ಪುತ್ತೂರು: ಬುಡಕನ್ ಕರಾಟೆ ಇಂಟರ್ನ್ಯಾಷನಲ್ ಇದರ ವತಿಯಿಂದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀಯಂ ಕೆ ಎಸ್ ಅವರು ಕಟಾ ಮತ್ತು ಕುಮಿಟೆ, ಗ್ರೂಫ್ ಕಟಾದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಪುತ್ತೂರು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್‌ನ ವಿದ್ಯಾರ್ಥಿಯಾದ ಇವರು ಕರಾಟೆ ಶಿಕ್ಷಕ ಸುರೇಶ್ ಎಂ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಅಂಬಿಕಾ ಸಿಬಿಎಸ್‌ನ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿರುವ ಇವರು ಸುಧೀರ್ ಕೆ ವೈ ಮತ್ತು ಅಶ್ವಿನಿ ದಂಪತಿ ಪುತ್ರ.