ಪುತ್ತೂರು:ಷಣ್ಮುಖದೇವ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಡಿ.19ರಂದು ಕ್ರೀಡಾ ದಿನೋತ್ಸವ ನಡೆಯಿತು.
ಬೆಳ್ಳಾರೆ ಪೋಲಿಸ್ ಠಾಣೆ ಉಪನಿರೀಕ್ಷಕ ಈರಯ್ಯ ಡಿ ಎನ್ ಇವರು ಗೌರವ ವಂದನೆ ಸ್ವೀಕರಿಸಿ, “ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಅತೀ ಅಗತ್ಯ, ಮಕ್ಕಳಾದ ನೀವು ನಿಮ್ಮನ್ನು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ, ಸೋಲು ಗೆಲುವು ಸಾಮಾನ್ಯ ಭಾಗವಹಿಸುವಿಕೆ ಮುಖ್ಯ ನಿಮ್ಮ ಭವಿಷ್ಯ ಉಜ್ವಲವಾಗಲಿ “ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ತೀರ್ಥಾನಂದ ದುಗ್ಗಳ ಇವರ ಅಧ್ಯಕ್ಷತೆ ವಹಿಸಿ, “ವಿದ್ಯಾರ್ಥಿಗಳ ಬೆಳವಣಿಗೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ,ಎಲ್ಲರೂ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿ” ಎಂದರು .
ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಇವರು ಧ್ವಜಾರೋಹಣ ನೆರವೇರಿಸಿ “ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕಾದರೆ ಮಕ್ಕಳಿಗೆ ಆಟ ಪಾಠ ಎರಡೂ ಬೇಕು ಎಂದರು.
ಗ್ರಾಮಪಂಚಾಯತ್ ಕೊಳ್ತಿಗೆ ಇದರ ಸದಸ್ಯೆ ಯಶೋಧ ಬಾಬು ರಾಜೇಂದ್ರ ಇವರು ದೀಪ ಬೆಳಗಿಸಿ ಶುಭಹಾರೈಸಿದರು.ಮುಖ್ಯ ಅತಿಥಿ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸತೀಶ್ ಪಾಂಬಾರು, ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ ಶುಭಹಾರೈಸಿದರು.
ಶಾಲಾ ಆಡಳಿತ ಮಂಡಳಿಯ ನಿರ್ದೇಶಕರುಗಳು,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ರೇವತಿ ಮತ್ತು ಪದಾಧಿಕಾರಿಗಳು ,ಊರಿನ ಗಣ್ಯರು, ಪೋಷಕರು, ಕ್ರೀಡಾಭಿಮಾನಿಗಳು, ಶಾಲೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಿರೀಶ್ ಪಾದೆಕಲ್ಲು ಸ್ವಾಗತಿಸಿ,ಮುಖ್ಯ ಶಿಕ್ಷಕಿ ಕೃಷ್ಣವೇಣಿ ವಂದಿಸಿ,ದೈಹಿಕ ಶಿಕ್ಷಕ ಪ್ರಸಾದ್ ನಿರೂಪಿಸಿದರು.