ಶ್ರೀ ದೇವರ ಬೆಳ್ಳಿ ಕವಚ, ಶ್ರೀ ದೈವಗಳ ಪಲ್ಲಕಿಯ ಮೆರವಣಿಗೆ, ಹೊರೆಕಾಣಿಕೆಯ ಭವ್ಯ ಮೆರವಣಿಗೆ ದೇವಾಲಯಕ್ಕೆ ಹರಿದು ಬಂದ ಭಕ್ತಸಾಗರ
ಉಪ್ಪಿನಂಗಡಿ: ಶ್ರೀ ದೇವರ ಬೆಳ್ಳಿ ಕವಚ ಹಾಗೂ ಶ್ರೀ ದೈವಗಳ ಪಲ್ಲಕಿಯ ಮೆರವಣಿಗೆ ಹಾಗೂ ಹೊರೆ ಕಾಣಿಕೆಯ ಭವ್ಯ ಮೆರವಣಿಗೆಯು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಿಂದ ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯಲ್ಲಿ ಆಗಮಿಸಿ, ಸಾಮೂಹಿಕ ಪ್ರಾರ್ಥನೆ ನೆರವೇರಿಸುವುದರೊಂದಿಗೆ ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಆರು ದಿನಗಳ ಕಾಲ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಡಿ.18ರಂದು ವೈಭವದ ಚಾಲನೆ ದೊರೆತಿದೆ.
ಶ್ರೀ ದೇವರ ಬೆಳ್ಳಿಕವಚ, ಶ್ರೀ ದೈವಗಳ ಪಲ್ಲಕಿ, ಮೊಗ, ಕಡ್ಸಲೆಗಳು ಹಾಗೂ ಹಸಿರು ಹೊರೆ ಕಾಣಿಕೆಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯು ಆರಂಭವಾಯಿತು. ರಥಬೀದಿಯಾಗಿ ಹೊರಟ ಮೆರವಣಿಗೆಯು ಪೇಟೆ ರಸ್ತೆಯಾಗಿ ಬಳಿಕ ರಾಷ್ಟ್ರೀಯ ಹೆದ್ದಾರಿಯ ಮೂಲಕ ಪದಾಳ ದೇವಸ್ಥಾನಕ್ಕೆ ಸಾಗಿ ಬಂತು. ಚೆಂಡೆ ತಂಡದ ಹಿಂದೆ ಶ್ರೀ ದೇವರ ಬೆಳ್ಳಿಕವಚ, ಶ್ರೀ ದೈವಗಳ ಪಲ್ಲಕಿ, ಮೊಗ, ಕಡ್ಸಲೆಗಳನ್ನು ಹೊತ್ತ ವಾಹನಗಳು ಸಾಗಿ ಬಂದರೆ, ಅದರ ಹಿಂದೆ ಹಸಿರು ಹೊರೆ ಕಾಣಿಕೆಗಳನ್ನು ಹೊತ್ತ ಸಾಲು ಸಾಲು ವಾಹನಗಳು ಆಗಮಿಸಿದವು. ಭಗವಾಧ್ವಜದೊಂದಿಗೆ ಕೇಸರಿ ಶಾಲು ಹಾಕಿದ ನೂರಾರು ಮಾತೆಯರು, ಪುರುಷರು ಮೆರವಣಿಗೆಯುದ್ದಕ್ಕೂ ಕಾಲ್ನಡಿಗೆಯಲ್ಲಿ ಸಾಗಿ ಬಂದರು. ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೆರವಣಿಗೆ ಆಗಮಿಸಿದ ಬಳಿಕ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಬಳಿಕ ಉಗ್ರಾಣ ಮುಹೂರ್ತ ನಡೆದು, ಊರ ಪರವೂರ ಭಕ್ತರು ಹಸಿರು ಹೊರೆ ಕಾಣಿಕೆಯನ್ನು ದೇವಾಲಯಕ್ಕೆ ಸಮರ್ಪಿಸಿದರು. ಮುಂಬೈಯ ಉದ್ಯಮಿ ಲಕ್ಷ್ಮಣ ಮಣಿಯಾಣಿ ಕಾರ್ಯಾಲಯ ಉದ್ಘಾಟಿಸಿದರು.
