





ನಿಡ್ಪಳ್ಳಿ: ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ವರ್ಷಾವಧಿ ಜಾತ್ರೋತ್ಸವ ಜ.19ರಿಂದ 24ರವರೆಗೆ ಜರಗಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಡಿ.15ರಂದು ಗುತ್ತು ಮನೆಯಲ್ಲಿ ನಡೆಯಿತು.


ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ ಎನ್.ಆರಿಗ ನಿಡ್ಪಳ್ಳಿ ಗುತ್ತು ಮತ್ತು ಮನೆಯವರು ಬಾರಿಕೆ ಮನೆಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.














