ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ-ಕಾಣಿಯೂರು ವಲಯದ ಮಾದರಿ ದಂಪತಿಗಳಿಗೆ ಸನ್ಮಾನ

0

ಕಾಣಿಯೂರು: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು, ದಶಮಾನೋತ್ಸವ ಸಮಿತಿಯ ಸಹಯೋಗದೊಂದಿಗೆ ಒಕ್ಕಲಿಗ ಸ್ವಸಹಾಯ ಒಕ್ಕೂಟ, ಯುವ ಸಂಘ, ಮಹಿಳಾ ಸಂಘ ಗ್ರಾಮ ಸಮಿತಿಗಳ ಸಹಕಾರದೊಂದಿಗೆ ಒಕ್ಕಲಿಗ ಟ್ರಸ್ಟ್ ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಒಕ್ಕಲಿಗ ಸ್ವ ಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನದ ಐವತ್ತು ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾಣಿಯೂರು ಗ್ರಾಮದ 11 ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಪುಣ್ಚತ್ತಾರು ಶ್ರೀಹರಿ ಭಜನಾ ಮಂದಿರದಲ್ಲಿ ಡಿ.15ರಂದು ನಡೆಸಲಾಯಿತು.

ಕಾರ್ಯಕ್ರಮವನ್ನು ಪೈಕ ಕರಿಮಜಲು ಗ್ರಾಮ ದೈವಸ್ಥಾನದ ಅನುವಂಶೀಯ ಮೊಕ್ತೇಸರ ಪುಟ್ಟಣ್ಣ ಗೌಡ ಪೈಕ ಅವರು ಉದ್ಘಾಟಿಸಿ ಶುಭಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಣಿಯೂರು ಒಕ್ಕಲಿಗ ಸ್ವ.ಸಹಾಯ ಸಂಘಗಳ ಒಕ್ಕೂಟ ಇದರ ಅಧ್ಯಕ್ಷ ಶಿವಾನಂದ ಗೌಡ ಪುಣ್ಚತ್ತಾರು ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಒಕ್ಕಲಿಗ ಸ್ವ. ಸಹಾಯ ಟ್ರಸ್ಟ್ ನ ಉಪಾಧ್ಯಕ್ಷರಾದ ಪ್ರವೀಣ್ ಕುಂಟ್ಯಾನ, ದಶಮಾನೋತ್ಸವ ಸಮಿತಿ ಅಧ್ಯಕ್ಷರಾದ ಗೋಪಾಲ ಕೃಷ್ಣ ಪಟೇಲ್, ಒಕ್ಕೂಟದ ಕಾರ್ಯದರ್ಶಿ ಲಕ್ಷ್ಮಣ ಗೌಡ ಮುಗರಂಜ, ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಗೌಡ ಇಡ್ಯಡ್ಕ, ಶೇಷಪ್ಪ ಗೌಡ ಬೆದ್ರಂಗಳ, ರೋಹಿತ್ ಅನಿಲ ರಾಮಣ್ಣ ಗೌಡ ಮೂಡಾಯಿಮಜಲು, ಮೇಲ್ವಿಚಾರಕರಾದ ವಿಜಯ ಕುಮಾರ್ ಪ್ರೇರಕರಾದ ಗಣೇಶ್ ಕುದ್ಮಾರು ಉಪಸ್ಥಿತರಿದ್ದರು. ನೀಲಮ್ಮರವರು ಸ್ವಾಗತಿಸಿದರು. ಮೇಲ್ವಿಚಾರಕರಾದ ವಿಜಯ ಕುಮಾರ್ ಕಾರ್ಯಕ್ರಮ ನಿರೂಸಿದರು. ಪ್ರೇರಕರಾದ ಗಣೇಶ್ ಕುದ್ಮಾರು ವಂದಿಸಿದರು.

ಮಾದರಿ ದಂಪತಿಗಳಿಗೆ ಸನ್ಮಾನ

ತಿಮ್ಮಪ್ಪ ಗೌಡ ಮತ್ತು ನೀಲಮ್ಮ ಕಟ್ಟತ್ತಾರು, ನಾರ್ಣಪ್ಪ ಗೌಡ ಮತ್ತು ಸೇಸಮ್ಮ ಅನಿಲ, ಬಾಲಕೃಷ್ಣ ಗೌಡ ಮತ್ತು ಸುಶೀಲಾ ಕೋಳಿಗದ್ದೆ, ಬಾಲಪ್ಪ ಗೌಡ ಮತ್ತು ಕಮಲ ಮಾಳ, ಈಶ್ವರ ಗೌಡ ಮತ್ತು ಲಲಿತಾ ಬೆದ್ರಂಗಳ, ನಾರ್ಣ ಪ್ಪ ಗೌಡ ಮತ್ತು ಎಲ್ಯಕ್ಕ ಗುಂಡಿಗದ್ದೆ, ಮುತ್ತಪ್ಪ ಗೌಡ ಮತ್ತು ಪುಷ್ಪಾವತಿ ನಾವೂರು, ಜಿನ್ನಪ್ಪ ಗೌಡ ಮತ್ತು ಗಿರಿಜಾ ಕಡಿರ, ನೇಮಣ್ಣ ಗೌಡ ಮತ್ತು ಲಕ್ಷ್ಮೀ ಕರಿಮಜಲು, ಪುಟ್ಟಣ್ಣ ಗೌಡ ಮತ್ತು ಕಮಲ ಕೊಳಂಬಾಲ, ಉಕ್ಕಣ್ಣ ಗೌಡ ಮತ್ತು ಲಕ್ಷ್ಮೀ ನಳಿಯಾರು ಸನ್ಮಾನ ಸ್ವೀಕರಿಸಿದರು.

LEAVE A REPLY

Please enter your comment!
Please enter your name here