುತ್ತಾರೆ ಎಂದು ಭರವಸೆ ನೀಡಿದ ಅವರು ರೈತರು ಆತಂಕ ಪಡದೆ ರೋಗನಿರೋಧಕ ತಳಿಗಳನ್ನು ನಾಟಿ ಮಾಡಿ ಅಲ್ಲದೆ ಎಲೆ ಚುಕ್ಕಿ ರೋಗಕ್ಕೆ ಕೇಂದ್ರ ಸರಕಾರ ಶಿಫಾರಸ್ ಮಾಡಿದ ಮದ್ದುಗಳ ಬಗ್ಗೆ ಮಾಹಿತಿ ನೀಡಿದರು.‌

ಹಸಿರು ಹುಲ್ಲಿನ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದ ಮಂಗಳೂರು. ಎಂ. ಎಫ್ ನ ಉಪ ವ್ಯವಸ್ಥಾಪಕಿ ಶ್ರುತಿ, ಮಂಗಳೂರು ಖಾಲಿ ಜಾಗ ಮತ್ತು ಅಡಿಕೆ ತೋಟಗಳ ಮಧ್ಯೆ ಬೇರೆ ಬೇರೆ ತಳಿಯ ಹುಲ್ಲಿನ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಅಲ್ಲದೆ ಕೆಎಂಎಫ್ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಪಿ ಎಲ್ ಡಿ ಬ್ಯಾಂಕ್ ನ ನಿರ್ದೇಶಕ ದೇವಯ್ಯ ಕಂಡಿಗ, ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ಕುಸುಮಾದರ ಇಡ್ಯಡ್ಕ, ನಿಕಟ ಪೂರ್ವ ಅಧ್ಯಕ್ಷ ಧನಂಜಯ ಕೇನಾಜೆ, ನಿಕಟಪೂರ್ವ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ಕಾರ್ಯದರ್ಶಿ ದಮಯಂತಿ ಮುದುವ, ಹಾಗೂ ಸಂಘದ ನಿರ್ದೇಶಕರು, ಸದಸ್ಯರು, ಮತ್ತು ಗ್ರಾಮಸ್ಥರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ ಸ್ವಾಗತಿಸಿ, ನಿರ್ದೇಶಕ ವಸಂತ ದಲಾರಿಯವರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here