ಪಜ್ಜಪು: ಕೊರಗಜ್ಜನ ಕಟ್ಟೆಯಲ್ಲಿ ಕಲಶಾಭಿಷೇಕ, ಆವರಣಗೋಡೆ ಲೋಕಾರ್ಪಣೆ

0

ರಾಮಕುಂಜ: ಗಾಣಂತಿ-ಪಜ್ಜಪು ಕೊರಗಜ್ಜನ ಕಟ್ಟೆಯಲ್ಲಿ ಗಣಹೋಮ, ಕಲಶಾಭಿಷೇಕ, ದೈವಸ್ಥಾನದ ಮುಚ್ಚಿಗೆ ಹಾಗೂ ಆವರಣಗೋಡೆ ಲೋಕಾರ್ಪಣೆ ಕಾರ್ಯಕ್ರಮ ಡಿ.15ರಂದು ನಡೆಯಿತು.


ಹಿಂದೂ ಸಂಘಟನೆ ಮುಖಂಡ ಅರುಣ್‌ಕುಮಾರ್ ಪುತ್ತಿಲ ಅವರು ಆವರಣಗೋಡೆ ಲೋಕಾರ್ಪಣೆ ಮಾಡಿದರು. ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿ ಶುಭಹಾರೈಸಿದರು. ಕೊರಗಜ್ಜನ ಕಟ್ಟೆ ಮೊಕ್ತೇಸರರಾದ ಕರುಣಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಆಲಂಕಾರು ಗ್ರಾ.ಪಂ.ಉಪಾಧ್ಯಕ್ಷ ರವಿ ಕುಂಞಲಡ್ಡ, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ಹಿಂದೂ ಜಾಗರಣ ವೇದಿಕೆ ಆಲಂಕಾರು ಘಟಕದ ಮಾಜಿ ಅಧ್ಯಕ್ಷ ಜಯಂತ ಪೂಜಾರಿ, ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರ್ಷಿತಾ ಶಾರದಾನಗರ ಸ್ವಾಗತಿಸಿದರು. ಪ್ರಕಾಶ್ ಕೆಮ್ಮಾರ ನಿರೂಪಿಸಿದರು.

LEAVE A REPLY

Please enter your comment!
Please enter your name here