ಕಡಬ: ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಯಿಲ ಹಾಗೂ ಆಲಂಕಾರು ಗ್ರಾಮ ಪಂಚಾಯತ್ನ ಸಹಕಾರದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಎಲುಬು ಮತ್ತು ಮೂಳೆ ಚಿಕಿತ್ಸಾ ವಿಭಾಗ ಹಾಗೂ ಸಾಮಾನ್ಯ ರೋಗ ವಿಭಾಗದ ತಜ್ಞ ವೈದ್ಯರಿಂದ ವಿಶೇಷ ಚೇತನರ ಆರೋಗ್ಯ ತಪಾಸಣಾ ಶಿಬಿರ ಡಿ.17ರಂದು ಆಲಂಕಾರು ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.
ಆಲಂಕಾರು, ಪೆರಾಬೆ ಮತ್ತು ಕುಂತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂಡೋಪೀಡಿತರು ಹಾಗೂ ವಿಶೇಷಚೇತನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಕುಂತೂರು ಸಮುದಾಯ ಆರೋಗ್ಯ ಸುರಕ್ಷಾಧಿಕಾರಿ ರಮ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಆಲಂಕಾರಿನ ಸರೋಜಿನಿ, ಪೆರಾಬೆಯ ಲೀಲಾವತಿ, ವಿಶೇಷ ಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಆಲಂಕಾರು ಗ್ರಾ.ಪಂ.ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮೋನಪ್ಪ ಬರೆಪುದೇಲು, ಆಶಾ ಕಾರ್ಯಕರ್ತೆಯರಾದ ಡೀಕಮ್ಮ, ಮೀನಾಕ್ಷಿ, ಲಿಸ್ಸಿ, ಗಿರಿಜಾ, ಅಮೃತಾ, ವಿನೋದಿನಿ ಉಪಸ್ಥಿತರಿದ್ದರು.