ಪುತ್ತೂರು: ವೈದ್ಯಕೀಯ ತಜ್ಞ ಡಾ|ನಝೀರ್ ಅಹಮ್ಮದ್ ಡಯಾಬೆಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರಾಕ್ಟ್ ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣಾ ಶಿಬಿರ, ಉಚಿತ ಮಧುಮೇಹ(GRBS),HBA1Cಯು ಡಿ.11 ರಂದು ಕಲ್ಲಾರೆ ಕೃಷ್ಣಾ ಆರ್ಕೆಡ್ನಲ್ಲಿರುವ ಡಾ|ನಝೀರ್ ಅಹಮ್ಮದ್ರವರ ಕ್ಲಿನಿಕ್ನಲ್ಲಿ ನಡೆಯಿತು.
ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಹೆಂಗಸರಿಗೆ ಅತಿಯಾದ ಮಾಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡವುಳ್ಳವರು ಶಿಬಿರದಲ್ಲಿ ಪಾಲ್ಗೊಂಡು ಡಾ.ನಝೀರ್ ಅಹಮದ್ ರವರಲ್ಲಿ ಸಲಹೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ.ಎ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್ ಗೋಪಾಲ್ ಬಲ್ಲಾಳ್, ಮಾಜಿ ಅಧ್ಯಕ್ಷ ಜೈರಾಜ್ ಭಂಡಾರಿ, ಸದಾನಂದ ನಾಯ್ಕ್, ರೋಟರ್ಯಾಕ್ಟ್ ಪುತ್ತೂರು ಇದರ ಶಶಿಧರ್ ಮಾವಿನಕಟ್ಟೆ, ನವೀನ್ ರೈ ಬನ್ನೂರು ಹಾಗೂ ನಿವೃತ್ತ ಎ.ಎಸ್.ಐ ಆನಂದ ಪೂಜಾರಿರವರು ಉಪಸ್ಥಿತರಿದ್ದರು.
ಮೆಕ್ಲಾಯಿಡ್ ಕಂಪೆನಿಯ ವೀರೇಂದ್ರ, ಟೊರೆಂಟ್ ಕಂಪೆನಿಯ ಚೇತನ್ ಶೆಟ್ಟಿ, ಸನ್ ಫಾರ್ಮಾದ ಗೌತಮ್, ಅಗಿಲಾಸ್ ಲ್ಯಾಬಿನ ಸಿಬ್ಬಂದಿ, ಡಾ.ನಝೀರ್ ಅಹಮದ್ ಡಯಾಬಿಟಿಸ್ ಸೆಂಟರ್ ನ ಸಿಬ್ಬಂದಿ ಸಹಕರಿಸಿದರು.
ಪಾಲ್ಗೊಂಡ ಫಲಾನುಭವಿಗಳು..
ಥೈರಾಯಿಡ್ ಪರೀಕ್ಷೆ-57 ಮಂದಿ
HBA1C-40 ಮಂದಿ
ಮಧುಮೇಹ-50 ಮಂದಿ