ಮಧ್ಯಾಹ್ನ ಮಹಾಪೂಜೆಯಾಗಿ, ಪ್ರಸಾದ ವಿತರಣೆಯಾಗಿ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ರಾತ್ರಿ ದೇವತಾ ಪ್ರಾರ್ಥನೆ ನಡೆದು ಶ್ರೀ ದೇವರಿಗೆ ಬೆಳ್ಳಿಯ ಕವಚ ಹಾಗೂ ಶ್ರೀ ದೈವಗಳಿಗೆ ಪಲ್ಲಕಿ, ಮೊಗ, ಕಡ್ಸಲೆಗಳನ್ನು ಸಮರ್ಪಿಸಲಾಯಿತು. ಬಳಿಕ ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಗರಣ, ಪ್ರಸಾದ ಶುದ್ಧಿ, ಅಂಕುರಾರೋಪಣ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆದು, ಅನ್ನಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ನಾಕ್ ‘ಮಯೂರ ಕಲಾ ವೇದಿಕೆ’ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ರಾತ್ರಿ ಶ್ರೀಮತಿ ಕುಸುಮಾ ಉದಯರಾವ್ ಮಣಿಕ್ಕಳ ಮತ್ತು ಕು. ಅಚಲಾ ರಾವ್ ಮಣಿಕ್ಕಳ ಇವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ನೃತ್ಯೋಪಸನಾ ಕಲಾ ಅಕಾಡಮಿ ಪುತ್ತೂರು ಇವರಿಂದ ವಿದುಷಿ ಶಾಲಿನಿ ಆತ್ಮಭೂಷಣ್ ಅವರ ನಿರ್ದೇಶನದಲ್ಲಿ ‘ನೃತ್ಯೋಹಂ’ ಹಾಗೂ ಪೆರಿಯಡ್ಕದ ಮಹಿಳೆಯರಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ನಡುಸಾರು ಜಯರಾಮ ಭಟ್ಟ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶ ರಾವ್ ಮಣಿಕ್ಕಳ, ಉಪಾಧ್ಯಕ್ಷರಾದ ಡಿ. ಚಂದಪ್ಪ ಮೂಲ್ಯ, ಡಾ. ರಾಜಾರಾಮ ಕೆ.ಬಿ., ನಟೇಶ್ ಪೂಜಾರಿ ಪುಳಿತ್ತಡಿ, ಉಷಾಚಂದ್ರ ಮುಳಿಯ, ಪ್ರಧಾನ ಕಾರ್ಯದರ್ಶಿ ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಗೌಡ ನೆಡ್ಚಿಲು, ಸುರೇಶ ಗೌಂಡತ್ತಿಗೆ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ನೆಡ್ಚಿಲು, ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಸುರೇಶ ಅತ್ರೆಮಜಲು, ಕಾರ್ಯದರ್ಶಿ ಕೇಶವ ರಂಗಾಜೆ, ಜೊತೆ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ಚಂದ್ರ ಮೊಗ್ರಾಲ್ ಕುವೆಚ್ಚಾರು, ಬಿ. ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೊಕೇಶ ಪೂಜಾರಿ ಬೆತ್ತೋಡಿ, ವಿಜಯಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ನವೀನ್ ಕುಮಾರ್ ಕಲ್ಯಾಟೆ, ಅವನೀಶ್ ಪಿ. ಪೆರಿಯಡ್ಕ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೇಶವ ನಾಯ್ಕ ಬೆತ್ತೋಡಿ, ಹೊನ್ನಪ್ಪ ಗೌಡ ವರೆಕ್ಕ, ಮುಣ್ಣಿಕ್ಕಾನ ವೆಂಕಟ್ರಮಣ ಭಟ್, ಈಶ್ವರಪ್ರಸಾದ ಆರ್ತಿಲ, ಜಗನ್ನಾಥ ಶೆಟ್ಟಿ ಕಜೆಕ್ಕಾರು, ಗಿರೀಶ್ ಆರ್ತಿಲ, ವಸಂತ ನಾಯ್ಕ ಬೊಳ್ಳಾವು, ಪದ್ಮನಾಭ ಬಲ್ಯಾರಬೆಟ್ಟು, ಮೇದಪ್ಪ ಕೋಡಿ, ಸುಜಿತ್ ಬೊಳ್ಳಾವು, ಸೇಸಪ್ಪ ಗೌಡ ಬೊಳ್ಳಾವು, ಪರಮೇಶ್ವರ ಕಂಪ, ರವಿ ಕೊಪ್ಪಳ, ಈಶ್ವರ ನಾಯ್ಕ ಪೆರಿಯಡ್ಕ, ಪ್ರಶಾಂತ ಯು. ಪೆರಿಯಡ್ಕ, ಹರಿಪ್ರಸಾದ್ ಕುವೆಚ್ಚಾರು, ಹರೀಶ್ವರ ಮಯ್ಯ ಕುವೆಚ್ಚಾರು, ಸುಬ್ರಾಯ ನಾಯಕ್ ಅಜಿರಾಳ, ಕಾಂತಪ್ಪ ಗೌಡ ಅಜಿರಾಳ, ಆರ್ಥಿಕ ಸಮಿತಿಯ ಸಂಚಾಲಕ ಧರ್ನಪ್ಪ ನಾಯ್ಕ ಬೊಳ್ಳಾವು, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಕಂಗ್ವೆ ವಿಶ್ವನಾಥ ಶೆಟ್ಟಿ, ಹರೀಶ ನಟ್ಟಿಬೈಲು, ಎಂ. ವೆಂಕಟ್ರಮಣ ಭಟ್ ಪಾದಾಳ, ಅಶೋಕ್ ಶೆಟ್ಟಿ ಕಜೆಕ್ಕಾರು, ಚಂದ್ರಶೇಖರ ಕೋಡಿ, ಪ್ರಹ್ಲಾದ್ ಪೆರಿಯಡ್ಕ, ಕೇಶವ ಕುಂಟಿನಿ, ಆದರ್ಶ ಶೆಟ್ಟಿ ಕಜೆಕ್ಕಾರು, ಆದೇಶ್ ಶೆಟ್ಟಿ ಉಪ್ಪಿನಂಗಡಿ, ಸ್ವಾಗತ ಸಮಿತಿಯ ಸಂಚಾಲಕ ಸುನೀಲ್ ಕುಮಾರ್ ದಡ್ಡು, ಸದಸ್ಯರಾದ ಆನಂದ ಗೌಡ ಕುಂಟಿನಿ, ಜಗದೀಶ ಶೆಟ್ಟಿ ಉಬಾರ್, ವಿದ್ಯಾಧರ ಜೈನ್, ಉಮೇಶ್ ಭಟ್ ತಂಟ್ಯ, ಹೊನ್ನಮ್ಮ, ಎನ್. ಶಿವ ಭಟ್ ಬಪ್ಪಳಿಗೆ, ಸುಜಾತಕೃಷ್ಣ, ಜಯಂತಿ ಮಂಜುನಾಥ ಭಟ್, ಹೇಮಲತಾ ಶೆಟ್ಟಿ ಕಜೆಕ್ಕಾರು, ಶೀನ ನೆಡ್ಚಿಲು, ವೆಂಕಪ್ಪ ಪೂಜಾರಿ ಮರುವೇಲು, ವಿಜಯಲಕ್ಷ್ಮೀ ಪೆರಿಯಡ್ಕ, ಮಾಲತಿ ಈಶ್ವರ ನಾಯ್ಕ, ಪದ್ಮಾವತಿ ರಂಗಾಜೆ, ಕಲಾವತಿ ಪರಕ್ಕಜೆ, ಸೀತಾರಾಮ ಆಚಾರ್ಯ ಪೆರಿಯಡ್ಕ, ಹೊರೆಕಾಣಿಕೆ ಸಮಿತಿಯ ಸಂಚಾಲಕ ಜಯಂತ ಪೊರೋಳಿ, ಸದಸ್ಯರಾದ ಚಂದ್ರಶೇಖರ ಮಡಿವಾಳ, ಬಾಲಕೃಷ್ಣ ಶರಣ್ಯ, ಉಮೇಶ್ ಕೋಡಿಜಾಲು, ಧರ್ನಪ್ಪ ಗೌಡ ವರೆಕ್ಕ, ಈಶ್ವರ ನಾಯ್ಕ ಪೆರಿಯಡ್ಕ, ಜಯಂತ ಬೆದ್ರೋಡಿ, ಗಂಗಾಧರ ಪಿ.ಎನ್. ಕೆಮ್ಮಾರ, ಸುಧಾಕರ ಕಣಿಯ, ಉಪೇಂದ್ರ ಕಿಂಡೋವು, ಅತುಲ್ ಕಶ್ಯಪ್ ತಾಳ್ತಜೆ, ವನಿತಾ ನೆಡ್ಚಿಲು, ಶೈಲಜಾ ಮೊಗ್ರಾಲ್ ಕೂವೆಚ್ಚಾರು, ಹೇಮವತಿ ಶೆಟ್ಟಿ ಕಜೆಕ್ಕಾರು, ಚಂದಪ್ಪ ಗೌಡ ಪಂಚೇರು, ರವಿ ಕಜೆಕ್ಕಾರು, ಸತೀಶ ನೆಡ್ಚಿಲು, ಮಹಾಲಿಂಗ ಕಜೆಕ್ಕಾರು, ಯೊಗೀಶ್ ನಿನ್ನಿಕಲ್ಲು, ಕಾಂತಪ್ಪ ಗೌಡ ಅಜಿರಾಳ, ಉಗ್ರಾಣ ಸಮಿತಿಯ ಸಂಚಾಲಕ ಕೃಷ್ಣಪ್ಪ ಗೌಡ ಬೊಳ್ಳಾವು, ಸದಸ್ಯರಾದ ಪದ್ಮನಾಭ ಗೌಡ ನೆಡ್ಚಿಲು, ರಾಮಚಂದ್ರ ನೆಡ್ಚಿಲು, ದೇವಪ್ಪ ಗೌಡ ಬೊಳ್ಳಾವು, ದಾಮೋದರ ಗೌಡ ಬೊಳ್ಳಾವು, ಹೊನ್ನಪ್ಪ ಗೌಡ ಬೊಳ್ಳಾವು, ನಿತಿನ್ ಬೊಳ್ಳಾವು, ವಿಶಾಂತ್ ಅತ್ರೆಮಜಲು, ರಮೇಶ ಗೌಡ ರಂಗಾಜೆ, ದಾಮೋದರ ಪಂಚೇರು, ಗಂಗಾಧರ ಪಂಚೇರು, ಕೃಷ್ಣಪ್ಪ ಗೌಡ ಪಂಚೇರು, ಚೆನ್ನಪ್ಪ ಗೌಡ ರಂಗಾಜೆ, ಹಾರ್ದಿಕ್ ಅತ್ರೆಮಜಲು, ಗಣೇಶ ಆಚಾರ್ಯ ಪೆರಿಯಡ್ಕ, ಚಿದಾನಂದ ಪಂಚೇರು, ಸ್ವಯಂ ಸೇವಕ ಸಮಿತಿಯ ಸಂಚಾಲಕರಾದ ಚಿದಾನಂದ ಪಂಚೇರು, ರಕ್ಷಿತ್ ಶೆಟ್ಟಿ ಕಜೆಕ್ಕಾರು, ಸಂದೇಶ ಕಜೆಕ್ಕಾರು, ರವಿ ಕಜೆಕ್ಕಾರು, ಯೋಗೀಶ ಆರ್ತಿಲ, ವಿಶಾಂತ್ ನಲಿಕೆಮಜಲ, ಚಂದ್ರಶೇಖರ ನಲಿಕೆಮಜಲು, ವಿಕಾಶ್ ಶೆಟ್ಟಿ ಕಜೆಕ್ಕಾರು, ಸುರೇಶ ನಲಿಕೆಮಜಲು, ಪ್ರದೀಪ್ ನೆಡ್ಚಿಲು, ಪುನೀತ್ ಮರುವೇಲು, ಜಿತೇಂದ್ರ ಶೆಟ್ಟಿ ಕಜೆಕ್ಕಾರು, ರಕ್ಷಿತ್ ಪೆರಿಯಡ್ಕ, ಸಚಿನ್ ಪೂಜಾರಿ, ಪ್ರಜ್ವಲ್ ಶೆಟ್ಟಿ ಕಜೆಕ್ಕಾರು, ಕಿರಣ್ ಗೌಂಡತ್ತಿಗೆ, ಉದಿತ್ ರಂಗಾಜೆ, ವಿಶ್ವನಾಥ ನಲಿಕೆಮಜಲು, ನವೀನ್ ಪೆರಿಯಡ್ಕ, ರಾಜೇಶ್ ಕೊಡಂಗೆ, ರೊಹೀತ್ ಪೆರಿಯಡ್ಕ, ತರುಣ್ ಶೆಟ್ಟಿ ಕಜೆಕ್ಕಾರು, ಪುರಂದರ ಶೆಟ್ಟಿ ಕಜೆಕ್ಕಾರು, ರವಿ ಕೊಪ್ಪಳ, ದುರ್ಗಾಪ್ರಸಾದ್ ಪೆರಿಯಡ್ಕ, ಚರಣ್ ಬಲ್ಯಾರಬೆಟ್ಟು, ಹರೀಶ್ ಪಟ್ಲ, ಕಾಂತಪ್ಪ ಗೌಡ ಅಜಿರಾಳ ಮತ್ತಿತರರು ಉಪಸ್ಥಿತರಿದ್ದರು.
ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಡಿ.19ರಂದು ಬೆಳಗ್ಗೆ 5ರಿಂದ ವೈದಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 7ರಿಂದ ಸಂಜೆ ಐದರವರೆಗೆ ದಿ. ನಡುಸಾರು ಜಯರಾಮ ಭಟ್ಟ ವೇದಿಕೆಯಲ್ಲಿ ಭಜನಾ ಸೇವೆ ನಡೆಯಲಿದೆ. ಮಯೂರ ವೇದಿಕೆಯಲ್ಲಿ ಬೆಳಗ್ಗೆ 10ರಿಂದ ಉಪ್ಪಿನಂಗಡಿಯ ಗಾನಭಾರತಿ ಸಂಗೀತ ಶಾಲೆಯವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ 12ರಿಂದ 2ಗಂಟೆಯವರೆಗೆ ರಾಮಕೃಷ್ಣ ಕಾಟುಕುಕ್ಕೆಯವರಿಂದ ದಾಸ ಸಂಕೀರ್ತನೆ, ಮಧ್ಯಾಹ್ನ 2ರಿಂದ ಸ್ಥಳೀಯರಿಂದ ಕಾರ್ಯಕ್ರಮ, ಸಂಜೆ 5ರಿಂದ 6:30ರವರೆಗೆ ಬಿ. ಸುಬ್ರಹ್ಮಣ್ಯ ಕಾರಂತ ಮತ್ತು ಬಳಗದವರಿಂದ ‘ಇಂಚರ’ ಸುಗಮ ಸಂಗೀತ ಕಾರ್ಯಕ್ರಮ, ರಾತ್ರಿ 7ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಶ್ರೀ ಕೇಶವ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೊ ಲಿ. ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ. ರಾತ್ರಿ 8:30ರಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 9:30ರಿಂದ ಗಯಾಪದ ಕಲಾವಿದರ ಉಬಾರ್ ಇವರಿಂದ ‘ನಾಗ ಮಾಣಿಕ್ಯ’ ತುಳು ನಾಟಕ ನಡೆಯಲಿದೆ.